ಹೆಲಿಕಾಪ್ಟರ್ ಮುಂದೆ ಸೆಲ್ಫಿ ತೆಗೆಯಲು ಹೋಗಿ ಸರ್ಕಾರಿ ಅಧಿಕಾರಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಕೇದರನಾಥದಲ್ಲಿ ನಡೆದಿದೆ.
ಡೆಹ್ರಾಡೂನ್: ಹೆಲಿಕಾಪ್ಟರ್ ಮುಂದೆ ಸೆಲ್ಫಿ ತೆಗೆಯಲು ಹೋಗಿ ಸರ್ಕಾರಿ ಅಧಿಕಾರಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಕೇದರನಾಥದಲ್ಲಿ ನಡೆದಿದೆ. ಮೃತ ಅಧಿಕಾರಿಯನ್ನು ಜಿತೇಂದ್ರ ಕುಮಾರ್ ಸೈನಿ ಎಂದು ಗುರುತಿಸಲಾಗಿದ್ದು, ಸೈನಿ ಉತ್ತರಾಖಂಡ್‌ನ (Uttarakhand) ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರದ ಹಣಕಾಸು ನಿಯಂತ್ರಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಸೆಲ್ಫಿ ತೆಗೆಯಲು ಮುಂದಾದ ಅವರು ಹೆಲಿಕಾಪ್ಟರ್ ಸಮೀಪ ಬಂದಿದ್ದು, ಈ ವೇಳೆ ಹೆಲಿಕಾಪ್ಟರ್‌ನ ಟೈಲ್ ರೋಟರ್ ಬ್ಲೇಡ್ ಬಡಿದು ಅವರು ಸಾವನ್ನಪ್ಪಿದ್ದಾರೆ. ಕೇದರನಾಥ ಧಾಮದ ಹೆಲಿಪ್ಯಾಡ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಸೆಲ್ಫಿ ತೆಗೆಯುತ್ತಾ ಹೆಲಿಕಾಪ್ಟರ್‌ನ ಬಾಲದ ರೋಟರ್ ಬ್ಲೇಡ್ ಬಳಿ ಬಂದಿದ್ದು, ಅದು ಬಡಿದು ಸೈನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವೈರಲ್ ಆಯ್ತು ಜೆ.ಪಿ ನಡ್ಡಾ ಜತೆ ಕಿಚ್ಚ ಸುದೀಪ್ ಹೆಲಿಕಾಫ್ಟರ್ ಸೆಲ್ಫಿ!
ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆಯಲು ವಿಡಿಯೋ ಮಾಡಲು ಹೋಗಿ ಜನ ಪ್ರಾಣ ಕಳೆದುಕೊಳ್ಳುವುದು ಇದೇ ಮೊದಲೇನಲ್ಲಾ. ಈ ಹಿಂದೆಯೂ ಅನೇಕರು ಅಪಾಯಕಾರಿ ಸ್ಥಳಗಳಲ್ಲಿ ಜಲಪಾತಗಳ ಅಂಚಿನಲ್ಲಿ ಇಳಿಜಾರು ಪ್ರಪಾತಗಳ ತಿರುವಿನಲ್ಲಿ ಸೆಲ್ಫಿ ತೆಗೆಯಲು ಹೋಗಿ ಶಾಶ್ವತವಾಗಿ ಫೋಟೋ ಫ್ರೆಮ್ ಸೇರಿದ ಹಲವು ನಿದರ್ಶನಗಳಿವೆ. ಆದರೆ ಸರ್ಕಾರಿ ಅಧಿಕಾರಿಯೊಬ್ಬರು ಹೀಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಜೀವನ ಕೊನೆಗಾಣುವಂತಾಗಿದ್ದು, ದುರಂತವೇ ಸರಿ.
ನಿನ್ನೆಯಷ್ಟೇ ಅಕ್ಷಯ ತೃತೀಯ (Akshay Tritiya) ಅಂಗವಾಗಿ ಚಾರ್‌ಧಾಮ್ ಯಾತ್ರೆ ಆರಂಭವಾಗಿದೆ. ಅದಾಗಿ ದಿನ ಕಳೆಯುವ ಮೊದಲು ಈ ಅನಾಹುತ ಸಂಭವಿಸಿದೆ. ಉತ್ತರಕಾಶಿ ಜಿಲ್ಲೆಯ ಗಂಗೋತ್ರಿ ಮತ್ತು ಯಮುನೋತ್ರಿಯ ಪೋರ್ಟಲ್‌ಗಳನ್ನು ಯಾತ್ರಾರ್ಥಿಗಳಿಗಾಗಿ ತೆರೆಯುವುದರೊಂದಿಗೆ ಅಕ್ಷಯ ತೃತೀಯದ ಸಂದರ್ಭದಲ್ಲಿ ಚಾರ್ ಧಾಮ್ ಯಾತ್ರೆಯನ್ನು (Char Dham yatra) ಪ್ರಾರಂಭಿಸಲಾಗಿತ್ತು.
ಈ ಚಾರ್‌ಧಾಮ್ ಯಾತ್ರೆಗೆ ಒಟ್ಟು 16 ಲಕ್ಷ ಪ್ರವಾಸಿಗರು ಈಗಾಗಲೇ ಬುಕ್ಕಿಂಗ್ ಮಾಡಿದ್ದಾರೆ. ಅಲ್ಲದೇ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತಿದೆ. ಕೇದರನಾಥ್ (Kedarnath) ಯಾತ್ರಾ ಕ್ಷೇತ್ರ ಇಂದಿನಿಂದ ಹಾಗೂ ಬದರಿನಾಥ್ (Badrinath) ಏಪ್ರಿಲ್ 27 ರಿಂದ ತೀರ್ಥಯಾತ್ರಿಗಳಿಗೆ ತೆರೆಯಲಿದೆ.
Woman Driver: ಬಸ್ ಚಾಲಕಿ ಸೀಟ್ ನಲ್ಲಿ ಯುವ ಮಹಿಳೆ, ಜನರೆಲ್ಲ ಸೆಲ್ಫಿ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು
