Asianet Suvarna News Asianet Suvarna News

ಸರ್ಕಾರ ರಚನೆಗೆ ನಿತೀಶ್ ಕುಮಾರ್ ಜೊತೆ ರಹಸ್ಯ ಮಾತುಕತೆ ಎಂದ ಆರ್ ಜೆಡಿಯ ತೇಜ್ ಪ್ರತಾಪ್!

* ಸರ್ಕಾರ ರಚನೆ ಮಾಡಲು ನಿತೀಶ್ ಕುಮಾರ್ ಜೊತೆ ರಹಸ್ಯ ಮಾತುಕತೆ

* ಆರ್ ಜೆಡಿ ಪಕ್ಷದ ಇಫ್ತಾರ್ ಪಾರ್ಟಿಯಲ್ಲಿ ಭಾಗವಹಿಸಿದ  ಬಳಿಕ ಈ ಮಾತು ಹೇಳಿದ ತೇಜ್ ಪ್ರತಾಪ್

*ಆರ್ ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್, ಲಾಲೂ ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ

Lalu Prasad Yadav elder son RJD Leader Tej Pratap claims secret talks with Bihar CM Nitish Kumar to form govt san
Author
Bengaluru, First Published Apr 23, 2022, 5:36 PM IST

ನವದೆಹಲಿ (ಏ.23): ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Bihar CM Nitish Kumar) ಶುಕ್ರವಾರ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ (Former Bihar CM Rabri Devi ) ಅವರ ನಿವಾಸದಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ (Iftar Party) ಭಾಗವಹಿಸಿದ್ದು ಭಾರೀ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಇಫ್ತಾರ್ ಕೂಟಕ್ಕೆ ನಿತೀಶ್ ಭೇಟಿ ಕುರಿತು ಮಾತನಾಡಿದ ಲಾಲು ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ (Tej Pratap Yadav) ಅವರು ಬಿಹಾರ ಸಿಎಂ ಜೊತೆ ರಹಸ್ಯ ಮಾತುಕತೆ ನಡೆಸಿದ್ದು, ರಾಜ್ಯದಲ್ಲಿ ಮತ್ತೆ ಸರ್ಕಾರ ರಚನೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದೇವೆ ಎಂದು ಹೇಳಿದರು. ಈ ಹಿಂದೆ ಬಿಹಾರ ಸಿಎಂ ನಿತೀಶ್‌ ಕುಮಾರ್‌ಗೆ ‘ನೋ ಎಂಟ್ರಿ’ ಬೋರ್ಡ್‌ ಹಾಕಿದ್ದೆ, ಈಗ ನಿತೀಶ್‌ ಚಾಚಾ ಜೀ ಎಂಬ ಬೋರ್ಡ್‌ ಹಾಕಿದ್ದೇನೆ, ಹಾಗಾಗಿ ಅವರು ಬಂದರು. ಅವರು ಬಂದಿದ್ದರಿಂದ ಸರ್ಕಾರ ರಚನೆಯಾಗಲಿದೆ. ಸರ್ಕಾರ ರಚಿಸುತ್ತೇನೆ, ಅದು ರಹಸ್ಯವಾಗಿದೆ, ನಾನು ನಿತೀಶ್ ಜೀ ಅವರೊಂದಿಗೆ ರಹಸ್ಯವಾಗಿ ಮಾತನಾಡಿದ್ದೇನೆ ಎಂದು ತೇಜ್ ಪ್ರತಾಪ್ ಹೇಳಿದ್ದಾರೆ.

"ನಾವು ಇಫ್ತಾರ್ ಕೂಟವನ್ನು ಆಯೋಜಿಸಿದ್ದೆವು ಇಲ್ಲಿ ನಿತೀಶ್ ಜಿ ಮಾತ್ರವಲ್ಲ, ಆದರೆ ಬಿಜೆಪಿಯ ಶಹನವಾಜ್ ಹುಸೇನ್, ಎಲ್ ಜೆಪಿ ಚಿರಾಗ್ ಪಾಸ್ವಾನ್ ಮತ್ತು ಇತರ ನಾಯಕರು ಕೂಡ ಬಂದಿದ್ದರು" ಎಂದು ತೇಜ್ ಪ್ರತಾಪ್  ಯಾದವ್ ಹೇಳಿದ್ದಾರೆ.

ಆದರೆ, ಲಾಲು ಅವರ ಕಿರಿಯ ಪುತ್ರ ತೇಜಸ್ವಿ ಯಾದವ್ ಅಂತಹ ಯಾವುದೇ ಹೇಳಿಕೆ ನೀಡಿಲ್ಲ ಮತ್ತು ಎಲ್ಲರೂ ಇಫ್ತಾರ್ ಕೂಟದಲ್ಲಿ ಭಾಗವಹಿಸುವುದು ಸಂಪ್ರದಾಯ ಎಂದು ಹೇಳಿದ್ದಾರೆ.  "ನಾವು ಬಿಜೆಪಿ, ಜೆಡಿಯು ಅಥವಾ ಎಲ್‌ಜೆಪಿಯಿಂದ ಎಲ್ಲ ನಾಯಕರಿಗೆ ಆಹ್ವಾನ ನೀಡಿದ್ದೇವೆ ಮತ್ತು ಎಲ್ಲರೂ ಇಫ್ತಾರ್ ಕೂಟದಲ್ಲಿ ಭಾಗವಹಿಸುವುದು ಸಂಪ್ರದಾಯವಾಗಿದೆ" ಎಂದು ನಿತೀಶ್ ಕುಮಾರ್ 'ಮಹಾಘಟಬಂಧನ್'ಗೆ ಸೇರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಬೋಚಹಾನ್‌ ಉಪಚುನಾವಣೆಯಲ್ಲಿ ಸೋಲಿನ ಬಗ್ಗೆ ಬಿಜೆಪಿ ಮತ್ತು ಜೆಡಿಯು ನಡುವೆ ಭಿನ್ನಾಭಿಪ್ರಾಯವಿದೆ ಎಂದು ವರದಿಯಾದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.

