Asianet Suvarna News Asianet Suvarna News

ಗಾಂಧೀಜಿಯ ಸರಳ ಅರ್ಥಶಾಸ್ತ್ರ ಇಂದಿನ ಕಾಲಕ್ಕೂ ಏಕೆ ಮುಖ್ಯ?

ಸತ್ಯ ಮತ್ತು ಅಹಿಂಸೆ ಗಾಂಧಿ​ ಅರ್ಥಶಾಸ್ತ್ರದ ಎರಡು ಕಣ್ಣುಗಳು ಎನ್ನುವುದು ನಿರ್ವಿವಾದ. ಈ ವಿಚಾರಗಳು ಗಾಂಧಿ​ೕಜಿಯ ಅರಿವಿನಲ್ಲಿ ಇದ್ದುದರಿಂದಲೇ ‘ಜನಕೋಟಿಗೆ ತಗುಲಿರುವ ರೋಗ ಹಣದ ಬರವಲ್ಲ.

Gandhi Jayanti 2021 Significance and Relevance of Gandhi Economics hls
Author
Bengaluru, First Published Oct 2, 2021, 12:58 PM IST

ಇಂದಿನ ಜಾಗತೀಕರಣ ದಾಂಗುಡಿಯ ಭರಾಟೆಯಲ್ಲಿ ಮಹಾತ್ಮ ಗಾಂಧೀಜಿಯವರ ವಿಚಾರಗಳು ಎಷ್ಟುಪ್ರಸ್ತುತ ಎಂಬು ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಇಂಥ ಚರ್ಚೆಯಲ್ಲಿ ಗಾಂಧೀಜಿ ಒಬ್ಬ ಅರ್ಥಶಾಸ್ತ್ರಜ್ಞರಾಗಿ ಹೇಗೆ ಪ್ರಸ್ತುತರಾಗುತ್ತಾರೆ, ಅವರು ಪ್ರತಿಪಾದಿಸಿದ ಜನಸಾಮಾನ್ಯರ ಪರವಾದ ಅರ್ಥಶಾಸ್ತ್ರದ ಮೇಲೆ ಹೇಗೆಲ್ಲಾ ಪ್ರಹಾರ ನಡೆದಿದೆ ಎಂಬುದನ್ನು ಗಮನಿಸಿದಾಗ ಜಾಗತೀಕರಣದ ಓಲೈಕೆಯ ಕೊಳ್ಳುಬಾಕ ನೀತಿ ಪ್ರಪಂಚ ಎತ್ತ ಸಾಗುತ್ತಲಿದೆ ಎಂಬುದೇ ಒಂದು ಪ್ರಶ್ನೆ ಮೂಡುತ್ತದೆ.

ಗಾಂ​ಧೀಜಿಯವರ ಗ್ರಾಮ ಸ್ವರಾಜ್‌ದಲ್ಲಿ ಗ್ರಾಮದ ಕೆಲಸವನ್ನು ಗ್ರಾಮದವರು ಕೂಡಿ ಮಾಡುವುದು, ಶಿಕ್ಷಣವನ್ನು ಎಲ್ಲಾ ಮಕ್ಕಳು ಕೂಡಿಯೇ ಅಭ್ಯಸಿಸುವುದು, ಶುದ್ಧ ನೀರು ಆಹಾರವನ್ನು ಅವರಿರುವ ಸ್ಥಳದಲ್ಲಿಯೇ ಪಡೆಯುವುದು, ಉಡುವ ಬಟ್ಟೆಗಳನ್ನು ನೇಯ್ದುಕೊಳ್ಳುವುದು, ದಿನ ಬಳಕೆಗೆ ಬೇಕಾದ ಅವಶ್ಯ ವಸ್ತುಗಳನ್ನು ಗೃಹ ಕೈಗಾರಿಕೆಗಳ ಮೂಲಕ ತಯಾರಿಸಿಕೊಳ್ಳುವುದು, ನಮ್ಮ ಕೈಕಾಲುಗಳಿಗೆ ಕೆಲಸಕೊಟ್ಟು ಇರುವ ಬದುಕನ್ನು ಪರಿಸರದೊಂದಿಗೆ ಬೆರೆಸಿ ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳುವುದಾಗಿತ್ತು. ಇನ್ನು ಅಧಿ​ಕಾರವನ್ನು ಸ್ಥಳೀಯ ಸಂಸ್ಥೆಗಳಲ್ಲಿ ಹಂಚಿಕೊಳ್ಳುವುದು ಸೇರಿದಂತೆ ಇನ್ನೂ ಸಿದ್ಧಾಂತಗಳನ್ನು ಪ್ರತಿಪಾದಿಸಿದ್ದರು.

