ಒಂದೆಡೆ ಉಕ್ರೇನ್, ರಷ್ಯಾ ನಡುವಿನ ಯುದ್ಧ ಭಾರತದ ಪೂರ್ವ ಲಡಾಖ್‌ನಲ್ಲಿ ಸಂಘರ್ಷ 15ನೇ ಸುತ್ತಿನ ಮಾತುಕತೆಗೆ ವೇದಿಕೆ ರೆಡಿ
ನವದೆಹಲಿ(ಮಾ.08): ಉಕ್ರೇನ್ ಮೇಲೆ ರಷ್ಯಾ ಸತತ ದಾಳಿ ಮಾಡಿ ಒಂದು ರಾಷ್ಟ್ರವೇ ಸಂಪೂರ್ಣವೇ ಧ್ವಂಸಗೊಂಡಿದೆ. ಯುದ್ಧ ನಿಲ್ಲಿಸಲು 3 ಸುತ್ತಿನ ಮಾತುಕತೆ ನಡೆಸಿದೆ. ಒಂದೆಡೆ ರಷ್ಯಾ ಉಕ್ರೇನ್ ನಡುವಿನ ಯುದ್ಧ ನಡೆಯುತ್ತಿರುವ ಬೆನ್ನಲ್ಲೇ ಇತ್ತ ಭಾರತದ ಪೂರ್ವ ಲಡಾಖ್ ಗಡಿಯಲ್ಲಿ ಶಾಂತಿ ಸ್ಥಾಪಿಸಲು ಭಾರತ ಅವಿರತ ಶ್ರಮಿಸುತ್ತಿದೆ. ಇದಕ್ಕಾಗಿ ಚೀನಾ ಜೊತೆ 15ನೇ ಸುತ್ತಿನ ಮಾತುಕತೆಗೆ ಭಾರತ ಸಜ್ಜಾಗಿದೆ.
ಮಾರ್ಚ್ 11 ರಂದು ಕಮಾಂಡರ್ ಮಟ್ಟದ ಮಾತುಕತೆ ನಡೆಯಲಿದೆ. ಒಂದೆಡೆ ಮಾತುಕತೆ ನಡೆಸುವ ಚೀನಾ ಮತ್ತೊಂಡೆದೆಯಿಂದ ಅತಿಕ್ರಮ ಪ್ರವೇಶ, ನಿಷೇಧಿತ ವಲಯದಲ್ಲಿ ಅಭಿೃದ್ಧಿ ಕಾಮಗಾರಿ, ಗ್ರಾಮಗಳ ನಿರ್ಮಾಣ, ಭಾರತದ ಗಡಿಯೊಳಕ್ಕೆ ಪ್ರವೇಶ ಸೇರಿದಂತೆ ಹಲವು ಚಟುವಟಿಕೆ ಮಾಡುತ್ತಲೇ ಇದೆ. ಈದರಿಂದ ಪೂರ್ವ ಲಡಾಖ್‌ನಲ್ಲಿ ಸಂಘರ್ಷದ ವಾತಾವರಣ ನಿರ್ಮಿಸುತ್ತಿದೆ. ಈ ಸಂಘರ್ಷ ಅಂತ್ಯಗೊಳಿಸಲು ಭಾರತ ಇದೀಗ 15ನೇ ಸುತ್ತಿನ ಮಾತುಕತೆ ಮಹತ್ವ ಪಡೆದುಕೊಂಡಿದೆ.
ಕಮಾಂಡರ್ ಸುತ್ತಿನ ಮಾತುಕತೆ ಭಾರತದ ಚುಶೂಲ್ ಮಾಲ್ಡೋ ಗಡಿಯಲ್ಲಿ ನಡೆದಿದೆ. ಭಾರತದ ಪರ ಲೆಫ್ಟಿನೆಂಟ್ ಜನರಲ್ ಅನಿಂದ್ಯ ಸೇನಗುಪ್ತ ಮಾತುಕತೆ ನೇತೃತ್ವ ವಹಿಸಲಿದ್ದಾರೆ. ಸೆನಗುಪ್ತ ಕಳೆದ ಅಕ್ಟೋಬರ್‌ನಲ್ಲಿ ನಡೆದ 14 ಸುತ್ತಿನ ಕಮಾಂಡರ್ ಲೆವಲ್ ಮಾತುಕತೆಯಲ್ಲಿ ಪಾಲ್ಗೊಂಡಿದ್ದರು.
China Bridge On Pangong : ಅಕ್ರಮ ಸ್ಥಳದಲ್ಲಿ ಚೀನಾದಿಂದ ಸೇತುವೆ ನಿರ್ಮಾಣ ಎಂದ ಸರ್ಕಾರ!
ಭಾರತ ಗಡಿಯಲ್ಲಿ ನಿರ್ಮಾಣವಾಗುತ್ತಿರುವ ಅಶಾಂತಿಯ ವಾತಾರವಣನ್ನು ನಿರ್ನಾಮ ಮಾಡಲು ಮುಂದಾಗಿದೆ. ಆದರೆ ಹಲವು ಭರವಸೆ ನೀಡಿದ್ದ ಚೀನಾ, ಪದೇ ಪದೇ ಭಾರತವನ್ನು ಕೆಣಕುವ ಪ್ರಯತ್ನ ಮಾಡುತ್ತಿದೆ. ಭಾರತ ಹಾಗೂ ಚೀನಾ ಕೊನೆಯದಾಗಿ ಜನವರಿಯಲ್ಲಿ ಮಾತುಕತೆ ನಡೆಸಿದೆ. ಆದರೆ ಇದು ಕಮಾಂಡರ್ ಸುತ್ತಿನ ಮಾತುಕತೆಯಾಗಿರಲಿಲ್ಲ. ಜನವರಿಯಲ್ಲಿನ ಮಾತುಕತೆಯಲ್ಲಿ ಯಾವುದೇ ಮಹತ್ವದ ನಿರ್ಧಾರ ಹೊರಬೀಳಲಿಲ್ಲ. ಆದರೆ ಶೀಘ್ರದಲ್ಲೇ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಉಭಯ ದೇಶಗಳು ಒಪ್ಪಿಕೊಂಡಿತ್ತು.
ಚೀನಾ ನಮ್ಮನ್ನು ಕೆರಳಿಸಿದಂತೆ ಭಾರತವನ್ನೂ ಪ್ರಚೋದಿಸುತ್ತಿದೆ: ಅಮೆರಿಕ ಅಧಿಕಾರಿ
ಚೀನಾವು ಅಮೆರಿಕವನ್ನು ಕೆರಳಿಸುವಂತೆ ಭಾರತವನ್ನೂ ಸಹ ಪ್ರತಿ ಬಾರಿ ಪ್ರಚೋದಿಸುತ್ತಿದೆ. ಚೀನಾದ ಪ್ರಚೋದನೆಯನ್ನು ತಡೆಯಲು ಭಾರತದ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುವಲ್ಲಿ ಅಮೆರಿಕ ಸರ್ಕಾರ ಬದ್ಧವಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಶಾಸಕರಿಗೆ ತಿಳಿಸಿದ್ದಾರೆ.
Galwan Clash: ಗಲ್ವಾನ್ ಕಣಿವೆಯಲ್ಲಿ ಚೀನಾದ ರಹಸ್ಯ ಬಯಲು ಮಾಡಿದ ಆಸೀಸ್ ಪತ್ರಿಕೆ!
ಬುಧವಾರ ದಕ್ಷಿಣ ಮತ್ತು ಕೇಂದ್ರ ಅಮರಿಕದ ಸಹಾಯಕ ವಿದೇಶಾಂಗ ಕಾರ‍್ಯದರ್ಶಿ ಡೊನಾಲ್ಡ್ ಲು ಅವರು ಪೂರ್ವ, ದಕ್ಷಿಣ ಮತ್ತು ಮಧ್ಯ ಹಾಗೂ ಭಯೋತ್ಪಾದನೆ ನಿಗ್ರಹ ಏಷ್ಯಾದ ಸೆನೆಟ್ ಸಮಿತಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿ, ‘ಚೀನಾವು ಪೂರ್ವ ಲಡಾಖ್ ಗಡಿಯಲ್ಲಿ ಸೇನೆ ನಿಯೋಜಿಸಬಾರದು ಎಂಬ ಒಪ್ಪಂದ ಉಲ್ಲಂಘಿಸಿದ ನಂತರದಲ್ಲಿ ಚೀನಾ-ಭಾರತ ಸಂಬಂಧ ಹದಗೆಟ್ಟಿದೆ. ಚೀನಾ ಅಮೆರಿಕಕ್ಕೆ ಸವಾಲು ಹಾಕುವಂತೆಯೇ ಭಾರತವನ್ನೂ ಕೆರಳಿಸುತ್ತಿದೆ’ ಎಂದು ತಿಳಿಸಿದರು.
