ಬಿಜೆಪಿ ನಾಯಕ ಭೇಟಿಗೆ ಕೆರಳಿದ ಲಷ್ಕರ್ ಉಗ್ರರು, Ghulam Nabi Azadಗೆ ಬೆದರಿಕೆ!

ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಕಾಂಗ್ರೆಸ್ ತೊರೆದ ಬೆನ್ನಲ್ಲೇ ಹಲವು ನಾಯಕರು ಪಕ್ಷದಿಂದ ರಾಜೀನಾಮೆ ನೀಡಿದ್ದರು. ಇದೀಗ ಗುಲಾಮ್ ನಬಿ ಆಜಾದ್‌ಗೆ ಬೆದರಿಕೆಯೊಂದು ಬಂದಿದೆ. ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರ ಭೇಟಿಗೆ  ಲಷ್ಕರ್ ಇ ತೈಬಾ ಉಗ್ರ ಸಂಘಟನೆ ಕೆರಳಿದೆ.

Lashkar e Taiba terror group threats Ghulam Nabi Azad ahead of rallies for meeting BJP leaders ckm

ಜಮ್ಮು ಮತ್ತು ಕಾಶ್ಮೀರ(ಸೆ.15); ಗುಲಾಮ್ ನಬಿ ಆಜಾದ್ ಕಾಂಗ್ರೆಸ್ ಪಕ್ಷ ತೊರೆದು ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಕಾಂಗ್ರಸ್ ಪಕ್ಷದೊಳಗಿನ ರಾಜಕೀಯ ಹಗ್ಗಜಗ್ಗಾಟ, ಭಿನ್ನಮತ, ರಾಹುಲ್ ಗಾಂಧಿಯ ಅಸಮರ್ಥ ನಾಯಕತ್ವದ ವಿರುದ್ಧ ಗುಲಾಮ್ ನಬಿ ಆಜಾದ್ ಹರಿಹಾಯ್ದಿದ್ದಾರೆ. ಗುಲಾಮ್ ನಬಿ ಆಜಾದ್ ಬೆಂಬಲಿಸಿ ಹಲವು ಕಾಂಗ್ರೆಸ್ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್‌ನ ಹಿರಿಯ ನಾಯಕರು ಗುಲಾಮ್ ನಬಿ ಆಜಾದ್‌ಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಗುಲಾಮ್ ನಬಿ ನಡೆ ಕಾಂಗ್ರೆಸ್ ಮಾತ್ರವಲ್ಲ, ಉಗ್ರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಗುಲಾಮ್ ನಬಿ ಆಜಾದ್ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದಾರೆ ಅನ್ನೋ ಕಾರಣಕ್ಕೆ ಪಾಕಿಸ್ತಾನ ಮೂಲದ ಲಷ್ಕರ್ ಇ ತೈಬಾ ಉಗ್ರ ಸಂಘಟನೆಗೆ ಹಿರಿಯ ನಾಯಕ ಗುಲಾಮ್ ನಬಿಗೆ ಬೆದರಿಕೆ ಹಾಕಿದ್ದಾರೆ.

ಲಷ್ಕರ್ ಇ ತೈಬಾ(Lashkar e Taiba) ಉಗ್ರ ಸಂಘಟನೆ ಪೋಷಿಸುತ್ತಿರುವ ರೆಸಿಸ್ಟೆಂಟ್ ಫ್ರಂಟ್ ಟೆರರ್ ಔಟ್‌ಫಿಟ್ ಇದೀಗ ಗುಲಾಮ್ ನಬಿ ಆಜಾದ್‌ಗೆ ಬೆದರಿಕೆ ಹಾಕಿದೆ. ಕಾಂಗ್ರೆಸ್(Congress) ಪಕ್ಷ ತೊರೆದ ಗುಲಾಮ್ ನಬಿ(Ghulam Nabi Azad)  ಕೇಂದ್ರ ಗೃಹ ಸಚಿವ ಅಮಿತ್ ಶಾ(Amit shah) ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್)Ajit Doval) ಭೇಟಿಯಾಗಿದ್ದಾರೆ. ಈ ನಡೆ ಉತ್ತಮವಲ್ಲ. ಹಿಂದೂ ಪಕ್ಷದ ನಾಯಕರ ಭೇಟಿ ಉಚಿತವಲ್ಲ ಎಂದು ರೆಸಿಸ್ಟೆಂಟ್ ಫ್ರಂಟ್ ಟೆರರ್ ಔಟ್‌ಫಿಟ್ ಉಗ್ರರು ಗುಲಾಮ್ ನಬಿಗೆ ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್‌ನಿಂದ ಹೊರಬಂದಿರುವ ಗುಲಾಮ್ ನಬಿ ಕಣಿವೆ ರಾಜ್ಯದಲ್ಲಿ(Jammu and Kashmir) ಸಮಾವೇಶಕ್ಕೆ ಸಜ್ಜಾಗಿದ್ದಾರೆ. ಕಾಶ್ಮೀರದ ಹಲವು ಭಾಗಗಳಲ್ಲಿ ಗುಲಾಮ್ ನಬಿ ಆಜಾದ್ ರ್ಯಾಲಿಗೆ ಮುಂದಾಗಿದ್ದಾರೆ. ಇದರ ಬೆನ್ನಲ್ಲೇ ಉಗ್ರರು ಬೆದರಿಕೆ ಹಾಕಿದ್ದಾರೆ. ಬಿಜೆಪಿ ನಾಯಕರ ಭೇಟಿಯನ್ನು ಎಂದಿಗೂ ಸಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ನೀಡಿದೆ. 

