ಒಂದು ಕ್ಷಣ ತಡವಾದರೂ ಆತನ ದೇಹ ಛಿದ್ರ ಛಿದ್ರವಾಗುತ್ತಿತ್ತು. ಆದರೆ ತಡಮಾಡದ ರೈಲ್ವೇ ಪೊಲೀಸ್, ಪ್ರಾಣದ ಹಂಗು ತೊರೆದು ಹಳಿ ಮೇಲೆ ಮಲಗಿದ ವ್ಯಕ್ತಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೈ ಜುಮ್ಮೆನಿಸುವ ವಿಡಿಯೋ ಇಲ್ಲಿದೆ. 

ಕೋಲ್ಕತಾ(ಜೂ.11): ರೈಲು ಪ್ರಯಾಣ ಸುಖಕರ. ಜೊತೆಗೆ ಕೈಗೆಟುಕುವ ದರದಲ್ಲಿ ಪ್ರಯಾಣ ಮಾಡಬಹುದು. ಆದರೆ ಎಚ್ಚರ ತಪ್ಪಿದರೆ ಅಪಾಯವೂ ಇದೆ. ಇದರ ಜೊತೆಗೆ ಕೆಲವರು ರೈಲು ಹಳಿಯ ಮೇಲೆ ಮಲಗಿ ಬದುಕು ಅಂತ್ಯಗೊಳಿಸಿದ ಹಲವು ಉದಾಹರಣೆಗಳಿವೆ. ಇದೇ ರೀತಿ ರೈಲು ಬರುತ್ತಿರುವುದನ್ನು ಖಚಿತ ಪಡಿಸಿದ ಪ್ರಯಾಣಿಕನೊಬ್ಬ, ಪ್ಲಾಟ್‌ಫಾರ್ಮ್‌ನಿಂದ ಕೆಲಗಿಳಿದು ರೈಲ್ವೇ ಹಳಿಗೆ ತಲೆ ಇಟ್ಟು ಮಲಗಿದ್ದಾನೆ. ಕಾರ್ಯಪ್ರವೃತ್ತರಾದ ರೈಲ್ವೇ ಪೊಲೀಸ್, ತಕ್ಷಣ ಹಳಿಯತ್ತ ಜಿಗಿದು, ವ್ಯಕ್ತಿಯನ್ನು ಸಾವಿನಿಂದ ಬದುಕಿಸಿದ್ದಾರೆ.ಕೆಲವೇ ಕ್ಷಣಗಳ ಅಂತರದಲ್ಲಿ ರೈಲು ವೇಗವಾಗಿ ಚಲಿಸಿದೆ. ಈ ವಿಡಿಯೋ ವೈರಲ್ ಆಗಿದೆ.

ಈ ಘಟನೆ ನಡೆದಿರುವುದು ಪಶ್ಚಿಮ ಬಂಗಾಳದ ಪುರ್ವಾ ಮೆದಿನಿಪುರ್ ರೈಲ್ವೇ ನಿಲ್ಧಾಣದಲ್ಲಿ ನಡೆದಿದೆ. ರೈಲು ನಿಲ್ದಾಣದಲ್ಲಿ ಬೆರಳೆಣಿಕೆ ಪ್ರಯಾಣಿಕರು ರೈಲಿಗಾಗಿ ಕಾಯುತ್ತಿದ್ದರು. ಈ ವೇಳೆ ಪ್ರಯಾಣಿಕನೋರ್ವ ರೈಲಿಗಾಗಿ ಕಾಯುತ್ತಿರುವಂತೆ ನಿಂತಿದ್ದಾನೆ. ಕೆಲ ಹೊತ್ತಲ್ಲೇ ರೈಲು ಆಗಮಿಸಿದೆ. ಹಾರ್ನ್ ಶಬ್ದ ಮಾಡುತ್ತಾ ರೈಲು ವೇಗವಾಗಿ ಆಗಮಿಸಿದೆ. ಇತ್ತ ರೈಲಿಗಾಗಿ ಕಾಯುತ್ತಿದ್ದ ಪ್ರಯಾಣಿಕ ಪ್ಲಾಟ್‌ಫಾರ್ಮ್‌ನಿಂದ ಹಳಿಯತ್ತ ಜಿಗಿದಿದ್ದಾನೆ. 

