ಎಲ್&ಟಿ ವ್ಯವಸ್ಥಾಪಕ ನಿರ್ದೇಶಕರ ೯೦ ಗಂಟೆ ಕೆಲಸದ ಹೇಳಿಕೆ ವಿವಾದ ಸೃಷ್ಟಿಸಿತ್ತು. ಈ ನಡುವೆ ೭೦ ಸಾವಿರ ಕೋಟಿ ರೂ.ಗಳ ಜಲಾಂತರ್ಗಾಮಿ ಟೆಂಡರ್‌ನಲ್ಲಿ ಎಲ್&ಟಿಗೆ ನಷ್ಟವಾಗಿದೆ. ರಕ್ಷಣಾ ಸಚಿವಾಲಯ ತಾಂತ್ರಿಕ ಕಾರಣ ನೀಡಿ ಟೆಂಡರ್ ತಿರಸ್ಕರಿಸಿದೆ. ಈಗ ಮಜಗಾಂವ್ ಡಾಕ್ಯಾರ್ಡ್ಸ್ ಮತ್ತು ಜರ್ಮನ್ ಕಂಪನಿ ಮಾತ್ರ ಸ್ಪರ್ಧೆಯಲ್ಲಿವೆ.

 'ಭಾನುವಾರವೂ ಹೆಂಡ್ತಿ ಮುಖ ಎಷ್ಟು ನೋಡ್ತೀರಾ, 90 ಗಂಟೆ ಕೆಲಸ ಮಾಡಿ' ಎಂದು ಇತ್ತೀಚೆಗೆ ಎಂಜಿನಿಯರಿಂಗ್ ದೈತ್ಯ ಲಾರ್ಸೆನ್ ಮತ್ತು ಟೂಬ್ರೊ (L & T) ವ್ಯವಸ್ಥಾಪಕ ನಿರ್ದೇಶಕ ಎಸ್‌.ಎನ್ ಸುಬ್ರಹ್ಮಣ್ಯ ಹೇಳಿಕೆ ನೀಡಿದ್ದರು. ಈ ಹೇಳಿಕೆ ಕೋಲಾಹಲ ಸೃಷ್ಟಿಸಿತ್ತು. ಈ ಹೇಳಿಕೆ ವಿರುದ್ಧ ವಿವಿಧ ಕ್ಷೇತ್ರಗಳ ಗಣ್ಯರೂ ಸೇರಿದಂತೆ ಹಲವರು ಆಕ್ರೋಶ ಹೊರಹಾಕಿದ್ದರು. ಈ ಹೇಳಿಕೆ ವಿರುದ್ಧ ಸೋಷಿಯಲ್​ ಮೀಡಿಯಾದಲ್ಲಿ ವ್ಯಕ್ತವಾಗ್ತಿರೋ ಟೀಕೆ, ಮೀಮ್ಸ್, ಟ್ರೋಲ್​ಗಳಿಗೆ ಲೆಕ್ಕವೇ ಇಲ್ಲ. ಅದು ಎಷ್ಟರ ಮಟ್ಟಿಗೆ ಹೋಗಿತ್ತು ಎಂದರೆ, ಕಾಂಡೋಮ್ ಕಂಪೆನಿಯೊಂದು ಜಾಹೀರಾತು ಕೂಡ ಹೊರತಂದಿದೆ. ಹೆಂಡತಿ ಮುಖ ನೋಡುವುದು ಅನಿವಾರ್ಯವಲ್ಲ, ಆದರೆ ಪ್ರೀತಿ ಹಾಗೂ ಬಯಕೆ ಈಡೇರಿಸುವಂತಿರಲಿ ಎಂದು ಜಾಹೀರಾತು ನೀಡುವ ಮೂಲಕ ಸುಬ್ರಹ್ಮಣ್ಯ ಅವರಿಗೆ ಠಕ್ಕರ್​ ನೀಡಿದೆ. ಈ ವಿವಾದದ ನಡುವೆಯೇ ಇದೀಗ ಎಲ್ & ಟಿ ಕಂಪೆನಿಗೆ ದೊಡ್ಡ ಆಘಾತವೊಂದು ಎದುರಾಗಿದೆ. 70 ಸಾವಿರ ಕೋಟಿ ನಷ್ಟ ಉಂಟಾಗಿದೆ. 

ಅಷ್ಟಕ್ಕೂ ಆಗಿರುವುದು ಏನೆಂದರೆ, ಈ ಕಂಪೆನಿಯು, ಆರು ಜಲಾಂತರ್ಗಾಮಿ ನೌಕೆಗಳನ್ನು ಸ್ವಾಧೀನಪಡಿಸಿಕೊಳ್ಳಲು 70 ಸಾವಿರ ಕೋಟಿ ಮೌಲ್ಯದ ಟೆಂಡರ್‌ ಹಾಕಿತ್ತು. ಆದರೆ ಇದು ನಿಯಮದ ಪ್ರಕಾರ ಇಲ್ಲ ಎನ್ನುವ ಕಾರಣಕ್ಕೆ, ರಕ್ಷಣಾ ಸಚಿವಾಲಯ ಅದಕ್ಕೆ ಅನುಮತಿ ನೀಡಲಿಲ್ಲ. ಕಂಪೆನಿಯ ಪ್ರಸ್ತಾವವನ್ನು ತಿರಸ್ಕರಿಸಿದೆ. 'ಪ್ರಾಜೆಕ್ಟ್ 75 ಇಂಡಿಯಾ' ಅಡಿಯಲ್ಲಿ ಮೂರು ವಾರಗಳ ಕಾಲ ನೀರಿನ ಅಡಿಯಲ್ಲಿ ಉಳಿಯುವ ಸಾಮರ್ಥ್ಯವನ್ನು ಹೊಂದಿರುವ ಆರು ಸುಧಾರಿತ ಜಲಾಂತರ್ಗಾಮಿ ನೌಕೆಗಳನ್ನು ಭಾರತೀಯ ನೌಕಾಪಡೆಗೆ ಒದಗಿಸಲು ಎಲ್ & ಟಿ ಸ್ಪ್ಯಾನಿಷ್ ನವಂತಿಯಾ ಜೊತೆ ಪಾಲುದಾರಿಕೆಯಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಆದಾಗ್ಯೂ, ಭಾರತೀಯ ನೌಕಾಪಡೆಯ ಅವಶ್ಯಕತೆಗಳನ್ನು ಪೂರೈಸದ ಕಾರಣ ಕಂಪನಿಯ ಪ್ರಸ್ತಾವನೆಯನ್ನು ರಕ್ಷಣಾ ಸಚಿವಾಲಯ ತಿರಸ್ಕರಿಸಿದೆ ಎಂದು ರಕ್ಷಣಾ ಮೂಲಗಳನ್ನು ಉಲ್ಲೇಖಿಸಿ ಎಎನ್​ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಹೆಂಡ್ತಿ ಮುಖ ನೋಡೋದು ಅನಿವಾರ್ಯವಲ್ಲ, L&T ಮುಖ್ಯಸ್ಥರಿಗೆ ಕಾಂಡೋಮ್ ಜಾಹೀರಾತು ಠಕ್ಕರ್

