ಈತ ಏಣಿ ಇಳಿಯುವ ಸ್ಟೈಲ್‌ ನೋಡಿ ಕಾರ್ಟೂನ್‌ ಬೊಂಬೆ ತರ ದರ ದರನೇ ಎಣಿ ಇಳಿಯುವ ಮಗು... ಕಾಲಲ್ಲ ಕೈಯಲ್ಲಿ ಏಣಿ ಇಳಿಯುವ ಪುಟ್ಟ ಪೋರ

ಪುಟ್ಟ ಬಾಲಕನೋರ್ವ ಏಣಿ ಇಳಿಯುತ್ತಿರುವ ವಿಶಿಷ್ಟ ಸ್ಟೈಲ್‌ ಈಗ ಸಾಮಾಜಿಕ ಜಾಲಲತಾಣದಲ್ಲಿ ವೈರಲ್‌ ಆಗಿದ್ದು ನಕ್ಕು ಉಕ್ಕಿಸುತ್ತಿದೆ. ಕಾರ್ಟೂನ್‌ ಗೊಂಬೆ ತರ ಬಾಲಕ ದರ ದರನೇ ಏಣಿ ಇಳಿಯುತ್ತಿದ್ದಾನೆ. ಅದರಲ್ಲೂ ಆತ ಏಣಿಯನ್ನು ಇಳಿಯುವ ಸ್ಟೈಲ್ ಮತ್ತಷ್ಟು ವಿಭಿನ್ನ, ಕಾಲನ್ನು ಸ್ವಲ್ಪವೂ ಬೆಂಡ್ ಮಾಡದ ಈ ಬಾಲಕ ಬರೀ ಕೈಯಲ್ಲೇ ಮರದ ಏಣಿಯ ಚಡಿಗಳನ್ನು ಹಿಡಿದು ಒಂಥರಾ ನೇತಾಡುವ ಸ್ಟೈಲ್‌ನಲ್ಲಿ ಏಣಿಯನ್ನು ಇಳಿಯುತ್ತಾನೆ. ಭಾರತೀಯ ಬಾಲಕನ ಈ ಪುಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಘಂಟಾ ಎನ್ನುವ ಇನ್ಸ್ಟಾಗ್ರಾಮ್‌ ಪೇಜ್‌ಲ್ಲಿ ಈ ವಿಡಿಯೋ ಪೋಸ್ಟ್‌ ಆಗಿದ್ದು, ಲಕ್ಷಾಂತರ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.

ಮೊದಲ ಮಹಡಿಯಲ್ಲಿರುವ ತನ್ನ ಮನೆಗೆ ಬಾಲಕ ಟೆರೇಸ್‌ ಮೇಲಿನಿಂದ ಏಣಿ ಇಳಿದು ಬರುತ್ತಾನೆ. ಅಲ್ಲದೇ ಈ ಮರದ ಪಟ್ಟಿಗಳನ್ನು ಹೊಡೆದು ಮಾಡಲಾಗಿರುವ ಈ ಏಣಿ ಸಣ್ಣ ಮಕ್ಕಳು ಬಳಸುವುದಕ್ಕೆ ಭಯ ಪಡುವಂತಿದೆ. ಆದಾಗ್ಯೂ ಈ ಬಾಲಕ ಆ ಏಣಿಯಲ್ಲಿ ಸೆಕೆಂಡ್‌ನಲ್ಲಿ ಜಾರು ಬಂಡಿಯಲ್ಲಿ ಬಂದಂತೆ ಕೆಳಗೆ ಬರುತ್ತಾನೆ. ನೋಡುಗರಿಗೆ ಬಾಲಕ ಎಲ್ಲಿ ಬಿದ್ದು ಬಿಡುವನೋ ಎಂಬ ಭಯವೂ ಆಗುತ್ತದೆ. ಆದರೆ ಬಾಲಕ ಮಾತ್ರ ಇದೆಲ್ಲಾ ಯಾವ ಲೆಕ್ಕ ನನಗೆ ಅನ್ನೋ ರೀತಿ ಪಂಟರ್‌ನಂತೆ ಇಳಿದು ಬರುವುದು ನೋಡಲು ಮಜಾವಾಗಿದೆ. ಅಲ್ಲದೇ ಮಗು ಕೆಳಗೆ ಬರುತ್ತಿದ್ದಂತೆ ಮಹಿಳೆಯೊಬ್ಬರು ಬಂದು ಮಗುವನ್ನು ಎತ್ತಿಕೊಳ್ಳುತ್ತಾರೆ. ಈ ವಿಡಿಯೋಗೆ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದು ನಗುವ ಇಮೋಜಿಯನ್ನು ಕಾಮೆಂಟ್ ಮಾಡಿದ್ದಾರೆ. 