ಬೆಂಗಳೂರಿನಲ್ಲಿ ಹಳಿ ದಾಟುವಾಗ ಜಾರಿ ಬಿದ್ದ ವ್ಯಕ್ತಿಯ ಜೀವ ಕಾಪಾಡಿದ ಪೊಲೀಸ್, ವಿಡಿಯೋ ವೈರಲ್!

ಬಳಿಕ ರೈಲು ಬರುತ್ತಿದ್ದ ಹಳಿಗೆ ತಲೆ ಇಟ್ಟು ಮಲಗಿದ್ದಾನೆ. ಪ್ರಯಾಣಿಕನೊಬ್ಬ ರೈಲಿನ ಹಳಿಗೆ ತಲೆ ಇಟ್ಟು ಮಲಗಿರುವುದು ಗಮನಿಸಿದ ರೈಲ್ವೇ ಪ್ರೊಟೆಕ್ಷನ್ ಫೋರ್ಸ್(RPF) ಮಹಿಳಾ ಪೊಲೀಸ್ ಕೆ ಸುಮತಿ ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಾಣದ ಹಂಗು ತೊರೆದು ರೈಲ್ವೇ ಹಳಿಗೆ ಜಿಗಿದಿದ್ದಾರೆ. ಬಳಿಕ ಮತ್ತೊಂದು ಬಂದಿಯಿಂದ ಓಡೋಡಿ ಬಂದ ಕೆ ಸುಮತಿ, ಹಳಿ ಮೇಲೆ ಮಲಗಿದ್ದ ವ್ಯಕ್ತಿಯನ್ನು ಎಳೆದು ಬದಿಗೆ ಸರಿಸಿದ್ದಾರೆ. 

Scroll to load tweet…

ಮರುಕ್ಷಣದಲ್ಲೇ ರೈಲು ಅದೇ ಹಳಿಗಳ ಮೇಲೆ ಸಾಗಿದೆ. ಇತ್ತ ಕೆ ಸಮುತಿಗೆ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ಮತ್ತಿಬ್ಬರು ಆಗಮಿಸಿ ಕೆ ಸುಮತಿಗೆ ಸಹಾಯ ಮಾಡಿದ್ದಾರೆ. ಇದರ ಪರಿಣಾಮ ಬದುಕು ಅಂತ್ಯಗೊಳಿಸಲು ಹೊರಟ ವ್ಯಕ್ತಿಯ ಜೀವವನ್ನು ಕೆ ಸುಮತಿ ಉಳಿಸಿದ್ದಾರೆ. ಮಹಿಳಾ ಪೊಲೀಸ್ ಕಾನ್ಸ್‌ಸ್ಟೇಬಲ್ ಕೆ ಸುಮತಿ ಸಾಹಸ ಹಾಗೂ ಧೈರ್ಯಕ್ಕೆ ಭಾರಿ ಮೆಚ್ತುಗೆ ವ್ಯಕ್ತವಾಗಿದೆ. ಈ ವಿಡಿಯೋವನ್ನು ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಹಂಚಿಕೊಂಡಿದೆ. ಹಲವರು ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೆ ಸುಮತಿ ಕಾರ್ಯವನ್ನು ಕೊಂಡಾಡಿದ್ದಾರೆ. ಇದೇ ವೇಳ ಬದುಕಿಗೆ ಪೂರ್ಣವಿರಾಮ ಹಾಕಲು ಹೊರಟ ವ್ಯಕ್ತಿಗೆ ಸೂಕ್ತ ಕೌನ್ಸಿಲಿಂಗ್ ಮಾಡಿ ಎಂದು ಸೂಚನೆ ನೀಡಿದ್ದಾರೆ.