ಈ ವರದಿಯ ಪ್ರಕಾರ, ಎಲ್ & ಟಿ ಮತ್ತು ಅದರ ಪಾಲುದಾರರು ಸ್ಪೇನ್‌ನಲ್ಲಿರುವ ತನ್ನ ನಿರ್ಣಾಯಕ ಏರ್ ಇಂಡಿಪೆಂಡೆಂಟ್ ಪ್ರೊಪಲ್ಷನ್ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಭಾರತೀಯ ನೌಕಾಪಡೆ ತಂಡಕ್ಕೆ ಪ್ರದರ್ಶಿಸಿದ್ದರು. ಆದರೆ ಅದಕ್ಕೆ ಅನುಮತಿ ಸಿಗಲಿಲ್ಲ. ಎಲ್ & ಟಿ ಟೆಂಡರ್ ತಿರಸ್ಕರಿಸಲ್ಪಟ್ಟಿರುವುದರಿಂದ ಸರ್ಕಾರಿ ಸ್ವಾಮ್ಯದ ಮಜಗಾಂವ್ ಡಾಕ್ಯಾರ್ಡ್ಸ್ ಲಿಮಿಟೆಡ್ ಮತ್ತು ಅದರ ಪಾಲುದಾರ ಜರ್ಮನಿಯ ಥೈಸೆನ್ಕೃಪ್ ಮೆರೈನ್ ಸಿಸ್ಟಮ್ಸ್ ಆರು ಜಲಾಂತರ್ಗಾಮಿ ನೌಕೆಗಳನ್ನು ತಯಾರಿಸುವ ಸ್ಪರ್ಧೆಯಲ್ಲಿ ಉಳಿದಿರುವ ಏಕೈಕ ಮಾರಾಟಗಾರರಾಗಲಿವೆ.

ಮಜಗಾಂವ್ ಡಾಕ್ಯಾರ್ಡ್ಸ್ ಇತ್ತೀಚೆಗೆ ಆರು ಪ್ರಾಜೆಕ್ಟ್ 75 ಸ್ಕಾರ್ಪೀನ್ ವರ್ಗದ ಜಲಾಂತರ್ಗಾಮಿ ಐಎನ್ಎಸ್ ವಾಗ್ಶೀರ್ ಅನ್ನು ಭಾರತೀಯ ನೌಕಾಪಡೆಗೆ ಪೂರೈಸಿದೆ. ಆದರೆ ಫ್ರೆಂಚ್ ನೇವಲ್ ಗ್ರೂಪ್ ಬೆಂಬಲದೊಂದಿಗೆ ನಿರ್ಮಿಸಲಾಗುವ ಪ್ರಾಜೆಕ್ಟ್ 75 (ಹೆಚ್ಚುವರಿ ಜಲಾಂತರ್ಗಾಮಿ) ಅಡಿಯಲ್ಲಿ ಇನ್ನೂ ಮೂರು ಜಲಾಂತರ್ಗಾಮಿ ನೌಕೆಗಳಿಗೆ ಆದೇಶಗಳನ್ನು ಪಡೆಯಲಿದೆ. ಇತ್ತೀಚೆಗೆ, ನವದೆಹಲಿಯ ಪ್ರತಿಸ್ಪರ್ಧಿಗಳಾದ ಚೀನಾ ಮತ್ತು ಪಾಕಿಸ್ತಾನ ಕೈಗೊಂಡ ತ್ವರಿತ ನೌಕಾ ಆಧುನೀಕರಣ ಯೋಜನೆಗಳನ್ನು ಎದುರಿಸಲು ಕೇಂದ್ರ ಸರ್ಕಾರವು ಪರಮಾಣು ಮತ್ತು ಸಾಂಪ್ರದಾಯಿಕ ಎರಡೂ ಸೇರಿದಂತೆ ಹಲವಾರು ಜಲಾಂತರ್ಗಾಮಿ ಯೋಜನೆಗಳನ್ನು ತೆರವುಗೊಳಿಸಿದೆ.

LT 90 ಗಂಟೆ, ಇನ್ಫೋಸಿಸ್ 70 ಗಂಟೆ, ಆದ್ರೆ ಚಿರತೆಯಿಂದ ಸಿಕ್ತು ಮನೆಯಿಂದ ಕೆಲಸ, ಮೀಮ್ಸ್ ವೈರಲ್