ಮಂಗಳವಾರ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ವೆಬ್‌ಸೈಟ್‌ನಲ್ಲಿ ಕೇವಲ ಹಿಂದಿಯಲ್ಲಿ ತೆರೆದುಕೊಳ್ಳುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ಇದನ್ನು ತೀವ್ರವಾಗಿ ಖಂಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌, ಹಿಂದಿ ಹೇರಿಕೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಚೆನ್ನೈ (ನ.20): ಮಂಗಳವಾರ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ವೆಬ್‌ಸೈಟ್‌ನಲ್ಲಿ ಕೇವಲ ಹಿಂದಿಯಲ್ಲಿ ತೆರೆದುಕೊಳ್ಳುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ಇದನ್ನು ತೀವ್ರವಾಗಿ ಖಂಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌, ಹಿಂದಿ ಹೇರಿಕೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಹಿಂದಿಯಲ್ಲಿರುವ ವೆಬ್‌ ಪೇಜ್‌ನ ಸ್ಕ್ರೀನ್‌ಶಾಟನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ನಮಗೆ ಇಂಗ್ಲಿಷ್ ಬೇಕಿದ್ದರೂ ಹಿಂದಿ ಮಾತ್ರ ಕಾಣುತ್ತಿದೆ. ಇದು ಸಂಸ್ಕೃತಿ, ಭಾಷೆಯ ಹೇರಿಕೆಯಾಗಿದ್ದು, ಭಾರತದ ವೈವಿಧ್ಯತೆಯನ್ನು ತುಳಿಯುವ ಕ್ರಮ’ ಎಂದು ಕಿಡಿಕಾರಿದ್ದಾರೆ.
‘ಭಾರತೀಯರ ಪ್ರೋತ್ಸಾಹದೊಂದಿಗೆ ಎಲ್‌ಐಸಿ ಬೆಳವಣಿಗೆಯಾಗಿದೆ. ಅದರ ಬಹುಪಾಲು ಕೊಡುಗೆದಾರರಿಗೆ ದ್ರೋಹ ಮಾಡುವ ಧೈರ್ಯ ಹೇಗೆ ಬಂತು? ಈ ಭಾಷಾ ದೌರ್ಜನ್ಯವನ್ನು ತಕ್ಷಣವೇ ನಿಲ್ಲಿಸಬೇಕು’ ಎಂದು ಅವರು ಹೇಳಿದ್ದಾರೆ.

2028ಕ್ಕೆ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ; ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಏರುತ್ತಿದ್ದ ಘೋಷಣೆ: ಸಿಎಂ

ತಾಂತ್ರಿಕ ದೋಷ- ಎಲ್‌ಐಸಿ ಸ್ಪಷ್ಟನೆ:

ಈ ನಡುವೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಎಲ್‌ಐಸಿ, ತಾಂತ್ರಿಕ ದೋಷದಿಂದ ಕೇವಲ ಹಿಂದಿ ಪುಟ ಮಾತ್ರ ತೆರೆದುಕೊಳ್ಳುತ್ತಿತ್ತು. ಈಗ ಸಮಸ್ಯೆ ನಿವಾರಿಸಲಾಗಿದ್ದು, ಜನರ ತಮಗಿಷ್ಟವಾದ ಭಾಷೆ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಮರುಸ್ಥಾಪಿಸಲಾಗಿದೆ ಎಂದಿದೆ. 

Scroll to load tweet…