ಲಖನೌ(ಏ.13): ಲಾಕ್‌ಡೌನ್‌ನಿಂದಾಗಿ ಎಲ್ಲೂ ಮದ್ಯ ಸಿಗದಂತಾಗಿರುವಾಗ ಹಾಗೂ ಇಡೀ ದೇಶ ಕೊರೋನಾ ವೈರಸ್‌ನ ಆತಂಕದಲ್ಲಿರುವಾಗ ಉತ್ತರ ಪ್ರದೇಶದ ಎರಡು ಕ್ವಾರಂಟೈನ್‌ ಕೇಂದ್ರಗಳಲ್ಲಿ ಮದ್ಯದ ಪಾರ್ಟಿ ನಡೆಸಿರುವ ಸಂಗತಿ ಬೆಳಕಿಗೆ ಬಂದಿದೆ.

ಅಯೋಧ್ಯಾ ಜಿಲ್ಲೆಯ ಚೌಧರಿಪುರ ಎಂಬ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕ್ವಾರಂಟೈನ್‌ ಕೇಂದ್ರ ಸ್ಥಾಪಿಸಲಾಗಿದೆ. ಅಲ್ಲಿರುವ ಕೊರೋನಾಪೀಡಿತರಿಗೆ ಗ್ರಾಮದ ಮುಖ್ಯಸ್ಥನೇ ಮದ್ಯ ಹಾಗೂ ಚಿಕನ್‌ ಪೂರೈಸಿ ಪಾರ್ಟಿ ನೀಡಿದ್ದಾನೆ.

ದೇಶದಲ್ಲಿ ಪೋಲಿ ಸಿನಿಮಾ ವೀಕ್ಷಣೆ ಶೇ. 95 ಹೆಚ್ಚಳ!

ಇಂತಹುದೇ ಘಟನೆ ಕೆಲ ದಿನಗಳ ಹಿಂದೆ ಎಟಾ ಜಿಲ್ಲಾಸ್ಪತ್ರೆಯ ಐಸೋಲೇಶನ್‌ ವಾರ್ಡ್‌ನಲ್ಲೂ ನಡೆದಿದೆ. ಎರಡೂ ಘಟನೆಗೆ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.