ಮೇ 5, 2020ರಂದು ಪ್ಯಾಂಗಾಂಗ್ ಸರೋವರ ಪ್ರದೇಶದಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯ ನಂತರ ಪೂರ್ವ ಲಡಾಖ್‌ನಲ್ಲಿ ಗಡಿ ಬಿಕ್ಕಟ್ಟು ಸ್ಫೋಟಗೊಂಡಿತು. ಜೂ. 15, 2020 ರಂದು ಗಲ್ವಾನ್ ಕಣಿವೆಯ ಘರ್ಷಣೆಯಲ್ಲಿ 20 ಭಾರತೀಯರ ಸೈನಿಕರು ಹುತಾತ್ಮರಾದ ನಂತರದಲ್ಲಿ ಬಿಕ್ಕಟ್ಟು ಉಲ್ಬಣಗೊಂಡಿತ್ತು. ನಂತರ ಉಭಯ ದೇಶಗಳ ನಡುವೆ ಹಲವು ಸುತ್ತಿನ ಮಾತುಕತೆ ಬಳಿಕ ಸಂಘರ್ಷ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ.
ಅಕ್ರಮ ವಶದಲ್ಲಿದ್ದ ಪ್ರದೇಶದಲ್ಲಿ ಚೀನಾ ಸೇತುವೆ: ಭಾರತ ಸಿಡಿಮಿಡಿ
ಅಕ್ರಮವಾಗಿ ವಶಪಡಿಸಿಕೊಂಡ ಪ್ರದೇಶದಲ್ಲಿ ಚೀನಾ ಪ್ಯಾಗೊಂಗ್ ಸರೋವರದುದ್ದಕ್ಕೂ ಸೇತುವೆ ಕಟ್ಟುತ್ತಿದೆ ಎಂದು ಭಾರತ ಸರ್ಕಾರ ಶುಕ್ರವಾರ ಸಂಸತ್ತಿನಲ್ಲಿ ಹೇಳಿಕೆ ನೀಡಿದೆ.ಸೇತುವೆ ಕಟ್ಟಲಾಗುತ್ತಿರುವ ಪ್ರದೇಶ 1962 ರಿಂದಲೂ ಅಕ್ರಮವಾಗಿ ಚೀನಾದ ವಶದಲ್ಲಿದೆ. ಭಾರತ ಸರ್ಕಾರ ಅಕ್ರಮವಾಗಿ ವಶಪಡಿಸಿಕೊಂಡ ಪ್ರದೇಶಗಳ ಮೇಲೆ ಚೀನಾದ ಸಾರ್ವಭೌಮತ್ವವನ್ನು ಎಂದಿಗೂ ಒಪ್ಪಿಕೊಂಡಿಲ್ಲ. ಸರ್ಕಾರ ಹಲವಾರು ಬಾರಿ ಜಮ್ಮು ಮತ್ತು ಕಾಶ್ಮೀರ, ಲಡಾಖ್ ಭಾರತದ ಅವಿಭಾಜ್ಯ ಅಂಗಗಳೆಂದು ಸ್ಪಷ್ಟಪಡಿಸಿದೆ. ಇತರೆ ದೇಶಗಳು ಭಾರತದ ಸಾರ್ವಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು ಎಂಬುದು ಸರ್ಕಾರ ನಿರೀಕ್ಷೆಯಾಗಿದೆ ಎಂದು ಹೇಳಿದೆ.
