LT 90 ಗಂಟೆ, ಇನ್ಫೋಸಿಸ್ 70 ಗಂಟೆ, ಆದ್ರೆ ಚಿರತೆಯಿಂದ ಸಿಕ್ತು ಮನೆಯಿಂದ ಕೆಲಸ, ಮೀಮ್ಸ್ ವೈರಲ್
ಎಲ್&ಟಿ ಮುಖ್ಯಸ್ಥ 90 ಗಂಟೆ ಕೆಲಸ ಮಾಡಬೇಕು ಎಂದ ಬೆನ್ನಲ್ಲೇ ಇದೀಗ ಉದ್ಯೋಗಿಗಳು ಕನಿಷ್ಟ 20 ಗಂಟೆ ಉಳಿಸಲು ಇನ್ಫೋಸಿಸ್ ಸೇರಲು ಮುಂದಾಗಿದ್ದಾರೆ. ಇತ್ತ ಹೊಸ ಬಾಸ್‌ನಿಂದ ಇನ್ಫೋಸಿಸ್ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಸಿಕ್ಕಿದೆ. ನಕ್ಕು ನಗಿಸುವ ಹಲವು ಮೀಮ್ಸ್ ಇಲ್ಲಿದೆ.
ಬೆಂಗಳೂರು(ಜ.11) ವರ್ಕ್ ಲೈಫ್ ಬ್ಯಾಲೆನ್ಸ್ ಕುರಿತು ಭಾರಿ ಚರ್ಚೆಗಳು ನಡೆಯುತ್ತಿದೆ. ಇನ್ಪೋಸಿಸ್ ನಾರಾಯಣ ಮೂರ್ತಿ ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂದರೆ, ಎಲ್ ಆ್ಯಂಡ್ ಟಿ ಮುಖ್ಯಸ್ಥ ಎಸ್‌ಎನ್ ಸುಬ್ರಹ್ಮಣ್ಯನ್ ವಾರದಲ್ಲಿ 90 ಗಂಟೆ ಕೆಲಸ ಮಾಡಬೇಕು ಎಂದಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್, ಮೀಮ್ಸ್‌ಗಳು ಹರಿದಾಡುತ್ತಿದೆ. ಒಂದೆಡೆ 90 ಗಂಟೆ ಕೆಲಸ ಅನಿವಾರ್ಯ ಎಂದ ಎಲ್ ಆ್ಯಂಡ್ ಟಿ ಮುಖ್ಯಸ್ಥನ ಮಾತಿನಿಂದ ಎಲ್ ಆ್ಯಂಡ್ ಟಿ ಸಂಸ್ಥೆ ಉದ್ಯೋಗಿಗಳು ಇದೀಗ 20 ಗಂಟೆ ಉಳಿಸಲು ಇನ್ಫೋಸಿಸ್ ಸೇರಲು ಬಯಸಿದ್ದರೆ ಅನ್ನೋ ಮೀಮ್ಸ್ ಹರಿದಾಡುತ್ತಿದ್ದರೆ, ಇತ್ತ ನಾರಾಯಣಮೂರ್ತಿ 70 ಗಂಟೆ ಕೆಲಸದಿಂದ ಇನ್ಫೊಸಿಸ್ ಸೇರಿಕೊಂಡಿರುವ ಹೊಸ ಬಾಸ್ ಚಿರತೆ ಸುಸ್ತಾಗಿದ್ದಾರೆ. ಹೀಗಾಗಿ ವರ್ಕ್ ಫ್ರಮ್ ನೀಡಿದ್ದಾರೆ ಅನ್ನೋ ಮೀಮ್ಸ್ ಭಾರಿ ಸದ್ದು ಮಾಡುತ್ತಿದೆ.
