ಕಾದಾಡಿ ಪ್ರಾಣ ಉಳಿಸಿಕೊಂಡ ಸಾಕು ನಾಯಿ, ಬೇಟೆಯಾಡಲು ಬಂದ ಚಿರತೆ ಬರಿಗೈಲಿ ವಾಪಸ್
* ಚಿರತೆಯೊಂದಿಗೆ ಕಾದಾಡಿ ಪ್ರಾಣ ಉಳಿಸಿಕೊಂಡ ಸಾಕು ನಾಯಿ
* ಬೇಟೆಯಾಡಲು ಬಂದ ಚಿರತೆ ಬರಿಗೈಲಿ ವಾಪಸ್
* ಪ್ರಾಣಭಯ ಬಿಟ್ಟು ಚಿರತೆಯಿಂದ ನಾಯಿ ರಕ್ಷಿಸಲು ಹೋಗಿದ್ದ ಮಾಲೀಕ
ಹಾಸನ, (ಮಾ.29): ಚಿರತೆಯೊಂದಿಗೆ ನಾಯಿ ಕಾದಾಡಿ ಪ್ರಾಣ ಉಳಿಸಿಕೊಂಡಿರುವ ಘಟನೆ ಹಾಸನ (Hassan) ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ನಾಗಯ್ಯನ ಕೊಪ್ಪಲಿನಲ್ಲಿ ನಡೆದಿದೆ.
ಅಷ್ಟೇ ಅಲ್ಲ ನಾಯಿ (Dog) ಜೊತೆ ಕಾದಾಡುತ್ತಿದ್ದ ಚಿರತೆಯನ್ನು (Leopard) ಪ್ರಾಣದ ಹಂಗು ತೊರೆದು ಓಡಿಸಲು ಮನೆ ಮಾಲೀಕ ಪ್ರಯತ್ನಿರುವ ಅಪರೂಪದ ಘಟನೆ ಇದಾಗಿದೆ.
ದಾಳಿ ಮಾಡಲು ಬಂದ ಚಿರತೆ ಮುಂದೆ ಧೈರ್ಯವಾಗಿ ನಿಂತ ಮೂರುಕಾಲಿನ ಜಿಂಕೆ
ನಾಯಿ ಚಿರತೆಯೊಂದಿಗೆ ಸೆಣಸಾಡೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶ್ರವಣಬೆಳಗೊಳದ ವಿಂದ್ಯಗಿರಿ ತಪ್ಪಲಿನ ಹಿಂಭಾಗದಲ್ಲಿ ನಾಗಯ್ಯನ ಕೊಪ್ಪಲು ಇದೆ. ನಾಗಯ್ಯನಕೊಪ್ಪಲಿನ ಮಂಜೇಗೌಡರು ಸಾಕಿದ್ದ ನಾಯಿಯನ್ನು ಚಿರತೆ ಹೊತ್ತೊಯ್ಯಲು ಯತ್ನಿಸಿದೆ. ಆದ್ರೆ ಚಿರತೆಯೊಂದಿಗೆ ಕಾದಾಡಿ ನಾಯಿ ಪ್ರಾಣ ಉಳಿಸಿಕೊಂಡಿದೆ.
"
ಮಂಜೇಗೌಡರ ಮನೆಯ ಬಳಿ ಮುಂಜಾನೆ ಬಂದಿದ್ದ ಚಿರತೆ ನಾಯಿಯನ್ನು ಹೊತ್ತೊಯ್ಯಲು ಯತ್ನಿಸಿದೆ. ಬಗ್ಗದ ನಾಯಿ ಚಿರತೆಯೊಂದಿಗೆ ಸೆಣಸಾಟ ನಡೆಸಿದೆ. ಚಿರತೆ ಬಂದ ಕೂಡಲೇ ಚಿರತೆಯೊಂದಿಗೆ ಫೈಟಿಂಗ್ ಗೆ ಇಳಿದ ಸಾಕುನಾಯಿ ಚಿರತೆಯನ್ನೆ ಎದುರಿಸಿದೆ. ಸಾಕು ನಾಯಿ ,ಚಿರತೆ ಕಾದಾಡೋ ದೃಶ್ಯ ಮೈ ಜುಮ್ ಎನ್ನಿಸುವ ರೀತಿ ಇದೆ.
ನಾಯಿ - ಚಿರತೆ ಕಾದಾಟದ ಶಬ್ದ ಕೇಳಿಸಿಕೊಂಡು ಮನೆಯ ಮಾಲೀಕ ಲೈಟ್ ಹಾಕಿ ಮನೆ ಹೊರಗೆ ಬಂದಿದ್ದಾನೆ. ಮನೆಯಿಂದ ಆಚೆ ಬಂದವನೇ ತನ್ನ ಹೆಗಲ ಮೇಲಿದ್ದ ಟವೆಲ್ ನಿಂದ ಚಿರತೆಯನ್ನು ಓಡಿಸುವ ಯತ್ನ ಮಾಡಿದ್ದಾನೆ. ತಕ್ಷಣವೇ ಚಿರತೆ ಕಾಂಪೌಂಡ್ ಹಾರಿ ಕಾಲ್ಕಿತ್ತಿದೆ.
ಮನೆ ಶೆಡ್ನೊಳಗಿದ್ದ ಸಾಕುನಾಯಿಯನ್ನ ಚಿರತೆ ಹೊತ್ತೊಯ್ಯಲು ಮುಂದಾಗಿತ್ತು. ಈ ವೇಳೆ ಚಿರತೆ ಜೊತೆ ಶ್ವಾನ ಸೆಣಸಾಡಿ ಮಣಿಸಿದೆ. ಚಿರತೆ ಹಾಗು ತಮ್ಮ ನಾಯಿಯ ಹೋರಾಟದ ಶಬ್ದ ಕೇಳಿ ಮಾಲೀಕ ಹೊರಗೆ ಬಂದಿದ್ದಾರೆ. ಪ್ರಾಣದ ಹಂಗು ತೊರೆದು ಮನೆಯ ಮಾಲೀಕ ಚಿರತೆ ಓಡಿಸಲು ಮುಂದಾದರು. ನಾಯಿ ಚಿರತೆಯೊಂದಿಗೆ ಸೆಣಸಾಡುವ ಲ್ಯಾಬ್ರಡಾರ್ ನಾಯಿಯ ರೋಚಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಗ್ರಾಮದ ಮಂಜೇಗೌಡ ಎಂಬುವರ ಮನೆಯ ಬಳಿ ಚಿರತೆ ಆಹಾರಕ್ಕಾಗಿ ಮಧ್ಯರಾತ್ರಿ ಬಂದಿತ್ತು. ಚಿರತೆ ಬಂದ ಕೂಡಲೇ ನಾಯಿ ಚಿರತೆಯೊಂದಿಗೆ ಕಾದಾಡಲು ಇಳಿದಿತ್ತು. ಆದರೆ ಬೇಟೆಯಾಡಲು ಬಂದ ಚಿರತೆ ಬರಿಗೈಲಿ ಮರಳಿದೆ. ಚಿರತೆ –ಸಾಕು ನಾಯಿ ಕಾದಾಡುವ ದೃಶ್ಯ ಮೈಜುಂ ಎನಿಸುತ್ತದೆ.
ಚಿರತೆಯನ್ನೇ ಬೇಟಿಯಾಡಿದ ರೈತರು
ಇಬ್ಬರು ರೈತರು ತಮ್ಮ ಮೇಲೆ ದಾಳಿ ಮಾಡಿದ ಚಿರತೆಯೊಂದಿಗೆ ಧೈರ್ಯದಿಂದ ಕಾದಾಡಿ ಅದನ್ನು ಕೊಂದು ಹಾಕಿದ್ದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿತ್ತು.
ತಮ್ಮ ಮೇಲೆ ದಾಳಿ ಮಾಡಿದ ಚಿರತೆಯನ್ನು ತಾಲೂಕಿನ ಬುಳ್ಳಾಪುರ ಗ್ರಾಮದಲ್ಲಿ ರೈತರಿಬ್ಬರು ಹರಸಾಹಸ ಮಾಡಿ ಅದರೊಂದಿಗೆ ಕಾದಾಡಿ ಕೊಂದು ಹಾಕಿದ್ದರು.
ಎಂದಿನಂತೆ ರಾತ್ರಿ ತಮ್ಮ ಜಮೀನಿನಲ್ಲಿ ಬೆಳೆಗೆ ನೀರು ಹಾಯಿಸಲು ಹೋಗಿದ್ದ ಗದಿಗೆಪ್ಪ ಅವರ ಮೇಲೆ ಮೊದಲು ಚಿರತೆ ದಾಳಿ ಮಾಡಿದೆ. ಈ ವೇಳೆ ಕೃಷ್ಣಪ್ಪ ಬಂದು ಚಿರತೆ ದಾಳಿ ತಪ್ಪಿಸುವುದಕ್ಕೆ ಮುಂದಾಗಿದ್ದಾರೆ. ಆಗ ಇಬ್ಬರ ಮೇಲೂ ಚಿರತೆ ಎರಗಲು ಮುಂದಾಗಿದೆ. ಇಬ್ಬರೂ ಎದೆಗುಂದದೆ ಕಾದಾಡಿ ಚಿರತೆಯನ್ನು ಹಿಡಿಯಲು ಒಂದಾಗಿದ್ದಾರೆ. ಒಬ್ಬ ಸಾಹಸ ಮಾಡಿ ಚಿರತೆಯನ್ನು ಬಿಗಿದಪ್ಪ ಹಿಡಿದ್ದಾರೆ. ಆಗ ಇನ್ನೊಬ್ಬ ಅಲ್ಲಿಯೇ ಸಿಕ್ಕ ಕಲ್ಲಿನಿಂದ ನಿರಂತರವಾಗಿ ಚಿರತೆಗೆ ಹೊಡೆದಿದ್ದಾರೆ. ಇದರಿಂದ ಚಿರತೆ ಸ್ಥಳದಲ್ಲಿಯೇ ಪ್ರಾಣಬಿಟ್ಟಿತ್ತು.