ಮುಂಬೈ(ಫೆ.19): ಗಗನಕ್ಕೇರಿರುವ ತೈಲ ದರದ ಬಗ್ಗೆ ಖಂಡಿಸದೆ, ಮೌನ ವಹಿಸಿರುವ ನಟರಾದ ಅಮಿತಾಭ್‌ ಬಚ್ಚನ್‌ ಮತ್ತು ಅಕ್ಷಯ್‌ ಕುಮಾರ್‌ ಅವರ ಸಿನಿಮಾಗಳ ಚಿತ್ರೀಕರಣಕ್ಕೆ ತಡೆಯೊಡ್ಡುವುದಾಗಿ ಮಹಾರಾಷ್ಟ್ರ ಕಾಂಗ್ರೆಸ್‌ ಬೆದರಿಕೆ ಹಾಕಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ನಾನಾ ಪಟೋಲೆ, ‘ಯುಪಿಎ ಅವಧಿಯಲ್ಲಿ ತೈಲ ದರ ಏರಿಕೆಯಾದಾಗ ಈ ನಟರು ಟ್ವೀಟ್‌ ಮಾಡಿ ಖಂಡಿಸುತ್ತಿದ್ದರು. ಅದರೆ ದೇಶದಲ್ಲಿ ಈಗ ತೈಲ ಬೆಲೆ 100 ರು.ಗೆ ಏರಿಕೆಯಾದರೂ ಮೌನವಾಗಿದ್ದಾರೆ.

'ಹೀಗೆ ಇರೋಣ' ಸ್ನೇಹಿತ 10 ರಾಷ್ಟ್ರಗಳಿಗೆ ಮೋದಿ ಹೇಳಿದ್ದು ಒಂದೇ ಮಾತು

ಒಂದು ವೇಳೆ ಈ ನಟರು ನ್ಯಾಯದ ಪರವಾಗಿ ಮತ್ತು ಜನರ ಪರವಾಗಿ ಮಾತನಾಡದೇ ಇದ್ದರೆ ರಾಜ್ಯದಲ್ಲಿ ಅವರ ಸಿನಿಮಾಗಳ ಚಿತ್ರೀಕರಣಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಎಚ್ಚರಿಸಿದ್ದಾರೆ.

ಈ ಹೇಳಿಕೆ ಬೆನ್ನಲ್ಲೇ, ‘ದೇಶದ ಹಿತಾಸಕ್ತಿಯ ಬಗ್ಗೆ ಟ್ವೀಟ್‌ ಮಾಡುವ ಅಮಿತಾಭ್‌ ಮತ್ತು ಅಕ್ಷಯ್‌ ಕುಮಾರ್‌ ಪರ ಇಡೀ ದೇಶ ಇದೆ’ ಬಿಜೆಪಿ ತಿರುಗೇಟು ನೀಡಿದೆ.

ನಟರ ಪರ ಮಾತನಾಡಿದ ಬಿಜೆಪಿ ನಾಯಕ ಸುಧೀರ್ ಮುಂಗಂತಿವಾರ್ ಅವರು ಕಾಂಗ್ರೆಸ್ ಆತ್ಮವು ಸರ್ವಾಧಿಕಾರವಾಗಿದ್ದು, ಅದು ಪ್ರಜಾಪ್ರಭುತ್ವದ ಮುಖವಾಡವನ್ನು ಧರಿಸಿದೆ. "ಅವರ ಕಚೇರಿ ಅಕ್ಬರ್ ರಸ್ತೆಯಲ್ಲಿರುವುದರಿಂದ, ಅವರು ಅಕ್ಬರ್‌ನ ಹಾದಿಯಲ್ಲಿ ಮಾತ್ರ ನಡೆಯುತ್ತಾರೆ. ಅಮಿತಾಬ್ ಬಚ್ಚನ್ ಅವರ ಬೆದರಿಕೆಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ಶೋಲೆ ಚಿತ್ರದಲ್ಲಿ ಗಬ್ಬರ್ ಸಿಂಗ್ ಅವರಿಂದ ಇದೇ ರೀತಿಯ ಬೆದರಿಕೆಗಳನ್ನು ಅವರು ಎದುರಿಸಿದ್ದರು" ಎಂದು ಟಾಂಗ್ ಕೊಟ್ಟಿದ್ದಾರೆ.