View post on Instagram

ಇತ್ತೀಚೆಗೆ ಬಾಲಕಿಯೊಬ್ಬಳು ಪಂಚಿಂಗ್‌ನಿಂದಲೇ ಮರವನ್ನು ಉರುಳಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ವಯಸ್ಸಿನ ಆಧಾರದ ಮೇಲೆ ಮನುಷ್ಯರ ಶಕ್ತಿಯನ್ನು ಅಳೆಯಲಾಗದು ಎಂಬುದನ್ನುಈ 12 ವರ್ಷದ ಬಾಲಕಿಯೊಬ್ಬಳು ತೋರಿಸಿಕೊಟ್ಟಿದ್ದಳು. ಈಕೆ ತನ್ನ ಪಂಚಿಂಗ್‌ನಿಂದಲೇ ಕುಟ್ಟಿ ಕುಟ್ಟಿ ಮರವನ್ನು ಬೀಳಿಸುತ್ತಿದ್ದಾಳೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈ ಶಕ್ತಿಶಾಲಿ ಬಾಲಕಿಯ ಹೆಸರು ಎವ್ನಿಕಾ ಸಾದ್ವಕಾಸ್ (Evnika Saadvakass)ರಷ್ಯಾ ಮೂಲದ ಈ ಬಾಲಕಿ ಬಾಕ್ಸರ್‌ ಆಗಿದ್ದು, ಈಕೆ ಮರಕ್ಕೆ ಪಂಚ್‌ ಮಾಡುತ್ತಿರುವ ಈ ವಿಡಿಯೋ ಈಗ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. 

ಅಪ್ಪ ಅಮ್ಮನಿಗಾಗಿ ಹಾಡಿದ ಸರ್ಕಾರಿ ಶಾಲೆ ಪುಟ್ಟ ಬಾಲಕಿ... ಸುಶ್ರಾವ್ಯ ಕಂಠಕ್ಕೆ ಭೇಷ್ ಎಂದ ನೆಟ್ಟಿಗರು

ಎವ್ನಿಕಾ ತನ್ನ ತಂದೆಯಿಂದ ತರಬೇತಿ ಪಡೆದಿದ್ದಾಳೆ. ಆಕೆಯ ತಂದೆ ರುಸ್ಟ್ರಾಮ್ ಸಾದ್ವಾಕಾಸ್ (Rustram Saadvakass) ವೃತ್ತಿಪರ ಬಾಕ್ಸಿಂಗ್‌ (boxing) ತರಬೇತಿದಾರರಾಗಿದ್ದಾರೆ. ಇವರು ತಮ್ಮ ಮಗಳು ನಾಲ್ಕು ವರ್ಷದವಳಿದ್ದಾಗಲೇ ಆಕೆಗೆ ಬಾಕ್ಸಿಂಗ್‌ ಮೇಲಿದ್ದ ಆಸಕ್ತಿಯನ್ನು ಗುರುತಿಸಿ ತರಬೇತಿ ನೀಡಲು ಶುರು ಮಾಡಿದ್ದರು. ಎವ್ನಿಕಾ ನಾಲ್ಕು ವರ್ಷದವಳಿದ್ದಾಗಲೇ ಆಕೆಯ ಈ ಸುಂದರ ನಡೆಯನ್ನು ನಾನು ಗಮನಿಸಿದ್ದೆ. ಆಕೆ ತುಂಬಾ ಏಕಾಗ್ರತೆಯ ಜೊತೆ ಕಠಿಣ ಪರಿಶ್ರಮಿಯಾಗಿದ್ದು, ಇದು ಆಕೆಯ ಗುಣದ ಉತ್ತಮ ಲಕ್ಷಣವಾಗಿದೆ. ನಾನು ಆಗಲೇ ಆಕೆಯಲ್ಲಿ ಆ ಮೊದಲ ಆಸಕ್ತಿಯನ್ನು ಗಮನಿಸಿದ್ದು, ನಾನು ಅದನ್ನು ಅಭಿವೃದ್ಧಿಗೊಳಿಸಲು ನಿರ್ಧರಿಸಿದೆ ಎಂದು ಬಾಲಕಿಯ ತಂದೆ ಹೇಳಿದ್ದರು.

9 ವರ್ಷದ ಈತ ವಿಶ್ವದ ಶ್ರೀಮಂತ ಬಾಲಕ.. ಈತನ ಲೈಫ್‌ಸ್ಟೈಲ್ ನೋಡಿದ್ರೆ ಬೆರಗಾಗ್ತೀರಾ..!

ಎವ್ನಿಕಾ ಈಗ ತನ್ನ ಏಳು ಒಡಹುಟ್ಟಿದವರು ಮತ್ತು ತಂದೆಯೊಂದಿಗೆ ರಷ್ಯಾದ ವೊರೊನೆಜ್ (Voronezh area) ಪ್ರದೇಶದಲ್ಲಿ ವಾರಕ್ಕೆ ಐದು ಬಾರಿ ತರಬೇತಿ ನೀಡುತ್ತಾಳೆ. ಆಕೆಯ ತಾಯಿ, ಅನಿಯಾ ಸಾದ್ವಕಾಸ್ (Ania Saadvakass) ಮಾಜಿ ಜಿಮ್ನಾಸ್ಟ್ ಆಗಿದ್ದು, ಅವರ ತಾಯಿಯೊಬ್ಬರೇ ಅವರ ಕುಟುಂಬದಲ್ಲಿರುವ ಬಾಕ್ಸರ್ ಅಲ್ಲದ ಏಕೈಕ ವ್ಯಕ್ತಿ ಆಗಿದ್ದಾರೆ.