Asianet Suvarna News Asianet Suvarna News

ಬೆಂಗಳೂರಿನ ಚಿಕ್ಕಪೇಟೆ ಬಟ್ಟೆ ವ್ಯಾಪಾರಿ ಲಾಡು ಲಾಲ್‌ ಈಗ ರಾಜಸ್ಥಾನದಲ್ಲಿ ಶಾಸಕ

ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಜವಳಿ ಉದ್ಯಮ ಹೊಂದಿರುವ ಲಾಡು ಲಾಲ್‌ ಪಿತಲಿಯಾ (ladu lal Pitaliya) ಅವರು ಇತ್ತೀಚೆಗೆ ನಡೆದ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ರಾಜಸ್ಥಾನ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.
 

Ladu Lal a merchandiser in Chikpete Bangalore is now an MLA in Rajasthan akb
Author
First Published Dec 5, 2023, 7:28 AM IST

ಜೈಪುರ: ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಜವಳಿ ಉದ್ಯಮ ಹೊಂದಿರುವ ಲಾಡು ಲಾಲ್‌ ಪಿತಲಿಯಾ (ladu lal Pitaliya) ಅವರು ಇತ್ತೀಚೆಗೆ ನಡೆದ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ರಾಜಸ್ಥಾನ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ರಾಜಾಜಿನಗರದಲ್ಲಿ ಲಾಡು ಲಾಲ್‌ (Ladulal) ಕುಟುಂಬದ ನೆಲೆಸಿದ್ದು, ಈ ಬಾರಿಯ ಚುನಾವಣೆಯಲ್ಲಿ ರಾಜಸ್ಥಾನದ ಸಹರಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದರು. ಭಾನುವಾರ ಪ್ರಕಟವಾದ ಫಲಿತಾಂಶದಲ್ಲಿ ಲಾಡು ಲಾಲ್‌ 1.17 ಲಕ್ಷ ಮತ ಪಡೆದು 62 ಸಾವಿರ ಮತಗಳಿಂದ ಗೆದ್ದಿದ್ದಾರೆ. ಅವರ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ರಾಜೇಂದ್ರ ತ್ರಿವೇದಿ 54684 ಮತಗಳನ್ನು ಪಡೆದು ಸೋಲನ್ನಪ್ಪಿದ್ದಾರೆ.

2021ರಲ್ಲಿ ಇದೇ ಕ್ಷೇತ್ರಕ್ಕೆ ಉಪಚುನಾವಣೆ ನಡೆದಾಗ ಬಿಜೆಪಿಯಿಂದ ಹೊರಬಂದಿದ್ದ ಲಾಡು ಲಾಲ್‌ ಪಕ್ಷೇತರರಾಗಿ (indipendent candidate) ಸ್ಪರ್ಧಿಸಿದ್ದರು. ಆದರೆ ಬಳಿಕ ನಾಮಪತ್ರ ಹಿಂಪಡೆದುಕೊಂಡಿದ್ದರು. ಈ ಬಾರಿ ಲಾಡು ಲಾಲ್‌ ಮತ್ತೆ ಬಿಜೆಪಿಯಿಂದ ಕಣಕ್ಕೆ ಇಳಿದು ಗೆಲುವು ಸಾಧಿಸಿದ್ದಾರೆ. ಬೆಂಗಳೂರಲ್ಲಿನ ಅವರ ಉದ್ಯಮವನ್ನು ಸದ್ಯಮಕ್ಕಳು ಮುನ್ನಡೆಸುತ್ತಿದ್ದಾರೆ.

 

Follow Us:
Download App:
  • android
  • ios