ಮುಂದುವರಿದ ಭಾರತ ವಿರೋಧಿಗಳ ಸಂಹಾರ: ಮತ್ತೊಬ್ಬ ಪಾಕಿಸ್ತಾನಿ ಉಗ್ರನ ನಿಗೂಢ ಹತ್ಯೆ
ಭಯೋತ್ಪಾದಕ ಸಂಘಟನೆ Jaish-e-Mohammed(ಜೆಇಎಂ) ಬೆಂಬಲಿಗ ಹಾಗೂ ವಿವಾದಾತ್ಮಕ ಇಸ್ಲಾಮಿಕ್ ಬೋಧಕ Anti Indian ಮೌಲಾನಾ ಶೇರ್ ಬಹದ್ದೂರ್ ಎಂಬಾತನನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.
ಇಸ್ಲಾಮಾಬಾದ್: ಭಯೋತ್ಪಾದಕ ಸಂಘಟನೆ ಜೈಷ್-ಎ-ಮೊಹಮ್ಮದ್ (ಜೆಇಎಂ) ಬೆಂಬಲಿಗ ಹಾಗೂ ವಿವಾದಾತ್ಮಕ ಇಸ್ಲಾಮಿಕ್ ಬೋಧಕ ಮೌಲಾನಾ ಶೇರ್ ಬಹದ್ದೂರ್ ಎಂಬಾತನನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಪೇಶಾವರದ ಖೈಬರ್ ಪಖ್ತುಂಖ್ವಾದಲ್ಲಿ ಈ ಘಟನೆ ನಡೆದಿದೆ ಎಂದು ಕೆಲವು ವರದಿಗಳು ಹೇಳಿವೆ. ಆದರೆ ಇದನ್ನು ಪಾಕ್ ಸರ್ಕಾರವಾಗಲೀ ಅಲ್ಲಿನ ಪೊಲೀಸರಾಗಲೀ ಖಚಿತಪಡಿಸಿಲ್ಲ.
ಇದರಿಂದಾಗಿ ಭಾರತ ವಿರೋಧಿ (Anti Indian) ಉಗ್ರರು ಪಾಕಿಸ್ತಾನದಲ್ಲಿ ( Pakistan) ಹಾಗೂ ವಿದೇಶಗಳಲ್ಲಿ ನಿಗೂಢವಾಗಿ ಸಾವನ್ನಪ್ಪುವ ಅಥವಾ ಕೊಲೆಯಾಗುವ ಸರಣಿ ಮುಂದುವರಿದಂತಾಗಿದ್ದು, ಸಾವಿನ ಸಂಖ್ಯೆ 21ಕ್ಕೆ ಏರಿದೆ. ಮೌಲಾನಾ ಶೇರ್ ಬಹದ್ದೂರ್‌ನನ್ನೇ ಹೋಲುವ ಮೃತ ದೇಹವನ್ನು ತೋರಿಸುವ ವಿಡಿಯೋ ಇಂಟರ್ನೆಟ್‌ನಲ್ಲಿ ಕಾಣಿಸಿಕೊಂಡಿದ್ದು, ಆತ ರಕ್ತಸಿಕ್ತ ಸ್ಥಿತಿಯಲ್ಲಿ ಹಾಸಿಗೆಯ ಮೇಲೆ ಮಲಗಿದ್ದಾನೆ. ಕೆಲವು ಪೊಲೀಸರು ಆತನ ಶವವನ್ನು ಎತ್ತುತ್ತಿರುವುದು ವಿಡಿಯೋದಲ್ಲಿ ಕಾಣುತ್ತದೆ.
ಪಾಕ್‌ನಲ್ಲಿ ಲಷ್ಕರ್ ಉಗ್ರ ನೇಮಕಗಾರನ ನಿಗೂಢ ಹತ್ಯೆ: 1.5 ವರ್ಷದಲ್ಲಿ 19ನೇ ಉಗ್ರಗಾಮಿ ಸಾವು
ಅಪರಿಚಿತರು ಪಾಯಿಂಟ್-ಬ್ಲಾಂಕ್ ರೇಂಜ್‌ನಲ್ಲಿ ಗುಂಡು ಹಾರಿಸಿದ್ದಾರೆ. ಇದರಿಂದಾಗಿ ತಕ್ಷಣದ ಸಾವು ಸಂಭವಿಸಿದೆ ಎಂದು ಆ ವರದಿಗಳು ಹೇಳಿವೆ. ಇತ್ತೀಚೆಗೆ ಇದೇ ರೀತಿ ಪಾಕಿಸ್ತಾನದಲ್ಲಿ ಭಾರತಕ್ಕೆ ಬೇಕಾದ ಕೆಲವು ಉಗ್ರರ ಹತ್ಯೆ (Terrorist Killed) ಸಂಭವಿಸಿದ್ದವು.
ಪಾಕಿಸ್ತಾನಿ ಗೆಳೆಯನನ್ನು ಮದುವೆಯಾಗಲು ನೆರೆಯ ದೇಶಕ್ಕೆ ತೆರಳಿದ್ದ ಅಂಜು ಭಾರತಕ್ಕೆ ವಾಪಸ್!