ನವದೆಹಲಿ(ಫೆ.12):  ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಮೇಲಿನ ಚರ್ಚೆ ಹಲವು ಪ್ರಮುಖ ಅಂಶಗಳ ಮೇಲೆ ಬೆಳಕು ಚೆಲ್ಲಿದೆ. ಇಷ್ಟೇ ಅಲ್ಲ ವಿಪಕ್ಷಗಳ ಟೀಕೆ ಹಾಗೂ ಬಜೆಟ್ ಕುರಿತ ಪ್ರಶ್ನೆಗಳಿಗೆ ಕೇಂದ್ರ ಉತ್ತರ ನೀಡಿದೆ. ರಾಜ್ಯಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ರಾಜ್ಯಸಭಾ ಸದಸ್ಯ, ಬಿಜೆಪಿ  ರಾಷ್ಟ್ರೀಯ ವಕ್ತಾರ ರಾಜೀವ್ ಚಂದ್ರಶೇಖರ್ ವಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ್ದಾರೆ. ಇಷ್ಟೇ ಅಲ್ಲ, ಈ ಬಾರಿಯ ಬಜೆಟ್ ಭಾರತದ ಅಭಿವೃದ್ಧಿಯಲ್ಲಿ ಯಾವ ರೀತಿ ಪಾತ್ರ ನಿರ್ವಹಿಸಲಿದೆ ಅನ್ನೋ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

 

ಸೋಶಿಯಲ್ ಮೀಡಿಯಾಗೆ ಮೂಗುದಾರ; ಆರ್‌ಸಿ ಪ್ರಶ್ನೆಗೆ ಸರ್ಕಾರದ ಉತ್ತರ!.

ಭಾರತದ ಆರ್ಥಿಕತೆ ಕುರಿತು ವಿಪಕ್ಷಗಳ ಟೀಕೆ ಹಾಗೂ ಸುಳ್ಳು ಆಪಾದನೆಗೆ ರಾಜೀವ್ ಚಂದ್ರಶೇಖರ್ ತಿರುಗೇಟು ನೀಡಿದ್ದಾರೆ. ಕೊರೋನಾ ವೈರಸ್ ಕಾರಣ ದೇಶ 18 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಇದು ನೇರವಾಗಿ ಭಾರತದ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ಕೊರೋನಾ ಸಾಂಕ್ರಾಮಿಕ ರೋಗ ಯಾವುದೇ ಒಂದು ರಾಜ್ಯಕ್ಕೆ ಅಥವಾ ಕೇಂದ್ರಕ್ಕೆ ಸೀಮಿತವಾಗಿರಲಿಲ್ಲ. ಇದರ ಪರಿಣಾಮ ಕೂಡ ಸೀಮಿತವಾಗರಿಲ್ಲ. ಇದು ದೇಶಕ್ಕಾಗಿ ಅತೀ ದೊಡ್ಡ ನಷ್ಟ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಚೀನಾದಿಂದ ಆದ ನಷ್ಟವನ್ನು ಕೇಂದ್ರ ಸರ್ಕಾರ ಹಲವು ಯೋಜನೆಗಳ ಮೂಲಕ ಸರಿದೂಗಿಸುತ್ತಿದೆ. ಇದು ಶತಮಾನಗಳಿಗೆ ಒಮ್ಮೆ ಬರುವ ಸಾಂಕ್ರಾಮಿಕ ರೋಗ, ಇಷ್ಚೇ ಅಲ್ಲ ಭಾರತವನ್ನು ಸ್ವಾವಲಂಬಿ ಮಾಡಲು ಶತಮಾನಗಳಿಗೆ ಒಮ್ಮೆ ಸಿಗುವ ಅವಕಾಶ ಕೂಡ ಆಗಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದರು.

ಬಜೆಟ್ 2021: ಕೊರೋನಾ ಗೆದ್ದ ಭಾರತ ಇದೀಗ ಅಭಿವೃದ್ಧಿಯತ್ತ ದಾಪುಗಾಲು; ರಾಜೀವ್ ಚಂದ್ರಶೇಖರ್!.

ಈ ಬಾರಿಯ ಬಜೆಟ್ ಭಾರತದ ಆರ್ಥಿಕತೆಯ ಪುನಶ್ಚೇತನ ,  ನಿರುದ್ಯೋಗ ಸಮಸ್ಯೆಗಳಿಗೆ ಪರಿಹಾರವಾಗಿದೆ. ಕೊರೋನಾ ವಕ್ಕರಿಸಿದ ಬಳಿಕದ ಆರ್ಥಿಕತೆ ಗಮನದಲ್ಲಿಡಲಾಗಿದೆ. ಕೊರೋನಾ ಸಂದರ್ಭದಲ್ಲಿ ಭಾರತಕ್ಕೆ ಅತೀ ಹೆಚ್ಚು ವಿದೇಶಿ ಬಂಡವಾಳಗಳು ಹರಿದುಬಂದಿದೆ. ಇಷ್ಟೇ ಅಲ್ಲ ಕೇಂದ್ರ ಸರ್ಕಾರ ತೆಗೆದುಕೊಂಡು ನಿರ್ಧಾರಗಳಿಂದ ಮುಂಬರುವ ವರ್ಷಗಳಲ್ಲಿ ಭಾರತ 11. 50 % ಆರ್ಥಿಕ ಅಭಿವೃದ್ಧಿ ಕಾಣಲಿದೆ ಎಂದರು.

