ಬೆಂಗಳೂರು, (ಫೆ.17): ಡಾ.ರಾಜ್ ಕುಮಾರ್ ಅವರ ಪ್ರತಿಮೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಂತಿನಗರದ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ವಿವಾದಾತ್ಮಕ ಹೇಳಿಕೆ ವಿಡಿಯೋ ವೈರಲ್ ಆಗಿದೆ. 

"

ವಿಡಿಯೋನಲ್ಲಿ ವರನಟ ಡಾ.ರಾಜ್ ಕುಮಾರ್ ಅವರ ಪ್ರತಿಮೆ ಬಗ್ಗೆ ಹ್ಯಾರಿಸ್ ನಾಲಿಗೆ ಹರಿಬಿಟ್ಟಿದ್ದಾರೆ. ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿವೆ. ಇದು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಹ್ಯಾರಿಸ್ ಫೇಸ್‌ಬುಕ್ ಮೂಲಕ ಕ್ಷಮೆಕೋರಿದ್ದಾರೆ.

ಬೆಂಗಳೂರು:  ಕ್ರೂರ ಮನಸ್ಥಿತಿ.. ವರನಟ ಡಾ. ರಾಜ್ ಪುತ್ಥಳಿ ಮಂಟಪ ಧ್ವಂಸ

"

ಹ್ಯಾರಿಸ್ ಹೇಳಿದ್ದೇನು?
ಡಾ.ರಾಜ್ ಪ್ರತಿಮೆ ವಿಚಾರವಾಗಿ ಕಾಮಗಾರಿ ವೀಕ್ಷಣೆಗೆ ತೆರಳಿದ್ದ ಶಾಸಕ ಹ್ಯಾರಿಸ್, ಪ್ರತಿಮೆ ಮಾಡೋದೆ ದೊಡ್ಡ ಕಥೆ, ಅದಕ್ಕೆ ಆಫೀಸ್ ಬೇರೆ ಕಟ್ಟೋಕಾಗುತ್ತಾ? ಅವರ್ಯಾರೋ ಪ್ರತಿಮೆ ಅಂತ ಮಾಡಿರ್ತಾರೆ. ಅದಕ್ಕೆ ಕವರ್ ಬೇರೆ ಮಾಡ್ಬೇಕಾ? ಹಾಗೆ ಕವರ್ ಮಾಡಬೇಕು ಪ್ರೊಟೆಕ್ಷನ್ ಗೆ ಅನ್ನುವುದಾದರೆ ಪ್ರತಿಮೆಯನ್ನು ಮನೆಯಲ್ಲಿಯೇ ಇಟ್ಕೊಂಡಿರ್ಬೇಕು. ರಸ್ತೆಯಲ್ಲಿ ಯಾಕೆ ಇಡಬೇಕು ಎಂದು ಹೇಳಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಣ್ಣಾವ್ರ ಅಭಿಮಾನಿಗಳು ಶಾಸಕ ಹ್ಯಾರಿಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"

ಹೇಳಿಕೆಗೆ ಹ್ಯಾರಿಸ್ ಸ್ಪಷ್ಟನೆ
ಈ ವಿಡಿಯೋ ಫುಲ್ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಹ್ಯಾರಿಸ್ ಫೇಸ್‌ಬುಕ್‌ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ಫೇಸ್ ಬುಕ್ ಲೈವ್ ನಲ್ಲಿ  ರಾಜ್ ಕುಮಾರ್ ವಿರುದ್ಧ ಯಾವುದೇ ಹೇಳಿಕೆ‌ ನೀಡಿಲ್ಲ. ನಾನು ಡಾ ರಾಜ್ ಅಭಿಮಾನಿ. ಅವರ ಮೇಲೆ ಸಾಕಷ್ಟು ಗೌರವ ಪ್ರೀತಿ ಇದೆ.
 ಒಂದು ವೇಳೆ ಯಾರಿಗೂ ಬೇಜಾರ್ ಆಗಿದ್ರೆ ನಾನು ಕ್ಷಮೆ ಕೇಳುತ್ತೇನೆ ಎಂದು ಕ್ಷಮೆಯಾಚಿಸಿದ್ದಾರೆ.
ಅಲ್ಲದೇ ದಯವಿಟ್ಟು ಇದನ್ನ ಇಲ್ಲಿಗೆ ಬಿಟ್ಟು ಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ.