Asianet Suvarna News Asianet Suvarna News

ಪುಟ್ಟ ಬಾಲಕನ ಜಾನಪದ ಹಾಡಿಗೆ ನೆಟ್ಟಿಗರು ಫಿದಾ... ವಿಡಿಯೋ ವೈರಲ್

 

  • ರಾಜಸ್ತಾನದ ಜಾನಪದ ಹಾಡು ಹಾಡಿದ ಬಾಲಕ
  • ಬಾಲಕನ ಸುಶ್ರಾವ್ಯ ಕಂಠಕ್ಕೆ ಮೆಚ್ಚುಗೆಯ ಮಹಾಪೂರ
  • ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
Little Boy from Marwar sings Rajasthani folk song watch viral video akb
Author
Bangalore, First Published Feb 2, 2022, 5:41 PM IST | Last Updated Feb 2, 2022, 5:41 PM IST

ಜೈಪುರ(ಫೆ.2): ಪುಟ್ಟ ಬಾಲಕನೋರ್ವ ರಾಜಸ್ತಾನದ ಜಾನಪದ ಹಾಡನ್ನು ಸುಶ್ರಾವ್ಯವಾಗಿ ಹಾಡುತ್ತಿರುವ ವಿಡಿಯೋವೊಂದು ಈಗ ವೈರಲ್‌ ಆಗಿದ್ದು, ಪುಟ್ಟ ಬಾಲಕನ ಮುದ್ದಾದ ಕಂಠಸಿರಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮರ್ವಾಡಿ ಸಮುದಾಯದ ಪುಟ್ಟ ಬಾಲಕನೋರ್ವ ರಾಜಸ್ತಾನದ ಜಾನಪದ ಹಾಡಿಗೆ ದನಿ ನೀಡಿದ್ದಾನೆ. ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಐಎಎಸ್ ಅಧಿಕಾರಿ ದೇವ್ ಚೌಧರಿ ( Dev Choudhary) ಪೋಸ್ಟ್ ಮಾಡಿದ್ದಾರೆ. ಇದನ್ನು ಈಗಾಗಲೇ 2.5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 

ಸಾಮಾಜಿಕ ಜಾಲತಾಣಗಳು ಹೆಚ್ಚು ಸಕ್ರಿಯವಾಗಿರುವ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ತಮ್ಮ ಪ್ರತಿಭೆಯ ಪ್ರದರ್ಶನಕ್ಕೆ ವೇದಿಕೆ ಸಿಗುತ್ತಿದೆ. ರಾತ್ರಿ ಬೆಳಗಾಗುವುದರೊಳಗೆ ಕೆಲವರು ಪ್ರಪಂಚದಾದ್ಯಂತ ಫೇಮಸ್‌ ಆಗುತ್ತಿದ್ದು, ಇದು ಸಾಮಾಜಿಕ ಜಾಲತಾಣಗಳು ಎಷ್ಟು ಪ್ರಭಾವಶಾಲಿ ಎಂಬುದಕ್ಕೆ ಸಾಕ್ಷಿಯಾಗಿದೆ. ಹೀಗೆ ಈಗ ಪುಟ್ಟ ಮಕ್ಕಳು ಡಾನ್ಸ್‌ ಮಾಡುವ, ಹಾಡು ಹಾಡುವ ಕೆಲವೊಂದು ವಿಡಿಯೋಗಳು ಈಗಾಗಲೇ ವೈರಲ್ ಆಗಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಎಲ್ಲರೂ ನೋಡಿರುತ್ತೀರಿ. ಅದೇ ರೀತಿ ಈ ಪುಟ್ಟ ಬಾಲಕನ ಹಾಡು ಕೂಡ ಈಗ ವೈರಲ್ ಆಗಿದ್ದು ಎಲ್ಲರೂ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ವಿಡಿಯೋದಲ್ಲಿರುವ ಪುಟ್ಟ ಹುಡುಗ ಈಗಾಗಲೇ ಜಾನಪದ ಕಲಾವಿದನಾಗಿದ್ದು, ರಾಜಸ್ತಾನಿ ಹಾಡುಗಳನ್ನು ಮಧುರವಾಗಿ ಹಾಡುತ್ತಾನೆ. ಈ ಪುಟ್ಟ ಬಾಲಕ ಕುರ್ತಾ ಹಾಗೂ ಪೈಜಾಮವನ್ನು ತೊಟ್ಟಿದ್ದು, ಕಪ್ಪು ಬಣ್ಣದ ಜಾಕೆಟ್‌ನ್ನು ಧರಿಸಿದ್ದಾನೆ. ಜೊತೆಗೆ ಸೊಗಸಾದ ರಾಜಸ್ತಾನಿ ಪೇಟ ತೊಟ್ಟಿದ್ದಾನೆ. ಈತನ ಜೊತೆ ಹರ್ಮೋನಿಯಂ ನುಡಿಸುವ ಹಾಗೂ ಡೊಲಕ್‌ ಬಾರಿಸುತ್ತಿರುವ ಇನ್ನಿಬ್ಬರು ವಿಡಿಯೋದಲ್ಲಿದ್ದಾರೆ. ಬಾಲಕ ಯಾವುದೇ ತೊಂದರೆ ಇಲ್ಲದೇ ಸುಮಧುರವಾಗಿ ಹಾಡು ಹಾಡುತ್ತಿದ್ದು, ಇದು ನೋಡುಗರ  ಹೃದಯವನ್ನು ತಂಪಾಗಿಸುವುದರಲ್ಲಿ ಎರಡು ಮಾತಿಲ್ಲ.

