ಭಾರತ-ಚೀನಾ ಗಡಿ ಸಂಘರ್ಷ ಅಂತ್ಯಗೊಳಿಸಲು ಕಮಾಂಡರ್ ಮಟ್ಟದ ಮಾತುಕತೆ 12ನೇ ಸುತ್ತಿನ ಮಾತುಕತೆ ಅಂತ್ಯ, 9 ಗಂಟೆಗಳ ಸತತ ಮಾತುಕತೆ  ಚೀನಾದ ಮೋಲ್ಡೋದಲ್ಲಿ ನಡೆದ ಮಹತ್ವದ ಕಮಾಂಡರ್ ಸಭೆ

ನವದೆಹಲಿ(ಜು.31): ಭಾರತ ಹಾಗೂ ಚೀನಾ ನಡುವಿನ ಲಡಾಖ್ ಗಡಿ ಸಂಘರ್ಷ ಆರಂಭಗೊಂಡ ಬಳಿಕ ಉದ್ವಿಘ್ನ ಪರಿಸ್ಥಿತಿ ಶಮಗೊಳಿಸಲು ಉಭಯ ದೇಶಗಳು ಸತತ ಕಮಾಂಡರ್ ಮಟ್ಟದ, ಉನ್ನತ ಮಟ್ಟದ ಮಾತುಕತೆ ನಡೆಸಿದೆ. ಇತ್ತೀಚೆಗೆ ಮತ್ತೆ ಗಡಿ ಸಂಘರ್ಷ ಉಲ್ಬಣಗೊಂಡಿದೆ. ಹೀಗಾಗಿ ಇಂದು ಭಾರತ ಹಾಗೂ ಚೀನಾ ಕಮಾಂಡರ್ ಮಟ್ಟದ 12ನೇ ಸುತ್ತಿನ ಮಾತುಕತೆ ನಡೆಸಿತು. ಇದೀಗ ಈ ಮಾತುಕತೆ ಅಂತ್ಯಗೊಂಡಿದೆ.

ಲಡಾಖ್ ಗಡಿ ಸಮೀಪ ಚೀನಾದಿಂದ ಯುದ್ದ ವಾಯು ನೆಲೆ ನಿರ್ಮಾಣ!

ಚೀನಾ ಭಾಗದ ಮಾಲ್ದೋ ಗಡಿ ನಿಯಂತ್ರಣದ ಮಿಲಿಟರ್ ಹೆಡ್‌ಕ್ವಾರ್ಟರ್‌ನಲ್ಲಿ ನಡೆದ ಈ ಸಭೆಯಲ್ಲಿ ಭಾರತದ ಮಿಲಿಟರಿ ಅಧಿಕಾರಿಗಳು ಪಾಲ್ಗೊಂಡಿದ್ದರು. ಬೆಳಗ್ಗೆಯಿಂದ ಇಲ್ಲೀವರೆಗೆ ಸತತ 9 ಗಂಟೆಗಳ ಮಾತುಕತೆ ನಡೆದಿದೆ. ಈ ಮೂಲಕ ಲಡಾಖ್ ಗಡಿ ಸಂಘರ್ಷಕ್ಕೆ ಅಂತ್ಯಕಾಣಿಸಲು ಭಾರತ ಯತ್ನಿಸಿದೆ.

ಲಡಾಖ್‌ನಲ್ಲಿ ಮತ್ತೆ ಕಿರಿಕ್; ಚೀನಾ ಅತಿಕ್ರಮಣ ತಡೆಯಲು 15 ಸಾವಿರ ಸೈನಿಕರ ನಿಯೋಜನೆ!

ಲಡಾಖ್‌ನ ಗೋಗ್ರಾ ಹೈಟ್ಸ್ ಮತ್ತು ಹಾಟ್ ಸ್ಪ್ರಿಂಗ್ಸ್ ವಲಯದಲ್ಲಿ ನಡೆಯುತ್ತಿರುವ ಚೀನಾ ಸೇನೆಯ ಅತಿಕ್ರಮಣ ಹಾಗೂ ನಡೆಯನ್ನು ಭಾರತ ವಿರೋಧಿಸಿದೆ. ತಕ್ಷಣವೆ ಶಾಂತಿ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಭಾರತ ಪಟ್ಟು ಹಿಡಿದಿದೆ.

ಭಾರತದ ಗಡಿಗಳಲ್ಲಿ ಶಾಶ್ವತ ಶಿಬಿರ ನಿರ್ಮಿಸುತ್ತಿರುವ ಚೀನಾ!

ಸರಿಸುಮಾರು 1 ವರ್ಷದಿಂದ ಭಾರತ ಹಾಗೂ ಚೀನಾ ನಡುವೆ ಲಡಾಖ್ ಗಡಿಯಲ್ಲಿ ಸಂಘರ್ಷ ನಡೆಯುತ್ತಿದೆ. ಕಲ್ವಾಣ್ ಕಣಿವೆ ಘರ್ಷಣೆ ಬಳಿಕ ಇದು ತಾರಕಕ್ಕೇರಿದೆ. ಜನವರಿ 24 ರಂದು ನಡೆದ 9ನೇ ಸುತ್ತಿನ ಮಿಲಿಟರಿ ಮಾತುಕತೆಯಲ್ಲಿ ಪ್ಯಾಂಗಾಂಗ್ ಸರೋವರದ ಉತ್ತರ ಹಾಗೂ ದಕ್ಷಿಣ ದಂಡೆಯಿಂದ ಸೇನೆ ಹಿಂತೆಗೆದುಕೊಳ್ಳಲು ಉಭಯ ದೇಶಗಳು ಒಪ್ಪಿತ್ತು. ಬಳಿಕ ಸೇನೆಯನ್ನು ಹಿಂತೆಗೆದುಕೊಂಡಿತ್ತು.

ಲಡಾಖ್‌ನಲ್ಲಿ ಕೇವಲ 150 ಮೀ. ದೂರದಲ್ಲಿ ಭಾರತ- ಚೀನಾ ಪೋಸ್ಟ್‌!

ಆದರೆ ಫೆಬ್ರವರಿ ಅಂತ್ಯದಲ್ಲಿ ಗೋಗ್ರಾ ಹೈಟ್ಸ್ ಮತ್ತು ಹಾಟ್ ಸ್ಪ್ರಿಂಗ್ಸ್ ವಲಯದಲ್ಲಿ ಚೀನಾ ಉದ್ಧಟತನ ನಡೆಸಿತ್ತು. ಇದಕ್ಕಾಗಿ ಎಪ್ರಿಲ್ 9 ರಂದು 11ನೇ ಸುತ್ತಿನ ಮಾತುಕತೆ ನಡೆದಿತ್ತು. ಭಾರತದ ಗಡಿ ಭಾಗ ಚಶೂಲ್‌ನಲ್ಲಿ ಈ ಮಾತುಕತೆಗೆ ಚೀನಾ ಮಿಲಿಟರಿ ಅಧಿಕಾರಿಗಳು ಆಗಮಿಸಿದ್ದರು.