Asianet Suvarna News Asianet Suvarna News

ಲಡಾಖ್ ಗಡಿ ಸಮೀಪ ಚೀನಾದಿಂದ ಯುದ್ದ ವಾಯು ನೆಲೆ ನಿರ್ಮಾಣ!

  • ಲಡಾಖ್ ಗಡಿ ಬಳಿ ಉದ್ಧಟತನ ತೋರುತ್ತಿರುವ ಚೀನಾದಿಂದ ಮತ್ತೊಂದು ನಡೆ
  • ಗಡಿ ಸಮೀಪ ಯುದ್ಧ ವಾಯು ನಲೆ ನಿರ್ಮಾಣಕ್ಕೆ ಚೀನಾ ಸಿದ್ಧತೆ
  • ಶೀಘ್ರದಲ್ಲೇ ವಾಯು ನೆಲೆ ಬಳಕೆಗೆ ಪೂರ್ಣ, ಗಡಿಯಲ್ಲಿ ಹೆಚ್ಚಿದ ಆತಂಕ
     
China developing  airbase for fighter aircraft operations close to Eastern Ladakh ckm
Author
Bengaluru, First Published Jul 19, 2021, 7:23 PM IST

ಲಡಾಖ್(ಜು.19): ಭಾರತ ಹಾಗೂ ಚೀನಾ ಗಡಿಯಲ್ಲಿನ ಪರಿಸ್ಥಿತಿ ಸದ್ಯಕ್ಕೆ ಬೂದಿ ಮುಚ್ಚಿದ ಕೆಂಡದಂತಿದೆ. ಅಲ್ಲೊಂದು ಇಲ್ಲೊಂದು ಅತಿಕ್ರಮಗಳು, ಉದ್ಧಟನತ ವರ್ತನೆ ವರದಿಯಾಗುತ್ತಿದೆ. ಇದರ ನಡುವೆ ಚೀನಾ ಮತ್ತೊಂದು ಆತಂಕಕಾರಿ ಹೆಜ್ಜೆ ಇಟ್ಟಿದೆ. ಪೂರ್ವ ಲಡಾಖ್ ಗಡಿಯಲ್ಲಿ ಚೀನಾ ಯುದ್ದ ವಾಯು ನೆಲೆ ನಿರ್ಮಾಣ ಮಾಡುತ್ತಿದೆ.

ಭಾರತದ ಗಡಿಗಳಲ್ಲಿ ಶಾಶ್ವತ ಶಿಬಿರ ನಿರ್ಮಿಸುತ್ತಿರುವ ಚೀನಾ!

ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತ್ಯದ ಶಾಚೆ ಪಟ್ಟಣದ ಪೂರ್ವ ಭಾಗದಲ್ಲಿ ಎದುರಾಗುವ  ಲಡಾಖ್ ಗಡಿ ಭಾಗದಲ್ಲಿ ಈ ಯುದ್ಧ ವಿಮಾನ ನೆಲೆ ನಿರ್ಮಾಣವಾಗುತ್ತಿದೆ. ಈ ಮೂಲಕ ಭಾರತದ ಗಡಿಗೆ ಹೆಚ್ಚಿನ ಯುದ್ಧ ವಿಮಾನ ಪೂರೈಸಲು ಚೀನಾ ಈ ವಾಯುನೆಲೆ ನಿರ್ಮಾಣ ಮಾಡುತ್ತಿದೆ.

ಭಾರತದ ಗಡಿ ಪ್ರದೇಶದಲ್ಲಿ ಯುದ್ಧ ಕಾರ್ಯಾಚರಣೆಗೆ ಚೀನಾ ಕಾಶ್ಗರ್ ಮತ್ತು ಹೊಗನ್ ವಾಯುನೆಲೆಗಳಿಂದ ಯುದ್ಧ ವಿಮಾನ ಕಳುಹಿಸುತ್ತಿತ್ತು. ಇದು ಪೂರ್ವ ಲಡಾಖ್ ಗಡಿಯಿಂದ ಸುಮಾರು 400 ಕಿ.ಮಿ ದೂರದಲ್ಲಿದೆ. ಇದೀಗ ಈ ಅಂತರ ಶೂನ್ಯವಾಗಲಿದೆ. ಗಡಿಯಲ್ಲೇ ವಾಯುನೆಲೆ ನಿರ್ಮಾಣಕ್ಕೆ ಚೀನಾ ಕೈ ಹಾಕಿದೆ.

ಲಡಾಖ್‌ನಲ್ಲಿ ಕೇವಲ 150 ಮೀ. ದೂರದಲ್ಲಿ ಭಾರತ- ಚೀನಾ ಪೋಸ್ಟ್‌!

ಚೀನಾ ವಾಯು ನೆಲೆ ಯೋಜನೆಗೆ ಭಾರತ ವಿರೋಧ ವ್ಯಕ್ತಪಡಿಸಿತ್ತು. ಆದರೆ ಭಾರತದ ವಿರೋಧ ಲೆಕ್ಕಿಸದೆ ವಾಯು ನೆಲೆ ಕಾರ್ಯ ಆರಭಿಸಿದೆ. ಇದಕ್ಕೆ ಪ್ರತಿಯಾಗಿ ಭಾರತ ಉತ್ತರಖಂಡ್ ಹಾಗೂ ಚೀನಾ ಗಡಿ ಸಮೀಪವಿರುವ ಭಾರತದ ಬರಾಹೋಟಿ ವಲಯದಲ್ಲಿರುವ ವಾಯುನೆಲೆ ಮೂಲಕ ಚೀನಾ ಕಾರ್ಯಾಚರಣೆ ಮೇಲೆ ಹದ್ದಿನ ಕಣ್ಣಿಡಲು ಸೂಚಿಸಿದೆ. 

ಚೀನಾ ಡ್ರೋನ್ ರೀತಿಯ ಸಣ್ಣ ವಿಮಾನಗಳನ್ನು ಬಳಸುತ್ತಿದೆ. ಈ ನಡೆಯನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದ್ದು. ಯಾವುದೇ ದಾಳಿಗೂ ಸನ್ನದ್ಧವಾಗಿ ನಿಂತಿದೆ ಎಂದು ಮೂಲಗಳು ಹೇಳಿವೆ.
 

Follow Us:
Download App:
  • android
  • ios