ಇಷ್ಟು ಚಿಕ್ಕಿ ವಯಸ್ಸಿನಲ್ಲಿ ಎಂಥಾ ಸುಂದರವಾದ ಹಾಡು, ನಮ್ಮ ಮರ್ವಾರಾದ ಜಾನಪದ ಕಲಾವಿದರು ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಸುಂದರವಾಗಿದೆ ಅಲ್ಲವೇ. ಈ ಪುಟ್ಟ ಬಾಲಕನಿಗೆ ಪ್ರೀತಿ ಹಾಗೂ ಆಶೀರ್ವಾದಗಳು, ಸರಳವಾಗಿ ಸುಂದರವಾಗಿದೆ ಎಂದು ನೋಡುಗರು ಈ ವಿಡಿಯೋ ಮೆಚ್ಚಿ ಕಾಮೆಂಟ್‌ ಮಾಡಿದ್ದಾರೆ. 

9 ವರ್ಷದ ಈತ ವಿಶ್ವದ ಶ್ರೀಮಂತ ಬಾಲಕ.. ಈತನ ಲೈಫ್‌ಸ್ಟೈಲ್ ನೋಡಿದ್ರೆ ಬೆರಗಾಗ್ತೀರಾ..!

ಕಲೆ ಎನ್ನುವುದು ರಕ್ತಗತವಾಗಿ ಬರುವುದು ನಿಜವೋ ಸುಳ್ಳೋ, ಆದರೆ ತಂದೆ ತಾಯಿ ಕಲೆಗೆ ಪ್ರೋತ್ಸಾಹ ನೀಡುವವರಾದರೆ ಮಕ್ಕಳು ಖಂಡಿತವಾಗಿ ಕಲಾವಿದರಾಗಬಲ್ಲರು.  ಅದಕ್ಕೆ ಉತ್ತಮ ಉದಾಹರಣೆ  ಭಾಸ್ವತಿ ಗೋಪಾಲಕಜೆ. ಕನ್ನಡ ಚಿತ್ರರಂಗಕ್ಕೆ ಹೊಸದಾಗಿ ಎಂಟ್ರಿ ನೀಡಿರುವ ಬಾಲನಟಿ ಈಕೆ.  ಭಾಸ್ವತಿಗೆ ಬಾಲ್ಯದಿಂದಲೂ ನೃತ್ಯ ಪ್ರಕಾರಗಳಲ್ಲಿ ಆಸಕ್ತಿ. ಅದಕ್ಕೆ ತಕ್ಕಂತೆ ಬಲು ಬೇಗ ಯಕ್ಷಗಾನ ಕಲಿತು ನಾಲ್ಕನೇ ವಯಸ್ಸಿನಲ್ಲಿದ್ದಾಗಲೇ ವೇದಿಕೆ ಏರಿದ್ದು, ಇದುವರೆಗೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾಳೆ.

ಪುಟ್ಟ ಬಾಲಕ ಏಣಿ ಇಳಿಯುವ ಸ್ಟೈಲ್ ನೋಡಿ... ವಿಡಿಯೋ ವೈರಲ್‌

ಬೇಗಾರ್ ಶಿವಕುಮಾರ್ ಅವರ ಬಳಿ ಯಕ್ಷಗಾನದ ಬಾಲಪಾಠಗಳನ್ನು ಕಲಿತ ಈಕೆ ಪ್ರಸ್ತುತ  ಸುಬ್ರಾಯ ಹೆಬ್ಬಾರ್ ಅವರ ವಿದ್ಯಾರ್ಥಿನಿ. ಭಾಸ್ವತಿ ಬಹುಮುಖ ಪ್ರತಿಭೆಯಾಗಿದ್ದು ಈಗಾಗಲೇ ಕರಾಟೆಯಲ್ಲಿ ಬ್ಲೂ ಬೆಲ್ಟ್ ಪಡೆದಿದ್ದಾಳೆ. ಸ್ಕೇಟಿಂಗ್ ಮಾಡುತ್ತಾಳೆ. ಗಾಯನ, ಚಿತ್ರಕಲೆ, ಕರಕುಶಲಕಲೆ, ನೃತ್ಯಗಳ ಮೂಲಕ ಗಮನ ಸೆಳೆದಿದ್ದಾಳೆ. ಕೃಷ್ಣ, ಅಭಿಮನ್ಯು, ಬಾಲಗೋಪಾಲ ಮೊದಲಾದ ಹಲವಾರು ಪಾತ್ರಗಳಿಗೆ ಜೀವ ತುಂಬಿದ್ದಾಳೆ.

Latest Videos
Follow Us:
Download App:
  • android
  • ios