ಜಲಜೀವನ್ ಮಿಷನ್ App ಲಾಂಚ್: ಉತ್ಸಾಹ, ಶಕ್ತಿಯಿಂದ ಯಶಸ್ಸು ಸಾಧ್ಯ ಎಂದ ಮೋದಿ!

ದುಡಿಮೆಯ ಬರ

ಸತ್ಯ ಮತ್ತು ಅಹಿಂಸೆ ಗಾಂಧಿ​ ಅರ್ಥಶಾಸ್ತ್ರದ ಎರಡು ಕಣ್ಣುಗಳು ಎನ್ನುವುದು ನಿರ್ವಿವಾದ. ಈ ವಿಚಾರಗಳು ಗಾಂಧಿ​ೕಜಿಯ ಅರಿವಿನಲ್ಲಿ ಇದ್ದುದರಿಂದಲೇ ‘ಜನಕೋಟಿಗೆ ತಗುಲಿರುವ ರೋಗ ಹಣದ ಬರವಲ್ಲ. ದುಡಿಮೆಯ ಬರ’ ಈ ಮಾತು ಆಧುನಿಕತೆಯ ಯಂತ್ರೋಪಕರಣಗಳು ಜನತೆಯ ಕೈಕಾಲುಗಳ ಸಮತೋಲನವನ್ನು ಕಸಿದುಕೊಂಡಿರುವ ರೂಪಕವನ್ನು ನಿರೂಪಿಸುತ್ತದೆ. ಕಾಲ್‌ರ್‍ಮಾಕ್ಸ್‌ನ ಸಮಾಜವಾದಕ್ಕೆ ಪರ್ಯಾಯವಾದ ಧರ್ಮದರ್ಶಿ ತತ್ವವು ಗ್ರಾಮಗಳನ್ನು ಸ್ವಾವಲಂಬಿಯಾಗಿ ಮಾಡುವ ಉದ್ದೇಶ ಹೊಂದಿದೆ.

ಕೊಳ್ಳುಬಾಕ ನೀತಿ ಮಾರಕ

ಕಾಲದೊಂದಿಗೆ ಹೆಜ್ಜೆ ಹಾಕುವ ನಾವೀಗ ವಿದೇಶಿಗರ ಅಣತಿಯಂತೆ ನಿಯಂತ್ರಿಸಲ್ಪಡುವ ಕೊಳ್ಳುಬಾಕ ನೀತಿಯನ್ನು ಯತಾವತ್ತಾಗಿ ಅನುಸರಿಸುವ ಮಟ್ಟತಲುಪಿದ ಇಂದಿನ ಹಳ್ಳಿಗಳೂ ಸಹ ನಗರಗಳ ಬಾಲಗಳಾಗಿ ನೀತಿ ಬಿಟ್ಟಿವೆ. ಕೈಕಾಲುಗಳು ಕೆಲಸ ಕಡಿಮೆ ಮಾಡಿವೆ, ಬಾಯಿ ಕಿವಿಗೆ ಮೊಬೈಲ್‌ ನೀಡಿವೆ. ಅವಿಭಕ್ತ ಕುಟುಂಬ ದಿಕ್ಕೆಟ್ಟು ಬೀದಿ ಪಾಲಾಗಿದೆಯಲ್ಲದೇ ನಮ್ಮ ಶಿಕ್ಷಣ ಸರ್ವಕಾಲಕ್ಕೂ ದೇಶಿಯ ಹಿಡಿತದಲ್ಲಿರಬೇಕಿತ್ತು. ಆದರೆ ಅದು ವ್ಯಾಪಾರಕ್ಕಿಳಿದು ಮಕ್ಕಳಲ್ಲಿ ಗುಲಾಮಗಿರಿ ಪ್ರವೃತ್ತಿ ಬೆಳೆಸಿದೆ. ಅನಾದಿ ಕಾಲದಿಂದಲೂ ದೇಶದ ಬಹುಪಾಲು ಜನತೆಗೆ ಉದ್ಯೋಗ ನೀಡಿದ ಗ್ರಾಮೀಣ ಕಸಬು ಈಗ ಇನ್ನೂ ಅಪಹಾಸ್ಯಕ್ಕೀಡಾಗಿದೆ.