ಕಾಂಗ್ರೆಸ್‌ಗೆ ಭಾರಿ ಹಿನ್ನಡೆ, ಮಾಜಿ ಉಪ ಮುಖ್ಯಮಂತ್ರಿ ಸೇರಿ 50 ಹಿರಿಯ ನಾಯಕರು ರಾಜೀನಾಮೆ!

ಬೆದೆರಿಕೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿರುವ ಗುಲಾಮ್ ನಬಿ ಆಜಾದ್, ನಾನು ಯಾವತ್ತೂ ಅಜಿತ್ ದೋವಲ್ ಅವರನ್ನು ಭೇಟಿಯಾಗಿಲ್ಲ. ಇನ್ನು ಬಿಜೆಪಿ ನಾಯಕರನ್ನು ಭೇಟಿಯಾದ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದಿದ್ದಾರೆ. ಕಾಂಗ್ರೆಸ್(Congress) ತೊರೆದ ಆಜಾದ್‌ಗೆ ಉಗ್ರ ಸಂಘಟನೆಯ ಬೆದರಿಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಯಾರೇ ಅಧ್ಯಕ್ಷರಾದರೂ ರಾಹುಲ್‌ಗೆ ಗುಲಾಮನಂತೆ ಇರಬೇಕು: ಆಜಾದ್‌ ಕಿಡಿ

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮತ್ತೆಂದೂ ಸಿಗದು: ಆಜಾದ್‌
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಮರುಸ್ಥಾಪನೆ ಮಾಡುವುದಿಲ್ಲ. ಹಾಗಾಗಿ ಮತ್ತೆಂದೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ದೊರೆಯುವುದಿಲ್ಲ ಎಂದು ಇತ್ತೀಚಿಗೆ ಕಾಂಗ್ರೆಸ್‌ ಪಕ್ಷ ತೊರೆದು ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿರುವ ರಾಜಕೀಯ ನಾಯಕ ಗುಲಾಂ ನಬಿ ಆಜಾದ್‌ ಭಾನುವಾರ ಹೇಳಿದ್ದಾರೆ. ಉತ್ತರ ಕಾಶ್ಮೀರದ ಬಾರಾಮುಲ್ಲಾದಲ್ಲಿ ನಡೆಸಿದ ರಾರ‍ಯಲಿಯಲ್ಲಿ ಮಾತನಾಡಿದ ಅವರು, ‘ಗುಲಾಂ ನಬಿ ಆಜಾದ್‌ ಯಾರನ್ನೂ ತಪ್ಪು ದಾರಿಗೆ ಎಳೆದಿಲ್ಲ. ಮತಕ್ಕಾಗಿ ನಾನು ನಿಮ್ಮನ್ನು ಮೋಸದಿಂದ ಬಳಸಿಕೊಳ್ಳುವುದಿಲ್ಲ. 370ನೇ ವಿಧಿಯನ್ನು ಯಾವುದೇ ಕಾರಣಕ್ಕೂ ಮರುಸ್ಥಾಪನೆ ಮಾಡಲಾಗುವುದಿಲ್ಲ. ಅದಕ್ಕಾಗಿ ಸಂಸತ್ತಿನಲ್ಲಿ 3ನೇ 2ರಷ್ಟುಬಹುಮತದ ಅವಶ್ಯಕತೆ ಇದೆ. ಹಾಗಾಗಿ ಸಾಧಿಸಲು ಆಗಲು ಸಮಸ್ಯೆಗಳನ್ನು ಕೆದಕಬೇಡಿ’ ಎಂದು ಮನವಿ ಮಾಡಿದರು.

Latest Videos
Follow Us:
Download App:
  • android
  • ios