ಅಕ್ರಮ ಸಂಬಂಧ ಹೊಂದಿದ್ದ ಗುಮಾಸ್ತೆಗೆ ವೀರ್ಯ ದಾನ ಮಾಡಿದ ಲೆಫ್ಟಿನೆಂಟ್ ಕರ್ನಲ್: ಸೇನೆ ವಿಧಿಸಿದ ಶಿಕ್ಷೆ ಹೀಗಿದೆ..
ತನ್ನ ಮೇಲಿರುವ ಎಲ್ಲ ಆರೋಪಗಳನ್ನು ಲೆಫ್ಟಿನೆಂಟ್ ಕರ್ನಲ್ ತಪ್ಪೊಪ್ಪಿಕೊಂಡಿದ್ದಾರೆ ಎಂದೂ ತಿಳಿದುಬಂದಿದೆ.
ನವದೆಹಲಿ (ಜೂನ್ 8, 2023): ಡೆಹ್ರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ (ಐಎಂಎ) ನೇಮಕಗೊಂಡ ಲೆಫ್ಟಿನೆಂಟ್ ಕರ್ನಲ್ ಶ್ರೇಣಿಯ ಅಧಿಕಾರಿಯೊಬ್ಬರಿಗೆ ಭಾರತೀಯ ಸೇನೆ ಕೋರ್ಟ್ ಮಾರ್ಷಲ್‌ಗೆ ಆದೇಶ ಮಾಡಿದೆ. ಇದಕ್ಕೆ ಕಾರಣ ಲೆಫ್ಟಿನೆಂಟ್ ಕರ್ನಲ್ ಮಹಿಳಾ ಗುಮಾಸ್ತೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಹಾಗೂ ಆಕೆಯ ಇನ್-ವಿಟ್ರೋ ಫರ್ಟಿಲಿಟಿ ಚಿಕಿತ್ಸೆಗಾಗಿ ವೀರ್ಯಾಣು ದಾನ ಮಾಡಿದ್ದರು ಎಂದು ತಿಳಿದುಬಂದಿದೆ.
ಜೂನ್ 7 ರಂದು ಬೆಂಗಾಲ್ ಎಂಜಿನಿಯರ್ ಗ್ರೂಪ್ ಮತ್ತು ಸೆಂಟರ್, ರೂರ್ಕಿಯಲ್ಲಿ ಅಧಿಕಾರಿಯ ಜನರಲ್ ಕೋರ್ಟ್ ಮಾರ್ಷಲ್ ಮುಕ್ತಾಯಗೊಂಡಿದೆ. ಅಲ್ಲದೆ, ತನ್ನ ಮೇಲಿರುವ ಎಲ್ಲ ಆರೋಪಗಳನ್ನು ಲೆಫ್ಟಿನೆಂಟ್ ಕರ್ನಲ್ ತಪ್ಪೊಪ್ಪಿಕೊಂಡಿದ್ದಾರೆ ಎಂದೂ ತಿಳಿದುಬಂದಿದೆ.
ಇದನ್ನು ಓದಿ: OROP ಪಿಂಚಣಿ ಲೆಕ್ಕಾಚಾರ ಸೂತ್ರಕ್ಕೆ ವಿರೋಧ: ದೇಶದ ಹಲವು ನಿವೃತ್ತ ಸೈನಿಕರ ಪ್ರತಿಭಟನೆ
ಈ ಹಿನ್ನೆಲೆ, ಅವರ ತಪ್ಪಿಗೆ ಲೆಫ್ಟಿನೆಂಟ್ ಕರ್ನಲ್ ಹುದ್ದೆಯ ಉದ್ದೇಶಕ್ಕಾಗಿ ಮೂರು ವರ್ಷಗಳ ಸೇವೆಯನ್ನು ಮುಟ್ಟುಗೋಲು ಹಾಕುವ ಶಿಕ್ಷೆ, ಮೂರು ವರ್ಷಗಳ ಶ್ರೇಣಿಯ ಹಿರಿತನ ಮುಟ್ಟುಗೋಲು ಮತ್ತು ಹೆಚ್ಚಿದ ವೇತನಕ್ಕಾಗಿ ಮೂರು ವರ್ಷಗಳ ಸೇವೆಯನ್ನು ಮುಟ್ಟುಗೋಲು ಹಾಕುವ ಶಿಕ್ಷೆಯೊಂದಿಗೆ ಅಧಿಕಾರಿಗೆ ಕೋರ್ಟ್ ಮಾರ್ಷಲ್‌ನಿಂದ ತೀವ್ರ ವಾಗ್ದಂಡನೆ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.
