Asianet Suvarna News Asianet Suvarna News

Watch Terrifying video: ಗೇಟ್ ಹಾರಿ ಬಂದು ಸಾಕು ನಾಯಿ ಹೊತ್ತೊಯ್ದ ಚಿರತೆ..

  • ಗೇಟ್ ಹಾರಿ ಬಂದು ಸಾಕುನಾಯಿ ಹೊತ್ತೊಯ್ದ ಚಿರತೆ
  • ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌
leopard breaks into a house at night and takes away pet dog akb
Author
Bangalore, First Published Dec 27, 2021, 3:29 PM IST

ಚಿರತೆಯೊಂದು ಗೇಟ್‌ ಹಾರಿ ಬಂದು ಗೇಟ್‌ ಒಳಗಿದ್ದ ಸಾಕುನಾಯಿಯನ್ನು ಹೊತ್ತೊಯ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೋಡುಗರಲ್ಲಿ ಭೀತಿ ಹುಟ್ಟಿಸುತ್ತಿದೆ. ಇದು ಸಿಸಿಟಿವಿ ದೃಶ್ಯಾವಳಿಯಾಗಿದ್ದು, ವಿಡಿಯೋದಲ್ಲಿ ಮನೆಯ ಗೇಟ್‌ನ ಒಳಭಾಗದಲ್ಲಿ ನಾಯಿಯೊಂದು ನಿಂತುಕೊಂಡು ಗೇಟ್‌ನತ್ತ ನೋಡಿ ಬೊಗಳುವುದು ಕಾಣಿಸುತ್ತಿದೆ. ಕೂಡಲೇ ಯಾವುದೋ ಪ್ರಾಣಿ ಇರುವುದನ್ನು ಗಮನಿಸಿದ ನಾಯಿ ಭಯದಿಂದ ಸೀದಾ ಮನೆಯತ್ತ ಓಡಿ ಬರುತ್ತದೆ. ಅಷ್ಟರಲ್ಲೇ ಗೇಟ್‌ ಹಾರಿ ಮನೆಯ ಆವರಣಕ್ಕೆ ಬಂದ ಚಿರತೆ  ಕ್ಷಣದಲ್ಲೇ ನಾಯಿಯನ್ನು ಹೊತ್ತೊಯ್ದು ಗೇಟ್‌ ಹಾರಿ ಹೊರ ಹೋಗುತ್ತದೆ. 

ಚಿರತೆಗಳು ಕಾಡು ಪ್ರಾಣಿಗಳಾಗಿದ್ದರೂ ಇತ್ತೀಚೆಗೆ ಮಾನವರಿರುವ ಪ್ರದೇಶಗಳಿಗೆ ಅವುಗಳ ಅಲೆದಾಟ ಹೆಚ್ಚಾಗಿದೆ. ಕಾಡಂಚಿನ ಗ್ರಾಮಗಳಲ್ಲಂತೂ ಚಿರತೆ ದಾಳಿ ಸಾಮಾನ್ಯ ಎನಿಸಿ ಬಿಟ್ಟಿದೆ.  ಚಿರತೆಗಳು ಸಾಮಾನ್ಯವಾಗಿ ನಾಯಿ, ಕುರಿಗಳನ್ನು ಬೇಟೆಯಾಡುತ್ತವೆ. 2015 ರ ಸಂಶೋಧನೆಯ ಪ್ರಕಾರ, ಮಹಾರಾಷ್ಟ್ರವು ಮೂರನೇ ಅತಿ ಹೆಚ್ಚು ಚಿರತೆಗಳನ್ನು ಹೊಂದಿದ ರಾಜ್ಯವಾಗಿದೆ. ನಂತರ ಮಧ್ಯಪ್ರದೇಶವಿದೆ. ಚಿರತೆಯೊಂದು ಮನೆಗೆ ನುಗ್ಗಿ ಸಾಕಿದ ನಾಯಿಯ ಮೇಲೆ ದಾಳಿ ಮಾಡಿರುವ ಈ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಪ್ರವೀಣ್‌ ಕಾಸ್ವಾನ್‌ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದಾರೆ. ಆದರೆ ಇದು ಎಲ್ಲಿ ನಡೆದ ಘಟನೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ

ಮಗು ಹೊತ್ತೊಯ್ದ ಚೀತಾ

ಇತ್ತೀಚೆಗೆ ಕಾಡುಪ್ರಾಣಿಗಳು ಕಾಡು ಬಿಟ್ಟು ನಗರಕ್ಕೆ ಬಂದು ದಾಳಿ ಮಾಡುವುದು ಸಾಮಾನ್ಯವಾಗಿದೆ. ಕಾಂಡಂಚಿನ ಪ್ರದೇಶದಲ್ಲಿರುವ ನಗರಕ್ಕೆ ಆಗಾಗ್ಗೆ ಬರುವ ಕಾಡುಪ್ರಾಣಿಗಳು ಜನರ ಮೇಲೆ ದಾಳಿ ಮಾಡುತ್ತಿದ್ದು ಭೀತಿಗೆ ಕಾರಣವಾಗಿವೆ. . ಕೆಲ ದಿನಗಳ  ಹಿಂದಷ್ಟೇ ಮಧ್ಯಪ್ರದೇಶದಲ್ಲಿತಾಯಿಯೊಂದಿಗೆ ಚಳಿ ಕಾಯಿಸುತ್ತ ಕುಳಿತಿದ್ದ 8 ವರ್ಷದ ಬಾಲಕನನ್ನು ಚಿರತೆ ಹೊತ್ತೊಯ್ದಿತ್ತು. ಆದರೆ ಆ ಮಹಾತಾಯಿ ಚಿರತೆಯೊಂದಿಗೆ ಬರಿಗೈಲಿ ಹೋರಾಡಿ ತನ್ನ ಕಂದನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು. ಮಧ್ಯಪ್ರದೇಶದ ಸಿದ್ಧಿ ಜಿಲ್ಲೆಯಲ್ಲಿರುವ ಸಂಜಯ್‌ ಗಾಂಧಿ ರಾಷ್ಟ್ರೀಯ ಉದ್ಯಾನವನ(Sanjay Gandhi National Park)ದ ಸಮೀಪದಲ್ಲಿರುವ ಹಳ್ಳಿಯೊಂದರಲ್ಲಿ ಈ ಸಾಹಸಿ ಘಟನೆ ನಡೆದಿತ್ತು.

