Cheeta Lucknow Trip: ಲಖ್ನೋದ ಬೀದಿಗಳಲ್ಲಿ ಸುತ್ತುತ್ತಿದ್ದ ಚಿರತೆ ಕೊನೆಗೂ ಅಂದರ್‌

  • ಜನರ ಮೇಲೆ ದಾಳಿ ಮಾಡಿದ್ದ ಚಿರತೆ ಸೆರೆ
  • ಲಖ್ನೋದ ಬೀದಿಗಳಲ್ಲಿ ಸುತ್ತಾಡುತ್ತಿದ್ದ ಚಿರತೆ
  • ಬೀದಿಗಳಲ್ಲಿ ಚಿರತೆ ಸುತ್ತಾಡುತ್ತಿದ್ದ ವಿಡಿಯೋ ವೈರಲ್
     
Leopard on prowl in Lucknows streets captured after 3 days akb

ಲಖ್ನೋ(ಡಿ. 29): ಲಖ್ನೋದ ಬೀದಿಗಳಲ್ಲಿ ಸುತ್ತಾಡುತ್ತಾ ಹಲವರ ಮೇಲೆ ದಾಳಿಯನ್ನು ಮಾಡಿದ್ದ ಚಿರತೆಯನ್ನು ಕೊನೆಗೂ ಮೂರು ದಿನಗಳ ನಂತರ ಸೆರೆ ಹಿಡಿಯಲಾಗಿದೆ. ಈ ಚಿರತೆ ಏಳು ಜನರ ಮೇಲೆ ದಾಳಿ ಮಾಡಿದ್ದು, ಒಂದು ಬೀದಿ ನಾಯಿಯನ್ನು ಕೊಂದು ಹಾಕಿತ್ತು. ಉತ್ತರಪ್ರದೇಶ (Uttara pradesh)ದ ರಾಜಧಾನಿಯಾಗಿರುವ ಲಖ್ನೋ  (Lucknow) ದಲ್ಲಿ ಜನರು ಹೀಗೆ ತಾವು ರಸ್ತೆಯಲ್ಲಿ ಚಿರತೆಯನ್ನು  ಮುಖಾಮುಖಿಯಾಗಬಹುದು ಎಂದು ಯಾವತ್ತೂ ಊಹೆಯೂ ಮಾಡಿರಲಿಕ್ಕಿಲ್ಲ. ಅದಾಗ್ಯೂ ಕಳೆದ ಮೂರು ದಿನಗಳಿಂದ ನಗರದ ಹಲವು ಪ್ರದೇಶಗಳಲ್ಲಿ ಈ ಚಿರತೆ ಸುತ್ತಾಡಿದ್ದು,  ಇಲ್ಲಿನ ಜನ ಚಿರತೆ ದಾಳಿಯ ಭೀತಿಗೆ ಒಳಗಾಗಿದ್ದರು. 

ಪ್ರಸ್ತುತ ಈ ಚಿರತೆಯನ್ನು ಸೆರೆ ಹಿಡಿಯಲಾಗಿದ್ದು, ಇದಕ್ಕೂ ಮೊದಲು ಇದು ಏಳು ಜನರ ಮೇಲೆ ದಾಳಿ ನಡೆಸಿತ್ತು. ಹೀಗಾಗಿ ಜನರಲ್ಲಿ ಇದು ಭೀತಿ ಹುಟ್ಟಿಸಿದ್ದರಿಂದ ಅರಣ್ಯ ಇಲಾಖೆಯವರು  ಜನರಿಗೆ ಮನೆಯಲ್ಲೇ ಇರುವಂತೆ ಹಾಗೂ ಸಾಕು ಪ್ರಾಣಿಗಳು ಹಾಗೂ ಚಿಕ್ಕ ಮಕ್ಕಳನ್ನು ಹೊರಗೆ ಬಿಡದಂತೆ ಮನವಿ ಮಾಡಿದ್ದರು. ಇಲ್ಲಿ ಚಿರತೆ ಮೊದಲ ಬಾರಿಗೆ ಚಿರತೆ ಕಾಣಿಸಿಕೊಂಡಾಗಿನಿಂದ ಸ್ಥಳೀಯರಲ್ಲಿ ಸಾಕಷ್ಟು ಭೀತಿ ಉಂಟಾಗಿತ್ತು. ಇದು ಹಲವು ವದಂತಿಗಳಿಗೂ ಕಾರಣವಾಗಿತ್ತು. ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಹಾಗೂ ಪೊಲೀಸರು ಹಲವು ಬೋನುಗಳನ್ನು ನೆಟ್ಟಿದ್ದರು. ನಗರದಾದ್ಯಂತ ಗಸ್ತು ತಂಡಗಳನ್ನು ನಿಯೋಜಿಸಿದ್ದರು. ಒಮ್ಮೆ ಅಧಿಕಾರಿಗಳು ಬೀಸಿದ ಬಲೆಯಲ್ಲಿ ಚಿರತೆ ಸಿಕ್ಕಿಬಿದ್ದಿದ್ದರೂ ಅದನ್ನು ಸೀಳಿ ಪರಾರಿಯಾಗಿತ್ತು. 

