Leopard in School: ಶಾಲೆಗೆ ಬಂದ ಚೀತಾ... ಎದ್ದು ಬಿದ್ದು ಓಡಿದ ಮಕ್ಕಳು

ಇತ್ತೀಚೆಗೆ ಕಾಡುಪ್ರಾಣಿಗಳು ಕಾಡು ಬಿಟ್ಟು ನಗರಕ್ಕೆ ಬಂದು ದಾಳಿ ಮಾಡುವುದು ಸಾಮಾನ್ಯವಾಗಿದೆ. ಕಾಂಡಂಚಿನ ಪ್ರದೇಶದಲ್ಲಿರುವ ನಗರಕ್ಕೆ ಆಗಾಗ್ಗೆ ಬರುವ ಕಾಡುಪ್ರಾಣಿಗಳು ಜನರ ಮೇಲೆ ದಾಳಿ ಮಾಡುತ್ತಿದ್ದು ಭೀತಿಗೆ ಕಾರಣವಾಗಿವೆ. 

Leopard Strays Into School Attacks Student in Aligarh akb

ಅಲಿಘರ್‌: ಚಿರತೆಯೊಂದು ಶಾಲೆಗೆ ನುಗ್ಗಿ ಮಕ್ಕಳ ಮೇಲೆ ದಾಳಿ ನಡೆಸಿದಂತಹ ಘಟನೆ ಉತ್ತರಪ್ರದೇಶ(Uttar Pradesh)ದ ಅಲಿಘರ್‌(Aligarh)ನಲ್ಲಿ ನಡೆದಿದೆ.  ಶಾಲೆಯ ಕೊಠಡಿ ಸೇರಿದ ಚಿರತೆಯನ್ನು ಬಳಿಕ ಕೊಠಡಿಯೊಳಗೆ ಬಂದ್‌ ಮಾಡಲಾಯಿತು. ಅಲಿಘರ್‌ನ ಚೌಧರಿ ನಿಹಾಲ್‌ ಸಿಂಗ್‌  ಇಂಟರ್‌ ಕಾಲೇಜಿ(Chaudhary Nihal Singh Inter College)ನ ಆವರಣದಲ್ಲಿ ಈ ಘಟನೆ ನಡೆದಿದೆ. ಕೂಡಲೇ ಅರಣ್ಯಾಧಿಕಾರಿಗಳಿಗೆ ಚಿರತೆ ಇರುವ ಬಗ್ಗೆ ಮಾಹಿತಿ ನೀಡಲಾಯಿತು. ನಂತರ ಕಾಲೇಜಿನ ಸಿಬ್ಬಂದಿ ಅರಣ್ಯ ಇಲಾಖೆ ಅಧಿಕಾರಿಗಳ ಬರುವಿಕೆಗಾಗಿ ಕಾದು ಕುಳಿತರು. ವಿಷಯ ತಿಳಿದು ಶಾಲೆಯ ಹೊರಭಾಗದಲ್ಲೂ ಭಾರಿ ಜನಜಂಗುಳಿ ಸೇರಿ ಗದ್ದಲಕ್ಕೆ ಕಾರಣವಾಯಿತು. 

'ನಾನು ತರಗತಿಗ ಪ್ರವೇಶಿಸುತ್ತಿದ್ದಂತೆ ಅಲ್ಲಿ ಚಿರತೆ ಇರುವುದನ್ನು ಕಂಡೆ, ಕೂಡಲೇ ತಿರುಗಿ ಹೊರ ಬರಲು ಯತ್ನಿಸಿದಾಗ ಚಿರತೆ ನನ್ನ ಮೇಲೆ ಹಿಂದಿನಿಂದ ದಾಳಿ ನಡೆಸಿತು' ಎಂದು ಚಿರತೆಯಿಂದ ದಾಳಿಗೊಳಗಾದ ವಿದ್ಯಾರ್ಥಿ ಲಕ್ಕಿ ರಾಜ್‌ ಸಿಂಗ್‌(Lucky Raj Singh) ತಿಳಿಸಿದರು. ಸಣ್ಣ ಮಟ್ಟಿನ ಗಾಯಗಳೊಂದಿಗೆ  ಈ  ವಿದ್ಯಾರ್ಥಿ ಚಿರತೆ ದಾಳಿಯಿಂದ ಪಾರಾಗಿದ್ದು, ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಹೊರ ಹೋಗಿದ್ದಾನೆ. 