ರೈಲ್ವೇ ನಿಲ್ದಾಣದಲ್ಲಿ ಪ್ರಾಣದ ಹಂಗು ತೊರೆದು ಹಲವು ಸಿಬ್ಬಂದಿಗಳು, ರೈಲ್ವೇ ಪೊಲೀಸರು ಹಲವರ ಪ್ರಾಣ ಉಳಿಸಿದ್ದಾರೆ. ಇತ್ತೀಚೆಗೆ ಹೊಸಪೇಟೆಯಲ್ಲಿ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದ ಪ್ರಯಾಣಿಕನ ಪ್ರಾಣ ಉಳಿಸಿದ ಘಟನೆ ನಡೆದಿತ್ತು. ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಪ್ರಯತ್ನಿಸಿ ರೈಲಿನ ಗಾಲಿಗೆ ಬೀಳುತ್ತಿದ್ದ ಪ್ರಯಾಣಿಕನ ಜೀವವನ್ನು ರೈಲ್ವೆ ಪೊಲೀಸ್‌ ಪೇದೆ ಸಂತೋಷ್‌ ರಾಠೋಡ್‌ ಉಳಿಸಿ ಸಮಯಪ್ರಜ್ಞೆ ಮೆರೆದಿದ್ದಾರೆ.

ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಹಿಳೆಯ ರಕ್ಷಿಸಿದ ರೈಲ್ವೆ ಸಿಬ್ಬಂದಿ : ವಿಡಿಯೋ

ಗದಗ ಮೂಲದ ಯುವಕನೊಬ್ಬ ಹೊಸಪೇಟೆಯಿಂದ ತನ್ನೂರಿಗೆ ವಾಪಸ್‌ ಹೊರಟಿದ್ದ ವೇಳೆ, ರೈಲು ನಿಲ್ದಾಣದಲ್ಲಿ ಶೌಚಾಲಯಕ್ಕೆ ಹೋದಾಗ .5 ಕೇಳಿದ್ದು, ಹಣ ಯಾಕೆ ಪಾವತಿಸಬೇಕು ಎಂದು ಅದೇ ವೇಳೆಗೆ ಬಂದು ನಿಂತಿದ್ದ ಬೆಳಗಾವಿ- ಸಿಕಂದರಾಬಾದ್‌ ರೈಲಿನಲ್ಲಿ ಶೌಚಕ್ಕೆ ತೆರಳಿದ್ದಾನೆ. ಶೌಚ ಮುಗಿಸಿ ಹೊರಗೆ ಬರುವ ವೇಳೆಗಾಗಲೇ ರೈಲು ವೇಗವಾಗಿ ಚಲಿಸುತ್ತಿದ್ದು, ಅದರಿಂದ ಇಳಿಯಲು ಹೋಗಿ ಕಾಲು ಜಾರಿ ಬಿದ್ದಿದ್ದಾನೆ. ರೈಲಿನ ಅಡಿಗೆ ಸಿಲುಕುವ ಹಂತದಲ್ಲಿ ಅಲ್ಲೆ ಇದ್ದ ಪೊಲೀಸ್‌ ಪೇದೆ ಸಂತೋಷ್‌ ರಾಠೋಡ್‌ ಯುವಕನ ಕೈ ಹಿಡಿದು ಮೇಲೆತ್ತಿದ್ದಾರೆ. ಜತೆಗಿದ್ದ ರೈಲ್ವೆ ಪೊಲೀಸ್‌ ಗುರುರಾಜ್‌ ಅವರು ಕೂಡ ಕೊನೆಯಲ್ಲಿ ಸಹಕರಿಸಿ ಜೀವ ಉಳಿಸಿದ್ದಾರೆ. ಈ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.