ಈ ದೇಶದ ಬಡವರಿಗೆ ಸೇರಿದ ಆಸ್ತಿಗಳಲ್ಲಿ ಸರ್ಕಾರವು ವಿವಿಧ ಯೋಜನೆಗಳ ಮೂಲಕ ಅಪಾರ ಹಣ ವ್ಯಯಿಸುತ್ತದೆ. ಈ ವ್ಯಯವಾಗುವ ಹಣದಿಂದ ಖಾಸಗಿ ವಲಯದವರಿಗೆ ಸೃಷ್ಟಿಯಾಗುವ ವ್ಯಾಪಾರಿ ಅವಕಾಶಗಳಿಂದ ತುಂಬಾ ಸಂತೋಷವಾಗಿ ಉಳ್ಳವರೆಲ್ಲಾ ಅದರಲ್ಲಿ ಭಾಗಿಯಾಗುತ್ತಾರೆ. ಆದರೆ ಬಡವರು ಬಡವರಾಗಿಯೇ ಉಳಿದುಕೊಂಡಿದ್ದಾರೆ. ಕೃಷಿ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಸಾರಿಗೆಯು ಸೇರಿದಂತೆ ಉಳಿದೆಲ್ಲಾ ಕ್ಷೇತ್ರಗಳಲ್ಲಿರುವ ಬಡವರ ಆಸ್ತಿಯನ್ನು ದಕ್ಷ ದೂರದೃಷ್ಟಿಯಿಂದ ನಿರ್ವಹಿಸಿದ್ದೇ ಆದರೆ ಯಾವ ಮೀಸಲಾತಿಯ ಕಾರ್ಯಕ್ರಮಗಳು ನಮ್ಮಲ್ಲಿ ಅವಶ್ಯವಿಲ್ಲ ಎಂದು ಗಾಂಧಿ​ೕಜಿಯವರು ಈ ಮೊದಲೇ ಹೇಳಿದ್ದರು.

ಭಯೋತ್ಪಾದಕರು ಸತ್ತಾಗ ಅತ್ತಿದ್ದ ಸೋನಿಯಾ ಗಾಂಧಿ: ಪ್ರಹ್ಲಾದ ಜೋಶಿ

ಬಡತನವೇಕೆ ಹೆಚ್ಚುತ್ತಿದೆ?

ಭಾರತ ಜಾಗತೀಕರಣವನ್ನು ಒಪ್ಪಿಕೊಂಡಾದ ಮೇಲೆ ಬಡವರಿಗೆ ಮೂಲತಃ ಆಸ್ತಿಯಿದ್ದು ಅವರಿನ್ನೂ ಬಡವರಾಗುತ್ತಿರುವ ಸಂಖ್ಯಾನುಗುಣದ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಇಂದು ದೇಶದ ಒಟ್ಟು ಜನಸಂಖ್ಯೆಯ ಶೇ.27ರಷ್ಟುಜನರು ಬಡತನ ರೇಖೆಗಿಂತ ಕೆಳಗೆ ಜೀವಿಸುತ್ತಿದ್ದಾರೆ. ಏನಿದು ಆಧುನಿಕವಾಗಿ ನಾವಿಂದು ಬಹುಮುಂದೆ ಸಾಗಿರುವಾಗ ನಿಜವಾಗಿಯೂ ಇಂಥ ಸ್ಥಿತಿಯು ನಮ್ಮಲ್ಲಿದೆಯೇ ಎಂದು ಯೋಚಿಸಿದಾಗ ಬಡವರ ಬಗ್ಗೆ ಇಲ್ಲಿವರೆಗಿನ ನಾವು ಮಾಡಿದ ಕಾಳಜಿ ಕಳಕಳಿ ತುಂಬಾ ಯಾಂತ್ರೀಕೃತವಾದದ್ದು.

ಏಕೆಂದರೆ, ಈ ದೇಶದಲ್ಲಿರುವ ಬಡವರನ್ನು ಯಾವತ್ತೂ ನಮಗೆ ಸಮಾನರೆಂದು ಒಪ್ಪಿಕೊಂಡಿಲ್ಲ. ಇಲ್ಲಿಯವರೆಗೆ ಬಡವರನ್ನು ಈ ಸಮಾಜದ ಸಂಪನ್ಮೂಲಗಳೆಂದು ಭಾವಿಸಿಯೇ ಇಲ್ಲ. ಇನ್ನೂ ಜಾಗತೀಕರಣದ ಅಭಿವೃದ್ಧಿ ನೆಪದಲ್ಲಿ ಬಡವರಿಗೆ ಸೇರಿದ ಆಸ್ತಿಗಳನ್ನು ಖಾಸಗಿಯವರು ಸಹಜವಾಗಿ ಆಕ್ರಮಿಸಿಕೊಳ್ಳುತ್ತಾರೆ. ಸಾರ್ವಜನಿಕ ವಲಯಕ್ಕಿಂತ ಖಾಸಗಿ ವಲಯವೇ ಹೆಚ್ಚು ದಕ್ಷ ಎಂಬಂತಾಗಿದೆ.