ರಾಮ ದೇವರಲ್ಲ ಕಥೆಯಲ್ಲಿನ ಪಾತ್ರವಷ್ಟೇ: ಬಿಹಾರ ಮಾಜಿ ಸಿಎಂ ಹೇಳಿಕೆ

ಲಾಲೂ ಪ್ರಸಾದ್ ಯಾದವ್ ಅವರ ಮನೆಯ ಸಮೀಪವೇ ವಾಸಿಸುವ ನಿತೀಶ್ ಕುಮಾರ್ ಅವರು ತಮ್ಮ ವೈಯಕ್ತಿಕ ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ಇಫ್ತಾರ್ ಪಾರ್ಟಿಗೆ ತೆರಳಿದ್ದರು. ಆ ಮೂಲಕ ರಾಜಕೀಯದ ಅಭಿಮಾನಿಗಳು ತಾವು ಕೊನೆಯ ಬಾರಿಗೆ ಆರ್ ಜೆಡಿ ಪಕ್ಷದ ಇಫ್ತಾರ್ ಪಾರ್ಟಿಯಲ್ಲಿ ಭಾಗಿಯಾದ ದಿನಗಳನ್ನು ನೆನಪಿಸಿಕೊಳ್ಳುವಂತೆ ಮಾಡಿದ್ದರು. 

ಬಿಹಾರದಲ್ಲಿ ನಾಲ್ಕು ವರ್ಷದ ಪದವಿ ಪರಿಚಯಿಸಲು ಸಿದ್ಧತೆ

ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ಮತ್ತು ಪಕ್ಷದ ಉತ್ತರಾಧಿಕಾರಿ ತೇಜಸ್ವಿ ಯಾದವ್ ಸೇರಿದಂತೆ ರಾಬ್ರಿ ದೇವಿ ಅವರ ಕುಟುಂಬದ ಎಲ್ಲಾ ಸದಸ್ಯರು ಮುಖ್ಯಮಂತ್ರಿಗೆ ಆತ್ಮೀಯ ಸ್ವಾಗತವನ್ನು ನೀಡಿದ್ದರಿಂದ ರಾಜಕೀಯ ದ್ವೇಷಕ್ಕಿಂತ ಹೆಚ್ಚಾಗಿ ಆತ್ಮೀಯತೆ ಅಲ್ಲಿ ಕಾಣಿಸಿಕೊಂಡಿತ್ತು.  ನಿತೀಶ್ ಕುಮಾರ್ ಅವರು ಪಾರ್ಟಿಗೆ ಬಂದು ತಮ್ಮ ಆಸನದಲ್ಲಿ ಕುಳಿತ ಬೆನ್ನಲ್ಲಿಯೇ, ಅಲ್ಲಿಗೆ ಬಂದ ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ ಹಾಗೂ ಎಲ್ ಜೆಪಿ ಪಕ್ಷದ ನಾಯಕ ಚಿರಾಗ್ ಪಾಸ್ವಾನ್ ಅವರ ಪಾದಗಳನ್ನು ಮುಟ್ಟಿ ಸ್ವಾಗತಿಸಿದರು. ಜೆಡಿಯು ಪಕ್ಷವನ್ನು ನಿರಂತರವಾಗಿ ಟೀಕಿಸುತ್ತಲೇ ಬಂದಿದ್ದ ಚಿರಾಗ್ ಪಾಸ್ವಾನ್, ನಿತೀಶ್ ಕುಮಾರ್ ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿದ್ದು, ಬಹುತೇಕರಿಗೆ ಅಚ್ಚರಿ ತಂದಿತ್ತು. 2020ರ ಬಿಹಾರ ವಿಧಾನಸಭೆ ಚುನಾವಣೆಗೂ ಮುನ್ನ ಚಿರಾಗ್ ಪಾಸ್ವಾನ್, ಜೆಡಿಯು ವಿರುದ್ಧ ನಿರಂತರವಾಗಿ ಟೀಕೆ ಮಾಡಿದ್ದರು.  ಆದರೆ ಬಿಹಾರದಲ್ಲಿ ಸಾಮಾನ್ಯವಾಗಿ ಪ್ರದರ್ಶಿತವಾಗುವ ರಾಜಕೀಯ ಸಮೀಕರಣಗಳನ್ನು ಸುಳ್ಳಾಗಿಸುವುದಕ್ಕೆ ಇದು ಒಂದು ಸಂದರ್ಭವಾಗಿ ಉಳಿಯಿತು.

Follow Us:
Download App:
  • android
  • ios