ಶಿಮ್ಲಾದಲ್ಲಿ ಭೂಕುಸಿತ: ಒಮ್ಮಿಂದೊಮ್ಮೆಗೆ ಧರೆಗುರುಳಿದ 7 ಬಹುಮಹಡಿ ಕಟ್ಟಡ: ವೀಡಿಯೋ
ಮಳೆ ನಿಂತರೂ ಮಳೆ ಹನಿ ನಿಂತಿಲ್ಲ ಎಂಬಂತೆ ಮಳೆಯಿಂದ ತೀವ್ರ ಹಾನಿಗೊಳಗಾಗಿದ್ದ ಹಿಮಾಚಲ ಪ್ರದೇಶದಲ್ಲಿ ಮತ್ತೆ ಭೂಕುಸಿತ ಉಂಟಾಗಿದ್ದು, ನಿರ್ಮಾಣ ಹಂತದ ಕಟ್ಟಡಗಳು ಸೇರಿದಂತೆ ಹಲವು ಕಟ್ಟಡಗಳು ಧರಾಶಾಯಿಯಾಗಿವೆ.

ಶಿಮ್ಲಾ: ಮಳೆ ನಿಂತರೂ ಮಳೆ ಹನಿ ನಿಂತಿಲ್ಲ ಎಂಬಂತೆ ಮಳೆಯಿಂದ ತೀವ್ರ ಹಾನಿಗೊಳಗಾಗಿದ್ದ ಹಿಮಾಚಲ ಪ್ರದೇಶದಲ್ಲಿ ಮತ್ತೆ ಭೂಕುಸಿತ ಉಂಟಾಗಿದ್ದು, ನಿರ್ಮಾಣ ಹಂತದ ಕಟ್ಟಡಗಳು ಸೇರಿದಂತೆ ಹಲವು ಕಟ್ಟಡಗಳು ಧರಾಶಾಹಿಯಾಗಿವೆ. ಬಹುಮಹಡಿಯ 6ಕ್ಕೂ ಹೆಚ್ಚು ಕಟ್ಟಡಗಳು ಒಮ್ಮಿಂದೊಮ್ಮೆಲೆ ಕುಸಿದು ಬಿದ್ದಿದ್ದು, ಈ ದೃಶ್ಯ ಅಲ್ಲಿದ್ದ ಸಿಸಿ ಕ್ಯಾಮರಾಗಳಲ್ಲಿ ಸೆರೆ ಆಗಿದ್ದು ವೈರಲ್ ಆಗಿವೆ. ಹಿಮಾಚಲ ಪ್ರದೇಶ (Himachal Pradesh) ಕುಲು (Kulu) ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಇದರಿಂದ ಪ್ರಾಣಹಾನಿಯಾದ ಬಗ್ಗೆ ವರದಿ ಆಗಿಲ್ಲ,
ಕುಲು ಜಿಲ್ಲೆಯ ಅನ್ನಿ ನಗರದಲ್ಲಿ ಈ ಅನಾಹುತ ಸಂಭವಿಸಿದೆ. ಹಲವು ಕಟ್ಟಡಗಳು ಕುಸಿದಿದ್ದು, ಇದರ ಜೊತೆಗ ಇನ್ನು ಹಲವು ಕಟ್ಟಡಗಳಿಗೆ (Building) ಹಾನಿಯಾಗಿವೆ. ಮಳೆಯಿಂದ ಇಲ್ಲಿ ಭೂಮಿ ಬಿರುಕು ಬಿಟ್ಟಿತ್ತು. ಹೀಗಾಗಿ ಕಟ್ಟಡಗಳು ಈ ಮೊದಲೇ ಶಿಥಿಲಗೊಂಡಿದ್ದು, ಬೀಳುವ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಕಟ್ಟಡದಲ್ಲಿ ವಾಸವಿದ್ದವರನ್ನು ಆಡಳಿತವೂ ಈಗಾಗಲೇ ತೆರವುಗೊಳಿಸಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಗೌರಿಕುಂಡ್‌ನಲ್ಲಿ ಭೂಕುಸಿತಕ್ಕೆ 4 ಬಲಿ, 16 ಜನ ನಾಪತ್ತೆ, ಕೇದಾರನಾಥ ಯಾತ್ರೆ ಸ್ಥಗಿತ
ಕಟ್ಟಡದಲ್ಲಿ ಬಿರುಕು ಕಂಡು ಬಂದಿತ್ತು. ಹೀಗಾಗಿ ಎರಡು ಮೂರು ದಿನಗಳ ಹಿಂದೆಯೇ ಕಟ್ಟಡದ ಮಾಲೀಕರು ಕಟ್ಟಡದಲ್ಲಿ ವಾಸವಿದ್ದವರನ್ನು ತೆರವು ಮಾಡಿದ್ದರು ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ. ಭೂಮಿಯೊಳಗಿನ ಬಿರುಕಿನಿಂದಾಗಿ ಈ ಕಟ್ಟಡದಲ್ಲೂ ಬಿರುಕು ಕಾಣಿಸಿಕೊಂಡಿತ್ತು ಹೀಗಾಗಿ 4 ದಿನದಿಂದ ಈ ಕಟ್ಟಡದಲ್ಲಿ ಯಾರೂ ವಾಸ ಮಾಡುತ್ತಿರಲಿಲ್ಲ ಎಂದು ಅನ್ನಿ ನಗರದ ನಿವಾಸಿ ವೇಣು ಶರ್ದ್ ಹೇಳಿದ್ದಾರೆ. ಚರಂಡಿ ವ್ಯವಸ್ಥೆಯ ಕೊರತೆಯೇ ಈ ಕಟ್ಟಡಗಳ ಕುಸಿತಕ್ಕೆ ಕಾರಣ ಎಂದು ಅವರು ದೂರಿದ್ದಾರೆ. ಇಲ್ಲಿ ಕಡಿದಾದ ಸ್ಥಳದಲ್ಲಿಯೂ ಕಟ್ಟಡಗಳನ್ನು ನಿರ್ಮಿಸಲಾಗಿತ್ತು.
ಹೆಂಡ್ತಿ, ಮಕ್ಕಳ ಸಾವಿನ ಸ್ಮಾರಕವಾಗಿ ಬಡಜನರಿಗೆ ಮನೆ ನಿರ್ಮಿಸಿಕೊಟ್ಟ ಕುಟುಂಬ ಪ್ರೇಮಿ