brave mother: ಚಿರತೆಯೊಂದಿಗೆ ಹೋರಾಡಿ ಮಗುವನ್ನು ರಕ್ಷಿಸಿದ ಸಾಹಸಿ ತಾಯಿ

'ಮುಂಜಾನೆ ವಿದ್ಯಾರ್ಥಿಗಳು ಕ್ಯಾಂಪಸ್‌ನತ್ತ ಬರುತ್ತಿದ್ದ ವೇಳೆ ಚಿರತೆಯೊಂದು ಶಾಲೆಯ ಆವರಣ ಪ್ರವೇಶಿಸಿದೆ. ಈ ವೇಳೆ ಓರ್ವ ವಿದ್ಯಾರ್ಥಿ ಗಾಯಗೊಂಡಿದ್ದಾನೆ. ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಈಗ ಆತ ಮನೆಯಲ್ಲಿದ್ದು ಆರೋಗ್ಯವಾಗಿದ್ದಾನೆ' ಎಂದು ಚೌಧರಿ ನಿಹಾಲ್‌ ಇಂಟರ್‌ ಕಾಲೇಜಿನ ಪ್ರಾಂಶುಪಾಲರಾದ ಯೋಗೇಶ್‌ ಯಾದವ್‌ ಘಟನೆಯ ಬಗ್ಗೆ ವಿವರಿಸಿದ್ದಾರೆ. ರೂಮ್‌ ನಂಬರ್ 10ರಲ್ಲಿ ಚಿರತೆ ಇತ್ತು. ಬಳಿಕ ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಲಾಯಿತು. ಹಾಗೆಯೇ ಸ್ಥಳೀಯ ಪೊಲೀಸ್ ಠಾಣೆಗೂ ಮಾಹಿತಿ ನೀಡಲಾಯಿತು ಎಂದು  ಅವರು ಹೇಳಿದರು. 

Karwar| ಮನೆಯೊಳಗೆ ನುಗ್ಗಿ ಮಗು ಹೊತ್ತೊಯ್ಯಲು ಯತ್ನಿಸಿದ ಚಿರತೆ, ಕಂಗಾಲಾದ ಜನತೆ..!

ಸದ್ಯ ಅರಣ್ಯ ಇಲಾಖೆಯವರು ಬಂದು ಚಿರತೆಯನ್ನು ಹಿಡಿದು ಕಾಡಿಗಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕೆಲ ದಿನಗಳ  ಹಿಂದಷ್ಟೇ ಮಧ್ಯಪ್ರದೇಶದಲ್ಲಿತಾಯಿಯೊಂದಿಗೆ ಚಳಿ ಕಾಯಿಸುತ್ತ ಕುಳಿತಿದ್ದ 8 ವರ್ಷದ ಬಾಲಕನನ್ನು ಹೊತ್ತೊಯ್ದಿತ್ತು. ಆದರೆ ಆ ಮಹಾತಾಯಿ ಚಿರತೆಯೊಂದಿಗೆ ಬರಿಗೈಲಿ ಹೋರಾಡಿ ತನ್ನ ಕಂದನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು. ಮಧ್ಯಪ್ರದೇಶದ ಸಿದ್ಧಿ ಜಿಲ್ಲೆಯಲ್ಲಿರುವ ಸಂಜಯ್‌ ಗಾಂಧಿ ರಾಷ್ಟ್ರೀಯ ಉದ್ಯಾನವನ(Sanjay Gandhi National Park)ದ ಸಮೀಪದಲ್ಲಿರುವ ಹಳ್ಳಿಯೊಂದರಲ್ಲಿ ಈ ಸಾಹಸಿ ಘಟನೆ ನಡೆದಿತ್ತು. ಬೈಗಾ ಆದಿವಾಸಿ( tribal) ಸಮುದಾಯದ ಕಿರಣ್‌ ಬೈಗಾ(Kiran Baiga) ಎಂಬಾಕೆ ಚಿರತೆಯನ್ನು ಕಿಲೋ ಮೀಟರ್‌ವರೆಗೆ ಹಿಂಬಾಲಿಸಿ ಮಗುವನ್ನು ರಕ್ಷಿಸಿದ್ದರು. ಭಾನುವಾರ ಸಂಜೆ ಇವರು ತಮ್ಮ  ಮೂವರು ಮಕ್ಕಳೊಂದಿಗೆ ಮನೆಯ ಮುಂಭಾಗದಲ್ಲಿ ಬೆಂಕಿ ಹಾಕಿ ಅದರ ಮುಂದೆ ಚಳಿ ಕಾಯಿಸುತ್ತ ಕುಳಿತಿದ್ದರು. ಈ ವೇಳೆ ಧುತ್ತನೇ ಬಂದ ಚಿರತೆಯೊಂದು ಇವರೊಂದಿಗೆ ಕುಳಿತಿದ್ದ ಕಿರಣ್‌ಳ 8 ವರ್ಷದ ಮಗು ರಾಹುಲ್‌(Rahul )ನನ್ನು ಬಾಯಿಯಲ್ಲಿ ಕಚ್ಚಿ ಹೊತ್ತೊಯ್ದಿತ್ತು. ಮಹಿಳೆಯ ಸಾಹಸಿ ಕಾರ್ಯದ ಬಗ್ಗೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

Latest Videos
Follow Us:
Download App:
  • android
  • ios