ಲೆಫ್ಟಿನೆಂಟ್ ಕರ್ನಲ್ ಆರ್ಮಿ ಎಜುಕೇಶನ್ ಕಾರ್ಪ್ಸ್‌ಗೆ ಸೇರಿದ್ದು ಮತ್ತು ಐಎಂಎ ಡೆಹ್ರಾಡೂನ್‌ನ ಅಕಾಡೆಮಿಕ್ ಬ್ರಾಂಚ್‌ನಲ್ಲಿ ನೇಮಕಗೊಂಡಿದ್ದರು. ಈ ವೇಳೆ ಅವರು ಐಎಂಎಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಗುಮಾಸ್ತೆಯೊಂದಿಗೆ ಸಂಬಂಧವನ್ನು ಬೆಳೆಸಿಕೊಂಡರು. ಹಾಗೆ, ಮಹಿಳೆ ಆ ಸಮಯದಲ್ಲಿ ಕಾರ್ಪ್ಸ್ ಆಫ್ ಎಂಜಿನಿಯರ್ಸ್‌ನ ಹವಾಲ್ದಾರ್ ಅವರನ್ನು ವಿವಾಹವಾಗಿದ್ದರು. ಲೆಫ್ಟಿನೆಂಟ್ ಕರ್ನಲ್ ಕೂಡ ಮದುವೆಯಾಗಿದ್ದರು ಮತ್ತು ಇಬ್ಬರು ಮಕ್ಕಳಿದ್ದಾರೆ ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ಇಂಟಿಗ್ರೇಟೆಡ್ ಥಿಯೇಟರ್ ಕಮಾಂಡ್ ರಚನೆಗೆ ಮೋದಿ ಸರ್ಕಾರದ ಮಹತ್ವದ ಕ್ರಮ: 100 ಕಿರಿಯ ಅಧಿಕಾರಿಗಳಿಗೆ ಅಂತರ ಸೇವಾ ಪೋಸ್ಟಿಂಗ್
ತನಿಖೆಯ ಸಂದರ್ಭದಲ್ಲಿ, ಅಧಿಕಾರಿಯು ಮಹಿಳೆಯ ಗರ್ಭಾವಸ್ಥೆಯ ಇನ್-ವಿಟ್ರೋ ಫಲವತ್ತತೆ ಚಿಕಿತ್ಸೆಗಾಗಿ ಅನೇಕ ಸಂದರ್ಭಗಳಲ್ಲಿ ಜೊತೆಗಿದ್ದರು ಮತ್ತು ವೀರ್ಯವನ್ನು ದಾನ ಮಾಡಿದ್ದರು ಎಂದು ತಿಳಿದುಬಂದಿದೆ. IMA ಡೆಹ್ರಾಡೂನ್‌ನಿಂದ ಪೋಸ್ಟ್ ಮಾಡಿದ ನಂತರ ಲೆಫ್ಟಿನೆಂಟ್ ಕರ್ನಲ್ ಮಹಿಳೆಯೊಂದಿಗಿನ ಎಲ್ಲಾ ಸಂಪರ್ಕವನ್ನು ನಿಲ್ಲಿಸಿದಾಗ ಆಕೆ ಪೊಲೀಸ್ ದೂರು ದಾಖಲಿಸಿದರು ಮತ್ತು ನಂತರ ಸೇನಾ ಅಧಿಕಾರಿಗಳಿಗೆ ದೂರು ನೀಡಿದರು ಎಂದೂ ವರದಿಯಾಗಿದೆ.
ಆರೋಪಿ ಅಧಿಕಾರಿಯನ್ನು ಅಲಹಾಬಾದ್ ಹೈಕೋರ್ಟ್‌ನ ಇಬ್ಬರು ವಕೀಲರಾದ ಶೈಲೇಂದ್ರ ಕುಮಾರ್ ಸಿಂಗ್ ಮತ್ತು ಕೇಶವ್ ಶರ್ಮಾ ಅವರು ಸಮರ್ಥಿಸಿಕೊಂಡರು. ದೆಹಲಿ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಅಡ್ವೊಕೇಟ್ ಜನರಲ್ ಶಾಖೆಯ ಅಧಿಕಾರಿ ಮತ್ತು ವಕೀಲರಾದ ಕರ್ನಲ್ ವೀರೇಂದ್ರ ಸಿಂಗ್ (ನಿವೃತ್ತ) ಅವರು ಪ್ರಾಸಿಕ್ಯೂಷನ್ ನಡೆಸಿದರು.
ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ, ಇಬ್ಬರು ಬಲಿ; ಸೇನೆಯಿಂದ 40 ಕ್ಕೂ ಹೆಚ್ಚು ಉಗ್ರರ ಹತ್ಯೆ!
ಇನ್ನು, ಲೆಫ್ಟಿನೆಂಟ್ ಕರ್ನಲ್ ಆರಂಭದಲ್ಲಿ ಸೇನಾ ಕಾಯ್ದೆಯ ಸೆಕ್ಷನ್ 45 ಮತ್ತು 63 ರ ಅಡಿಯಲ್ಲಿ ತನ್ನ ವಿರುದ್ಧ ಹೊರಿಸಲಾದ ಎಲ್ಲಾ ಮೂರು ಆರೋಪಗಳಿಗೆ 'ನಿರಪರಾಧಿ' ಎಂದು ಹೇಳಿಕೊಂಡರು. ಈ ಪೈಕಿ ಒಂದು ಆರೋಪವು ಮಹಿಳಾ ಗುಮಾಸ್ತೆಗೆ ಸೇನೆಯ ಹವಾಲ್ದಾರ್ ಅವರನ್ನು ವಿವಾಹವಾಗಿದ್ದಾರೆ ಎಂದು ತಿಳಿದಿದ್ದರೂ ಮುಕ ಸಂಬಂಧವನ್ನು ಹೊಂದಿರುವುದು. ಇನ್ನು, ಎರಡನೆಯ ಆರೋಪವು ಸಂತಾನೋತ್ಪತ್ತಿ ತಂತ್ರಜ್ಞಾನ ಪ್ರಕ್ರಿಯೆಗಾಗಿ ತನ್ನ ವೀರ್ಯಾಣುಗಳನ್ನು ಆ ಮಹಿಳೆಗೆ ದಾನ ಮಾಡಿರುವುದು. ಅಲ್ಲದೆ, ಮಹಿಳೆಯನ್ನು ತನ್ನ ಹೆಂಡತಿಯಾಗಿ ತೋರಿಸಿರುವುದು ಮೂರನೆಯ ಆರೋಪ ಎಂದು ತಿಳಿದುಬಂದಿದೆ.
ಆರೋಪಿ ಮತ್ತು ಮಹಿಳೆಯ ನಡುವಿನ ವಾಟ್ಸಾಪ್ ಚಾಟ್‌ಗಳು ಹಾಗೂ ಫೋನ್ ರೆಕಾರ್ಡಿಂಗ್‌ಗಳ ರೂಪದಲ್ಲಿ ಎಲೆಕ್ಟ್ರಾನಿಕ್ ಪುರಾವೆಗಳು ಸೇರಿದಂತೆ 3 ಆರೋಪಗಳ ಮೇಲಿನ ಆರೋಪಿಯ ವಿರುದ್ಧದ ಪ್ರಕರಣದ ವಿವರಗಳನ್ನು ಪ್ರಾಸಿಕ್ಯೂಷನ್ ಹೇಳಿದ ನಂತರ, ಆರೋಪಿಯು 'ನಿರಪರಾಧಿ' ಎಂಬ ತನ್ನ ಮೊದಲ ಹೇಳಿಕೆಯನ್ನು ಹಿಂತೆಗೆದುಕೊಂಡರು. ಮತ್ತು 'ಎಲ್ಲಾ ಆರೋಪಗಳಿಗೆ ತಪ್ಪಿತಸ್ಥ' ಎಂದು ಒಪ್ಪಿಕೊಂಡರು ಎಮದು ತಿಳಿದುಬಂದಿದೆ.
ಇದನ್ನೂ ಓದಿ: Operation Weapon Recovery: ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಶಾಂತಿ ಸ್ಥಾಪನೆಗೆ ಆಯುಧ ವಶಪಡಿಸಿಕೊಳ್ಳಲು ಮುಂದಾದ ಸೇನೆ
ವಿಚಾರಣೆಯು ಏಪ್ರಿಲ್ 11, 2023 ರಂದು ಪ್ರಾರಂಭವಾಯಿತು ಎಂದೂ ವರದಿಯಾಗಿದೆ.
ಇದನ್ನೂ ಓದಿ: ಅಪ್ಪ ನನಗೇನೂ ಬೇಡಾ, ನೀನು ಎದ್ದು ಬಾ: ಹುತಾತ್ಮ ಯೋಧನ ಪುತ್ರಿಯ ಕಣ್ಣೀರು