ಚಿರತೆಯೂ ಜನ ವಸತಿ ಪ್ರದೇಶದಲ್ಲಿ ಸುತ್ತಾಡುತ್ತಿರುವ ಹಲವು ವಿಡಿಯೋಗಳು ಟ್ವಿಟ್ಟರ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಅಂತಿಮವಾಗಿ ಸೋಮವಾರ ಬೆಳಗ್ಗೆ (ಡಿ.29) ಚಿರತೆ ಅಂತಿಮವಾಗಿ ಸಿಕ್ಕಿಬಿದ್ದಿದ್ದು, ಲಕ್ನೋ ನಿವಾಸಿಗಳು ಮತ್ತು ಅರಣ್ಯ ಇಲಾಖೆಯು ನಿಟ್ಟುಸಿರು ಬಿಟ್ಟಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಜನವಸತಿ ಪ್ರದೇಶಗಳಲ್ಲಿ ವನ್ಯಪ್ರಾಣಿಗಳು ಕಾಣಿಸಿಕೊಂಡಿರುವ ನಿದರ್ಶನಗಳು ಹೆಚ್ಚಾಗಿವೆ. ಈ ಘಟನೆಗಳಿಗೆ ಅರಣ್ಯ ಜಾಗಗಳ ಅತಿಕ್ರಮಣವೇ ಕಾರಣ ಎಂದು ತಜ್ಞರು ಆರೋಪಿಸಿದ್ದಾರೆ. ಈ ವರ್ಷವೇ ದೆಹಲಿ (Delhi)ಯ ನಜಾಫ್‌ಗಢ್ (Najafgarh) ಪ್ರದೇಶ ಮತ್ತು ಹರಿಯಾಣದ ಚಂಡಿಮಂದಿರ್ (Chandimandir) ಕಂಟೋನ್ಮೆಂಟ್ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿತ್ತು.

ಚಿರತೆಗಳು ಕಾಡು ಪ್ರಾಣಿಗಳಾಗಿದ್ದರೂ ಇತ್ತೀಚೆಗೆ ಮಾನವರಿರುವ ಪ್ರದೇಶಗಳಿಗೆ ಅವುಗಳ ಅಲೆದಾಟ ಹೆಚ್ಚಾಗಿದೆ. ಕಾಡಂಚಿನ ಗ್ರಾಮಗಳಲ್ಲಂತೂ ಚಿರತೆ ದಾಳಿ ಸಾಮಾನ್ಯ ಎನಿಸಿ ಬಿಟ್ಟಿದೆ.  ಚಿರತೆಗಳು ಸಾಮಾನ್ಯವಾಗಿ ನಾಯಿ, ಕುರಿಗಳನ್ನು ಬೇಟೆಯಾಡುತ್ತವೆ. 2015 ರ ಸಂಶೋಧನೆಯ ಪ್ರಕಾರ, ಮಹಾರಾಷ್ಟ್ರವು ಮೂರನೇ ಅತಿ ಹೆಚ್ಚು ಚಿರತೆಗಳನ್ನು ಹೊಂದಿದ ರಾಜ್ಯವಾಗಿದೆ. ನಂತರ ಮಧ್ಯಪ್ರದೇಶವಿದೆ. ಚಿರತೆಯೊಂದು ಮನೆಗೆ ನುಗ್ಗಿ ಸಾಕಿದ ನಾಯಿಯ ಮೇಲೆ ದಾಳಿ ಮಾಡಿರುವ ಈ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಪ್ರವೀಣ್‌ ಕಾಸ್ವಾನ್‌ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದಾರೆ. ಆದರೆ ಇದು ಎಲ್ಲಿ ನಡೆದ ಘಟನೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. 

Watch Terrifying video: ಗೇಟ್ ಹಾರಿ ಬಂದು ಸಾಕು ನಾಯಿ ಹೊತ್ತೊಯ್ದ ಚಿರತೆ..

. ಕೆಲ ದಿನಗಳ  ಹಿಂದಷ್ಟೇ ಮಧ್ಯಪ್ರದೇಶದಲ್ಲಿತಾಯಿಯೊಂದಿಗೆ ಚಳಿ ಕಾಯಿಸುತ್ತ ಕುಳಿತಿದ್ದ 8 ವರ್ಷದ ಬಾಲಕನನ್ನು ಚಿರತೆ ಹೊತ್ತೊಯ್ದಿತ್ತು. ಆದರೆ ಆ ಮಹಾತಾಯಿ ಚಿರತೆಯೊಂದಿಗೆ ಬರಿಗೈಲಿ ಹೋರಾಡಿ ತನ್ನ ಕಂದನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು. ಮಧ್ಯಪ್ರದೇಶದ ಸಿದ್ಧಿ ಜಿಲ್ಲೆಯಲ್ಲಿರುವ ಸಂಜಯ್‌ ಗಾಂಧಿ ರಾಷ್ಟ್ರೀಯ ಉದ್ಯಾನವನ(Sanjay Gandhi National Park)ದ ಸಮೀಪದಲ್ಲಿರುವ ಹಳ್ಳಿಯೊಂದರಲ್ಲಿ ಈ ಸಾಹಸಿ ಘಟನೆ ನಡೆದಿತ್ತು. 

ದಾಳಿ ನಡೆಸಿದ ಚಿರತೆಯನ್ನು ವಾಕಿಂಗ್‌ ಸ್ಟಿಕ್‌ನಿಂದ ಓಡಿಸಿದ ಮಹಿಳೆ, ಶಾಕಿಂಗ್ ವಿಡಿಯೋ ವೈರಲ್!

Latest Videos
Follow Us:
Download App:
  • android
  • ios