Asianet Suvarna News Asianet Suvarna News

ನಗುತ್ತಿದೆ ನಿಸರ್ಗ: ಗಂಗೆ ಸ್ವಚ್ಛವಾದ ಬೆನ್ನಲ್ಲೇ ಅಪರೂಪದ ಪ್ರಾಣಿ ಪ್ರತ್ಯಕ್ಷ!

ಲಾಕ್‌ಡೌನ್‌ನಿಂದ ಜನರಿಗೆ ಸಮಸ್ಯೆ, ಆದ್ರೆ ನಗುತ್ತಿದೆ ಪ್ರಕೃತಿ| ವಾಯು ಮಾಲಿನ್ಯ ಇಲ್ಲ, ನದಿ, ತೊರೆಗಳು ಫುಲ್‌ ಕ್ಲೀನ್ ಕ್ಲೀನ್| ಈಗ ಪ್ರತ್ಯಕ್ಷವಾಯ್ತು ಅಪರೂಪ್ದ ಪ್ರಾಣಿ
After Clean Air and Clearer Ganga Rare Snow Leopards Spotted in Uttarakhand
Author
Bangalore, First Published Apr 15, 2020, 5:39 PM IST
ನವದೆಹಲಿ(ಏ.15): ದೇಶದಾದ್ಯಂತ ಹೇರಲಾಗಿರುವ ಲಾಕ್‌ಡೌನ್ ಜನಜೀವನವನ್ನು ನಿಧಾನವಾಗಿಸಿರಬಹುದು, ಸಮಸ್ಯೆಗಳನ್ನುಂಟು ಮಾಡಿರಬಹುದು, ಮತ್ತೊಂದೆಡೆ ಪ್ರಕೃತಿ ಮಾತೆ ನಸು ನಗುತ್ತಿದ್ದಾಳೆ. ಗಾಳಿ ಸ್ವಚ್ಛವಾಗಿದ್ದು, ನದಿ- ಕೆರೆಗಳು ಶುದ್ಧವಾಗಿವೆ, ಜಲಚರಗಳು ನೆಮ್ಮದಿಯಿಂದ ಹರಿದಾಡುತ್ತಿವೆ. ಪ್ರಾಣಿ ಪಕ್ಷಿಗಳು ಆರಾಮಾಗಿ ಓಡಾಡಿ ಹಾರಾಡುತ್ತಿವೆ. ಈ ಲಾಕ್‌ಡೌನ್ ಅವಧಿಯಲ್ಲಿ ಒಂದೆಡೆ ದೇಶದ ಅತ್ಯಂತ ಮಲಿನ ನದಿಗಳೆಂದು ಕುಖ್ಯಾತಿ ಪಡೆದಿದ್ದ ಪವಿತ್ರ ಗಂಗಾ- ಯಮುನಾ ಶುದ್ಧವಾಗಿವೆ. ವಾಯು ಮಾಲಿನ್ಯವೂ ಕಡಿಮೆಯಾಗಿ ಹಿಮಾಚಲದ ಗಿರಿ ಶಿಖರ 200 ಕಿ. ಮೀ ದೂರದ ಜಲಂಧರ್‌ಗೆ ಕಾಣಿಸುತ್ತಿವೆ. ಇವೆಲ್ಲದರ ಬೆನ್ನಲ್ಲೇ ಇದೀಗ ಅಪರೂಪವಾಗಿ ಕಾಣ ಸಿಗುವ ಹಿಮ ಚಿರತೆ ಕಂಡು ಬಂದಿದೆ. 

ಗಂಗಾ ನದಿ ನೀರು ಈಗ ಕುಡಿಯಲು ಯೋಗ್ಯ: ಬರಿಗಣ್ಣಿಗೆ ಕಾಣುತ್ತಿವೆ ಜಲಚರಗಳು!

ಹೌದು ಉತ್ತರಾಖಂಡ್‌ನ ನಂದಾದೇವಿ ನ್ಯಾಷನಲ್ ಪಾರ್ಕ್‌ನಲ್ಲಿ ಅಪರೂಪದ ಹಿಮ ಚಿರತೆ ಜೋಡಿ ಕಂಡು ಬಂದಿದೆ. IFS ಅಧಿಕಾರಿ ಆಕಾಶ್ ಕುಮಾರ್ ವರ್ಮಾ ನಂದಾದೇವಿ ನ್ಯಾಷನಲ್ ಪಾರ್ಕ್‌ನ ನಿರ್ದೇಶಕ ಸೆರೆ ಹಿಡಿದ ಫೋಟೋಗಳನ್ನು ಟ್ವೀಟ್ ಮಾಡಿದ್ದು, ಇಂತಹ ದೃಶ್ಯ ಕಮಡು ಬಂದಾಗ ಬಹಳ ಖುಷಿಯಾಗುತ್ತದೆ ಎಂದಿದ್ದಾರೆ.

ತ್ಯಾಜ್ಯ ಹರಿಯುತ್ತಿಲ್ಲ, ಜನರೂ ಬರುತ್ತಿಲ್ಲ: ಗಂಗಾ, ಯಮುನಾ ಕ್ಲೀನ್ ಕ್ಲೀನ್! ಅಪರೂಪದ ಹಿಮ ಚಿರತೆಗಳಿಗಾಗೇ Global Snow Leopard and Ecosystem Protection ಸಂರಕ್ಷಣಾ ಕಾರ್ಯಕ್ರಮವೊಂದು ನಡೆಯುತ್ತದೆ. ಇದಕ್ಕೆ ಹಲವಾರು ರಾಷ್ಟ್ರಗಳು ಸದಸ್ಯರಾಗಿವೆ. ಅಲ್ಲದೇ ಅಂತರಾಷ್ಟ್ರೀಯ ಹಿಮ ಚಿರತೆ ದಿನ(ಅಕ್ಟೋಬರ್ 23) ಎಂದೂ ಆಚರಿಸಲಾಗುತ್ತದೆ. ಭಾರತವೂ ಕಳೆದ ವರ್ಷ ಈ ದಿಇನವನ್ನಾಚರಿಸಿತ್ತು. 
Follow Us:
Download App:
  • android
  • ios