ಇನ್ಫೋಸಿಸ್ ನಾರಾಯಣಮೂರ್ತಿ ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂದು ವಿವಾದ ಸೃಷ್ಟಿಸಿದ ಬೆನ್ನಲ್ಲೇ ಎಲ್ ಆ್ಯಂಡ್ ಟಿ ಮುಖ್ಯಸ್ಥ ಎಸ್‌ಎನ್ ಸುಬ್ರಹ್ಮಣ್ಯನ್ 70 ಸಾಕಗಲ್ಲ, ವಾರದಲ್ಲಿ 90 ಗಂಟೆ ಕೆಲಸ ಮಾಡಬೇಕು ಎಂದಿದ್ದಾರೆ. ಭಾನುವಾರ ಕೂಡ ಕೆಲಸ ಮಾಡಬೇಕು. ಕಾರಣ ನಾನು ಮಾಡುತ್ತೇನೆ ಎಂದಿದ್ದಾರೆ. ಮನೆಯಲ್ಲಿ ಎಷ್ಟು ಹೊತ್ತು ಹೆಂಡತಿ ಮುಖ ನೋಡುತ್ತಿರಿ. ಮನೆಯಲ್ಲಿ ಸಮಯ ಕಳೆಯುವ ಬದಲು ಕಚೇರಿಯಲ್ಲಿ ಕೆಲಸ ಮಾಡಿ ಎಂದು ಸೂಚಿಸಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಜೊತೆ ಜೊತೆಗೆ ಎಸ್‌ಎನ್ ಸುಬ್ರಹ್ಮಣ್ಯನ್ ಹಾಗೂ ನಾರಾಯಣಮೂರ್ತಿ ಹೇಳಿಕೆಯನ್ನು ಟ್ರೋಲ್ ಮಾಡಲಾಗುತ್ತಿದೆ. ಈ ಕುರಿತು ಮೀಮ್ಸ್ ಮಾಡಿ ಹರಿಬಿಡಲಾಗುತ್ತಿದೆ.
70 ಗಂಟೆ ಕೆಲಸದಿಂದ GST ಪೋರ್ಟಲ್ ಡೌನ್, ನಾರಾಯಣಮೂರ್ತಿ ರೋಸ್ಟ್ ಮಾಡಿದ ನೆಟ್ಟಿಗರು
ಯಾರಾದರೂ ಸುಬ್ರಹ್ಮಣ್ಯನ್ ಅವರಿಗೆ ಹೇಳಿ, ಮನೆಯಲ್ಲಿ ಹೆಂಡತಿ ಮುಖ ನೋಡದೆ 90 ಗಂಟೆ ಕೆಲಸ ಮಾಡುತ್ತಾ ಕುಳಿತರೆ, ಬೇರೆ ಯಾರಾದರೂ ಹೆಂಡತಿ ಮುಖ ನೋಡಿ ಜೀವನ ಸಾಗಿಸುತ್ತಾರೆ. ಉದ್ಯೋಗಿ ಕಚೇರಿಯಲ್ಲಿ ಸಿಸ್ಟಮ್ ನೋಡುತ್ತಾ ಕುಳಿತಿರಬೇಕಷ್ಟೆ ಎಂದು ಟ್ರೋಲ್ ಮಾಡಿದ್ದಾರೆ.ಸುಬ್ರಹ್ಮಣ್ಯನ್ 90 ಗಂಟೆ ಹೇಳಿಕೆ ನೀಡುತ್ತಿದ್ದಂತೆ ಇದೀಗ ಎಲ್ ಆ್ಯಂಡ್ ಟಿ ಉದ್ಯೋಗಿಗಲು ಇನ್ಫೋಸಿಸ್ ಸೇರಲು ಬಯಸುತ್ತಿದ್ದಾರೆ. ಕನಿಷ್ಠ 20 ಗಂಟೆ ಉಳಿಸಬಹುದು.ಹೆಂಡತಿ ಮುಖ ನೋಡಬಹುದು. ಮನೆ ವಿಳಾಸ ಮರೆಯದೆ ನೆನಪಿನಲ್ಲಿ ಇಟ್ಟುಕೊಳ್ಳಬಹುದು ಎಂದು ಮೀಮ್ಸ್ ಹರಿದಾಡುತ್ತಿದೆ.