brave mother: ಚಿರತೆಯೊಂದಿಗೆ ಹೋರಾಡಿ ಮಗುವನ್ನು ರಕ್ಷಿಸಿದ ಸಾಹಸಿ ತಾಯಿ

ಬೈಗಾ ಆದಿವಾಸಿ( tribal) ಸಮುದಾಯದ ಕಿರಣ್‌ ಬೈಗಾ(Kiran Baiga) ಎಂಬಾಕೆ ಚಿರತೆಯನ್ನು ಕಿಲೋ ಮೀಟರ್‌ವರೆಗೆ ಹಿಂಬಾಲಿಸಿ ಮಗುವನ್ನು ರಕ್ಷಿಸಿದ್ದರು. ಭಾನುವಾರ ಸಂಜೆ ಇವರು ತಮ್ಮ  ಮೂವರು ಮಕ್ಕಳೊಂದಿಗೆ ಮನೆಯ ಮುಂಭಾಗದಲ್ಲಿ ಬೆಂಕಿ ಹಾಕಿ ಅದರ ಮುಂದೆ ಚಳಿ ಕಾಯಿಸುತ್ತ ಕುಳಿತಿದ್ದರು. ಈ ವೇಳೆ ಧುತ್ತನೇ ಬಂದ ಚಿರತೆಯೊಂದು ಇವರೊಂದಿಗೆ ಕುಳಿತಿದ್ದ ಕಿರಣ್‌ಳ 8 ವರ್ಷದ ಮಗು ರಾಹುಲ್‌(Rahul )ನನ್ನು ಬಾಯಿಯಲ್ಲಿ ಕಚ್ಚಿ ಹೊತ್ತೊಯ್ದಿತ್ತು. ಮಹಿಳೆಯ ಸಾಹಸಿ ಕಾರ್ಯದ ಬಗ್ಗೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

Leopard in School: ಶಾಲೆಗೆ ಬಂದ ಚೀತಾ... ಎದ್ದು ಬಿದ್ದು ಓಡಿದ ಮಕ್ಕಳು

ಶಾಲೆಗೆ ನುಗ್ಗಿದ ಚಿರತೆ
ಈ ಘಟನೆಯ ಬಳಿಕ ಚಿರತೆಯೊಂದು ಶಾಲೆಗೆ ನುಗ್ಗಿ ಮಕ್ಕಳ ಮೇಲೆ ದಾಳಿ ನಡೆಸಿದಂತಹ ಘಟನೆ ಉತ್ತರಪ್ರದೇಶ(Uttar Pradesh)ದ ಅಲಿಘರ್‌(Aligarh)ನಲ್ಲಿ ನಡೆದಿತ್ತು.  ಶಾಲೆಯ ಕೊಠಡಿ ಸೇರಿದ ಚಿರತೆಯನ್ನು ಬಳಿಕ ಕೊಠಡಿಯೊಳಗೆ ಬಂದ್‌ ಮಾಡಲಾಗಿತ್ತು. ಅಲಿಘರ್‌ನ ಚೌಧರಿ ನಿಹಾಲ್‌ ಸಿಂಗ್‌  ಇಂಟರ್‌ ಕಾಲೇಜಿ(Chaudhary Nihal Singh Inter College)ನ ಆವರಣದಲ್ಲಿ ಈ ಘಟನೆ ನಡೆದಿತ್ತು. ಕೂಡಲೇ ಅರಣ್ಯಾಧಿಕಾರಿಗಳಿಗೆ ಚಿರತೆ ಇರುವ ಬಗ್ಗೆ ಮಾಹಿತಿ ನೀಡಲಾಯಿತು. ಮುಂಜಾನೆ ವಿದ್ಯಾರ್ಥಿಗಳು ಕ್ಯಾಂಪಸ್‌ನತ್ತ ಬರುತ್ತಿದ್ದ ವೇಳೆ ಚಿರತೆಯೊಂದು ಶಾಲೆಯ ಆವರಣ ಪ್ರವೇಶಿಸಿದೆ. ಈ ವೇಳೆ ಓರ್ವ ವಿದ್ಯಾರ್ಥಿ  ಮೇಲೆ ದಾಳಿ ಮಾಡಿದ್ದು ಆತ ಗಾಯಗೊಂಡಿದ್ದನು. 

Follow Us:
Download App:
  • android
  • ios