ಸುಳ್ಳಿನ ರಾಜಕೀಯವನ್ನು ಜನರು ತಿರಸ್ಕರಿಸಿದ್ದಾರೆ, ಕರ್ನಾಟಕ ಚುನಾವಣೆಯೇ ಉದಾಹರಣೆ: ಆರ್‌ಸಿ

ಈ ಬಾರಿಯ ಬಜೆಟ್ ಮಹತ್ವದ ಮೈಲಿಗಲ್ಲು ಯಾಕೆ ಅನ್ನೋದನ್ನು ರಾಜೀವ್ ಚಂದ್ರಶೇಖರ್ ವಿವರಿಸಿದ್ದಾರೆ. ಈ ಬಾರಿಯ  ಬಜೆಟ್ ಅಭಿವೃದ್ಧಿಗೆ ಮತ್ತಷ್ಟು ವೇಗ ಹಾಗೂ ಉದ್ಯೋಗ ಸೃಷ್ಟಿಗೆ ಕಾರಣವಾಗಲಿದೆ ಎಂದರು. ಭಾರತದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಸರ್ಕಾರದ ಕಾರ್ಯಯೋಜನೆಯ ಸಂಪೂರ್ಣ ಅನುಷ್ಠಾನ, ಉತ್ಪಾದಕತೆ ಹೆಚ್ಚಿಸುವುದು, ಆರ್ಥಿಕ ಕ್ಷೇತ್ರಗಳ ಅಭಿವೃದ್ಧಿ ಹಾಗೂ ಪಾರದರ್ಶಕತೆ ಈ ಬಾರಿಯ ಬಜೆಟ್‌ ಒಳಗೊಂಡಿದೆ.

ಕೊರೋನಾ ಸಂದರ್ಭದಲ್ಲಿ ನರೇಂದ್ರ ಮೋದಿ ಸರ್ಕಾರ ಭಾರತವನ್ನು ಮತ್ತಷ್ಟು ಸ್ವಾವಲಂಬಿಯನ್ನಾಗಿ ಮಾಡಿದ್ದಾರೆ. ಇದರಿಂದ ಮುಂದೆ ಯಾವುದೇ ರೀತಿ ಸಾಂಕ್ರಾಮಿಕ ರೋಗ ಅಥವಾ ನೈಸರ್ಗಿಕ ವಿಕೋಪ ಎದುರಾದರೂ ಭಾರತದ ಆರ್ಥಿಕತೆಗೆ ಯಾವ ಧಕ್ಕೆ ಬರದ ರೀತಿಯಲ್ಲಿ ಭಾರತವನ್ನ ಸ್ವಾವಲಂಬಿಯನ್ನಾಗಿ ಮಾಡಲಾಗಿದೆ. ಸದ್ಯ ಭಾರತ ಇತರ ದೇಶವನ್ನು ಅವಲಂಬಿಸುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಎಂದರು.

ಡಿಮಾನಿಟೈಸೇಶನ್‌ನಿಂದ ಭ್ರಷ್ಟಚಾರ, ಕಪ್ಪು ಹಣಕ್ಕೆ ಬ್ರೇಕ್; ರಾಜೀವ್ ಚಂದ್ರಶೇಖರ್!

ಈ ಬಜೆಟ್ ಒಂದು ರೂಪಾಯಿ ಎಲ್ಲಿಂದ ಬಂತು ಹಾಗೂ ಎಲ್ಲಿ ಖರ್ಚಾಗುತ್ತಿದೆ ಅನ್ನೋ ಒಂದೊಂದು ರೂಪಾಯಿ ಲೆಕ್ಕವನ್ನು ಹೇಳುತ್ತಿದೆ. ಆತ್ಮನಿರ್ಭರ್ ಭಾರತ ಅಡಿಯಲ್ಲಿ ಭಾರತ ತ್ವರಿತಗತಿಯಲ್ಲಿ ಅಭಿವೃದ್ಧಿಯಾಗುತ್ತಿದೆ. ಆರ್ಥಿಕತೆ ಪುನಶ್ಚೇತನಗೊಳುತ್ತಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.