ಎಲ್‌ಆ್ಯಂಡ್ ಟಿ ಉದ್ಯೋಗಿಗಳು ಇದೀಗ ಮನೆಯಲ್ಲಿ ಹೆಂಡತಿ ಮುಖ ಬಿಟ್ಟಿದ್ದಾರೆ. ಯಾರ ಮುಖ ನೋಡುತ್ತಾರೆ ಮಾತ್ರ ಕೇಳಬೇಡಿ ಎಂದು ಮೀಮ್ಸ್ ಹರಿದಾಡುತ್ತಿದೆ. ರವಿಚಂದ್ರನ್ ಸಿನಿಮಾ ಸೀನ್‌ಗಳನ್ನು ಹಾಕಿ 70 ಗಂಟೆ ಸುದ್ದಿ ಕೇಳಿ ಇನ್ಫೋಸಿಸ್ ತೊರೆದು ಎಲ್ ಆ್ಯಂಡ್ ಟಿ ಸೇರಿದ ಉದ್ಯೋಗಿಯ ಪರಿಸ್ಥಿತಿ ಎಂದು ಮೀಮ್ಸ್ ಪೋಸ್ಟ್ ಮಾಡಿದ್ದಾರೆ.
ಇತ್ತ ನಾರಾಯಣ ಮೂರ್ತಿ ಕೂಡ ಟ್ರೋಲ್ ಆಗಿದ್ದಾರೆ. ಇತ್ತೀಚೆಗೆ ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. ಹೀಗಾಗಿ ಮೈಸೂರು ಕ್ಯಾಂಪಸ್ ಉದ್ಯೋಗಿಗಳಿಗೆ ವರ್ಕ್ ಫ್ರೋಮ್ ನೀಡಲಾಗಿದೆ. ಇದರ ಬೆನ್ನಲ್ಲೇ ನಾರಾಯಣ ಮೂರ್ತಿ 70 ಗಂಟೆ ಕೆಲಸ ಹೇಳಿಕೆಯನ್ನು ಟ್ರೋಲ್ ಮಾಡಲಾಗುತ್ತಿದೆ. ಚಿರತೆ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಪ್ರತ್ಯಕ್ಷಗೊಂಡಿದ್ದು ಒಳ್ಳೇದಾಯಿತು. ಇಲ್ಲಿ 70 ಗಂಟೆ ಮಾತ್ರ ಕೆಲಸ ಬಳಿಕ ಮನೆಗೆ ಹೋಗಬಹುದು. ಆದರೆ ಎಲ್‌ಟಿ ಕ್ಯಾಂಪಸ್‌ನಲ್ಲಿ ಪ್ರತ್ಯಕ್ಷವಾಗಿದ್ದರೆ 90 ಗಂಟೆ ಕೆಲಸ ಎಂದು ಟ್ರೋಲ್ ಮಾಡಿದ್ದಾರೆ.
ನಾರಾಯಣಮೂರ್ತಿ 70 ಗಂಟೆ ಕೆಲಸ ಮಾಡಲು ಹೇಳಿದರು. ಇನ್ಪೋಸಿಸ್ ಬಾಸ್, ಮ್ಯಾನೇಜರ್ ಮನೆಯಿಂದ ಸಾಧ್ಯವಿಲ್ಲ, ಕಚೇರಿಗೆ ಬಂದು ಕೆಲಸ ಮಾಡಲು ಸೂಚಿಸಿದರೆ. ಆದರೆ ಹೊಸ ಬಾಸ್ ಚಿರತೆ ಒಂದೇ ಕ್ಷಣದಲ್ಲಿ ಎಲ್ಲರಿಗೂ ಮನೆಯಿಂದ ಕೆಲಸ ಮಾಡಲು ಅನುಮತ ನೀಡಿದ್ದಾರೆ. ಇನ್ಫೋಸಿಸ್‌ಗೆ ವರ್ಕ್ ಫ್ರಮ್ ಹೋಮ್ ಕೊಡಲು ಚಿರತೆ ಬಾಸ್‌ಗೆ ಮಾತ್ರ ಸಾಧ್ಯ ಎಂದು ಮೀಮ್ಸ್ ಪೋಸ್ಟ್ ಮಾಡಲಾಗಿದೆ.
ಹೆಂಡ್ತಿ ಮುಖ ಎಷ್ಟು ಹೊತ್ತು ನೋಡ್ತಿರಾ, 90 ಗಂಟೆ ಕೆಲಸ ಮಾಡಲು ಸೂಚಿಸಿದ L&T ಮುಖ್ಯಸ್ಥ