ದೇಶದಲ್ಲಿ ಇದೇ ಮೊದಲ ಬಾರಿಗೆ ಲಿಥಿಯಂ ಖನಿಜ ನಿಕ್ಷೇಪ ಪತ್ತೆಯಾಗಿದೆ. ಈ ಲಿಥಿಯಂ ಖನಿಜ ನಿಕ್ಷೇಪವೂ ಇಲೆಕ್ಟ್ರಿಕ್ ವಾಹನಗಳ ಬ್ಯಾಟರಿಗೆ ಅಗತ್ಯವಿರುವ ನಾನ್ ಫೆರಸ್ ಲೋಹ (ಕಬ್ಬಿಣ ಅಥವಾ ಉಕ್ಕು ಹೊರತಾದ ಲೋಹ) ವಾಗಿದೆ.
ಜಮ್ಮುಕಾಶ್ಮೀರ: ದೇಶದಲ್ಲಿ ಇದೇ ಮೊದಲ ಬಾರಿಗೆ ಲಿಥಿಯಂ ಖನಿಜ ನಿಕ್ಷೇಪ ಪತ್ತೆಯಾಗಿದೆ. ಈ ಲಿಥಿಯಂ ಖನಿಜ ನಿಕ್ಷೇಪವೂ ಇಲೆಕ್ಟ್ರಿಕ್ ವಾಹನಗಳ ಬ್ಯಾಟರಿಗೆ ಅಗತ್ಯವಿರುವ ನಾನ್ ಫೆರಸ್ ಲೋಹ (ಕಬ್ಬಿಣ ಅಥವಾ ಉಕ್ಕು ಹೊರತಾದ ಲೋಹ) ವಾಗಿದೆ. ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 5.9 ಮಿಲಿಯನ್ ಟನ್‌ನಷ್ಟು ಲಿಥಿಯಂ ನಿಕ್ಷೇಪಗಳನ್ನು ಕಂಡುಹಿಡಿಯಲಾಗಿದೆ ಎಂದು ಗಣಿ ಕಾರ್ಯದರ್ಶಿ ವಿವೇಕ್ ಭಾರದ್ವಾಜ್ ಹೇಳಿದ್ದಾರೆ. ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್‌ಐ) ನಡೆಸಿದ ಶೋಧನೆಯ ನಂತರ, ಜಮ್ಮು (Jammu) ಮತ್ತು ಕಾಶ್ಮೀರದ (Kashmir) ರಿಯಾಸಿ ಜಿಲ್ಲೆಯಲ್ಲಿ ಲಿಥಿಯಂ ನಿಕ್ಷೇಪಗಳು ಕಂಡುಬಂದಿವೆ ಎಂದು ಅವರು ಹೇಳಿದರು.
ಇದಕ್ಕೂ ಮೊದಲು ಗಣಿ ಸಚಿವಾಲಯವೂ ಇತ್ತೀಚಿನ ತಂತ್ರಜ್ಞಾನಗಳಿಗೆ ನಿರ್ಣಾಯಕವಾದ ಖನಿಜ ಸಂಪತ್ತನ್ನು ಪೂರೈಸಲು ಆಸ್ಟ್ರೇಲಿಯಾ ( Australia)ಮತ್ತು ಅರ್ಜೆಂಟೀನಾದಿಂದ (Argentina) ಲಿಥಿಯಂ ಸೇರಿದಂತೆ ಖನಿಜಗಳನ್ನು ಪಡೆಯಲು ಸರ್ಕಾರವು ಹಲವು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿತ್ತು. ಪ್ರಸ್ತುತ, ದೇಶವೂ ಲಿಥಿಯಂ (lithium), ನಿಕಲ್ (nickel) ಮತ್ತು ಕೋಬಾಲ್ಟ್ (cobalt) ನಂತಹ ಅನೇಕ ಖನಿಜಗಳಿಗೆ ಬೇರೆ ದೇಶಗಳ ಮೇಲೆ ಅವಲಂಬಿತವಾಗಿದೆ.
ನವದೆಹಲಿಯಲ್ಲಿ ನಡೆದ 62ನೇ ಕೇಂದ್ರ ಭೂ ವೈಜ್ಞಾನಿಕ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಮಾತನಾಡಿದ ಗಣಿ ಕಾರ್ಯದರ್ಶಿ ವಿವೇಕ್ ಭಾರದ್ವಾಜ್, ಮೊಬೈಲ್ ಫೋನ್ ಆಗಿರಲಿ ಅಥವಾ ಸೋಲಾರ್ ಪ್ಯಾನಲ್ ಆಗಿರಲಿ, ಎಲ್ಲೆಡೆಯೂ ಖನಿಜಗಳು ನಿರ್ಣಾಯಕವಾಗಿದ್ದು, ಉದಯೋನ್ಮುಖ ತಂತ್ರಜ್ಞಾನಗಳಿಗೆ ಅಭಿವೃದ್ಧಿಗೆ ಬಹಳ ಅಗತ್ಯವಾಗಿದೆ ಎಂದು ಹೇಳಿದ್ದರು. ಸ್ವಾವಲಂಬಿಯಾಗಲು, ದೇಶವು ನಿರ್ಣಾಯಕ ಖನಿಜಗಳನ್ನು ಕಂಡುಹಿಡಿಯುವುದು ಮತ್ತು ಅದನ್ನು ಸಂಸ್ಕರಿಸುವುದು ಬಹಳ ಮುಖ್ಯ. ಚಿನ್ನದ ಆಮದು ಕಡಿಮೆಯಾದರೆ, ನಾವು ಆತ್ಮ ನಿರ್ಭರ್ (ಸ್ವಾವಲಂಬಿ) ಆಗುತ್ತೇವೆ ಎಂದು ಅವರು ಹೇಳಿದರು.
ಮಸ್ಕಿ: ಖನಿಜ ಸಂಪತ್ತು ಲೂಟಿಗೆ ತಾಲೂಕಾಡಳಿತದಿಂದ ಬ್ರೇಕ್..!
ಆರ್ಥಿಕ ಪ್ಯಾಕೇಜ್ 4ನೇ ಕಂತು; ಕಲ್ಲಿದಲ್ಲು, ವಿದ್ಯುತ್ ಕ್ಷೇತ್ರ ಖಾಸಗೀಕರಣಕ್ಕೆ ನಿರ್ಧಾರ!