ಎಲ್ಲಾ ಕಾಲಕ್ಕೂ ಪ್ರಸ್ತುತ

ಭಾರತೀಯ ಆರ್ಥಿಕ, ಸಾಮಾಜಿಕ ವ್ಯವಸ್ಥೆಯ ಎಲ್ಲಾ ಮಗ್ಗುಲುಗಳ ನಿಕಟ ಪರಿಚಯವುಳ್ಳ ವ್ಯವಸ್ಥೆಯ ಪ್ರತಿ ಬದಲಾವಣೆಯನ್ನು ವಾಸ್ತವಿಕ ದೃಷ್ಟಿಕೋನದೊಂದಿಗೆ ಪರೀಕ್ಷಿಸುವ ಅಸಾಧಾರಣ ಶಕ್ತಿ ಸಾಮರ್ಥ್ಯವಿದ್ದ ಗಾಂಧಿ​ೕಜಿ ಹೆಸರಿನ ಅರ್ಥಶಾಸ್ತ್ರವು ಎಲ್ಲಾ ಕಾಲದ ಮಾನ್ಯತೆಯ ಪ್ರಾಯೋಗಿಕ ವಿಷಯವಸ್ತುವಾಯಿತು. ಅವರ ಎಲ್ಲಾ ಆರ್ಥಿಕ ವಿಚಾರಧಾರೆಗಳು ಜಾಗತೀಕರಣಗೊಂಡ ನಮ್ಮ ಈಗಿನ ಅರ್ಥವ್ಯವಸ್ಥೆಯಲ್ಲಿ ಪ್ರಸ್ತುತವಾಗಲು ಸಾಧ್ಯವಿಲ್ಲ ಎಂದು ಹೇಳಲಾಗದು. ಸರ್ಕಾರದ ನೀತಿ ನಿರ್ಮಾಣದ ದೃಷ್ಟಿಯಿಂದ ಗಾಂಧಿ​ ಅರ್ಥಶಾಸ್ತ್ರದ ಜಾರಿಯಲ್ಲಿ ಕೆಲವು ಸಣ್ಣಪುಟ್ಟತೊಡಕುಗಳಾಗಿರಬಹುದು.

ಅವರು ಪ್ರತಿಪಾದಿಸಿದ ವಿಚಾರಗಳ ಪ್ರಖರತೆಯು ಎಷ್ಟಿದೆಯೆಂದರೆ, ಪ್ರಪಂಚದೆಲ್ಲೆಡೆ ಪ್ರಯೋಗಿಸಿದರೂ ಅದರಿಂದ ದೊರಕುವ ಫಲ ಮಾತ್ರ ಧನಾತ್ಮಕವಾಗಿರುತ್ತದೆ. ಭಾರತದಂತಹ ಅಭಿವೃದ್ಧಿಶೀಲ ದೇಶದಲ್ಲಿ ಗಾಂಧಿ​ ಅವರು ಗುಡಿ ಮತ್ತು ಸಣ್ಣ ಕೈಗಾರಿಕೆಗೆ ಆದ್ಯತೆ ನೀಡಿದ್ದನ್ನು ಅರ್ಥಶಾಸ್ತ್ರಜ್ಞ ನೊಬೆಲ್‌ ಪಾರಿತೋಷಕ ವಿಜೇತ ಗುನ್ನಾರ್‌ ಮಿರ್ಡಾಲ್‌ ಸ್ವಾಗತಿಸಿದ್ದರು. ಅಬ್ದುಲ್‌ ಕಲಾಂ ಅವರು ಸಹ ಗ್ರಾಮೀಣ ಪ್ರದೇಶದಲ್ಲಿ ನಗರಗಳಲ್ಲಿರುವ ಮೂಲ ಸೌಕರ್ಯಗಳನ್ನು ಒದಗಿಸಬೇಕೆಂಬ ನೀತಿಯ ಪರ ಅಭಿವೃದ್ಧಿಯ ಮಾದರಿಯನ್ನು ರಾಷ್ಟ್ರಪತಿಯಾಗಿ ಕಲಾಂ 2004ರಲ್ಲಿಯೇ ರೂಪಿಸಿ ಸುದ್ದಿಯಾಗಿದ್ದರು. ಅವರ ಈ ಕಾರ್ಯಕ್ಕೆ ಗಾಂ​ಧಿ ಚಿಂತನೆಯೇ ಪ್ರೇರಣೆಯಾಗಿತ್ತು.

- ಪ್ರೊ.ಮಂಜುನಾಥ ಉಲವತ್ತಿ ಶೆಟ್ಟರ್‌, ಬಳ್ಳಾರಿ

Follow Us:
Download App:
  • android
  • ios