ಕುನೋ ರಾಷ್ಟ್ರೀಯ ಪಾರ್ಕ್‌ನಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿದ ಆಶಾ ಚೀತಾ!

ಪ್ರಧಾನಿ ನರೇಂದ್ರ ಮೋದಿ ಅವರಿಂದ ನಾಮಕರಣಗೊಂಡು ಆಶಾ ಎನ್ನುವ ಹೆಸರು ಪಡೆದುಕೊಂಡಿದ್ದ ಚೀತಾ, ಬುಧವಾರ ಮೂರು ಮರಿಗಳಿಗೆ ಜನ್ಮ ನೀಡಿದೆ.
 

Kuno National Park In Madhya Pradesh PM Modi named Cheetah Aasha delivers three cubs san

ಭೋಪಾಲ್‌ (ಜ.3): ಭಾರತದಲ್ಲಿ ಚೀತಾವನ್ನು ಮರು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಕೇಂದ್ರದ ದೊಡ್ಡ ಪ್ರಯತ್ನಕ್ಕೆ ಬುಧವಾರ ದೊಡ್ಡ ಫಲ ಸಿಕ್ಕಿದೆ. ಹೊಸ ವರ್ಷದ ಆರಂಭದಲ್ಲಿಯೇ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಪಾರ್ಕ್‌ನಲ್ಲಿದ್ದ ಆಶಾ ಹೆಸರಿನ ಚೀತಾ ಮೂರು ಮರಿಗಳಿಗೆ ಜನ್ಮ ನೀಡಿದೆ. ಈ ಚೀತಾಗೆ ಆಶಾ ಎನ್ನುವ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದರು. ಈ ಬೆಳವಣಿಗೆ ಭಾರತದ ವಾತಾವರಣದಲ್ಲಿ ಚೀತಾಗಳನ್ನು ಮರುಸ್ಥಾಪನೆ ಮಾಡುವ ಭರವಸೆಯನ್ನು ಮತ್ತೊಮ್ಮೆ ಹುಟ್ಟುಹಾಕಿದೆ. ಕಳೆದ ವರ್ಷ ಕುನೋ ರಾಷ್ಟ್ರೀಯ ಪಾರ್ಕ್‌ನಲ್ಲಿ ಸಾಲು ಸಾಲು ಚೀತಾಗಳು ಸಾವು ಕಂಡಿದ್ದವು. ಇದರ ಬೆನ್ನಲ್ಲಿಯೇ ಸುಪ್ರೀಂ ಕೋರ್ಟ್‌ನಲ್ಲಿ ಈ ಕುರಿತಾದ ಅರ್ಜಿಗಳು ಕೂಡ ದಾಖಲಾಗಿದ್ದವು.  ಆಶಾ ಮೂರು ಮರಿಗಳಿಗೆ ಜನ್ಮ ನೀಡಿದ್ದಾಳೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಈ ಮರಿಗಳ ಬಹು ನಿರೀಕ್ಷಿತ ಜನನವು ಭಾರತದಲ್ಲಿ ಚೀತಾಗಳ ಸಂತತಿಯನ್ನು ಮರುಸ್ಥಾಪಿಸುವ ಭರವಸೆಯ ದಾರಿದೀಪವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆಶಾ ಯಶಸ್ವಿಯಾಗಿ ಮೂರು ಮರಿಗಳಿಗೆ ಜನ್ಮನೀಡಿವುದು ಚೀತಾದ ಸಂರಕ್ಷಣಾ ಉಪಕ್ರಮಗಳಲ್ಲಿ ಮಹತ್ವದ ಮೈಲಿಗಲ್ಲು ಎನ್ನಲು ಅಡ್ಡಿಇಲ್ಲ. ರಾಷ್ಟ್ರಾದ್ಯಂತ ವನ್ಯಜೀವಿ ಅಧಿಕಾರಿಗಳು ಹಾಗೂ ಪರಿಸರವಾದಿಗಳು ಇದಕ್ಕೆ ಸಂತಸಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚೀತಾವನ್ನು ಪಾರ್ಕ್‌ಗೆ ಬಿಡುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭರವಸೆ ಎನ್ನುವ ಅರ್ಥ ನೀಡುವ ಆಶಾ ಹೆಸರನ್ನು ಇದಕ್ಕೆ ನೀಡಿದ್ದರು.  ಅಧಿಕಾರಿಗಳು ಆಶಾ ಮತ್ತು ಅವಳ ನವಜಾತ ಮರಿಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ, ಅವುಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸುರಕ್ಷಿತ ಮತ್ತು ಪೋಷಣೆಯ ವಾತಾವರಣವನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದಾರೆ.ಕೇಂದ್ರ ಸಚಿವ ಭೂಪೇಂದ್ರ ಅವರು ಹೊಸ ಮರಿಗಳ ಆಗಮನದ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಕುನೋ ಅರಣ್ಯದಲ್ಲಿ ಪ್ರವಾಸಿಗರಿಗೆ ಚೀತಾ ವೀಕ್ಷಣೆ ಭಾಗ್ಯ, ಪ್ರವಾಸಿ ವಲಯದಲ್ಲಿ 2 ಗಂಡು ಚೀತಾ

ಕುನೋ ರಾಷ್ಟ್ರೀಯ ಪಾರ್ಕ್‌ ಮೂರು ಹೊಸ ಸದಸ್ಯರನ್ನು ಸ್ವಾಗತಿಸಿದೆ ಎಂದು ಹೇಳಲು ಬಹಳ ಸಂಭ್ರಮವಾಗುತ್ತಿದೆ. ನಮೀಬಿಯಾದಿಂದ ಬಂದಿದ್ದ ಆಶಾ ಹೆಸರಿನ ಚೀತಾದ ಮರಿಗಳು ಇವಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್‌ ಚೀತಾದ ದೊಡ್ಡ ಮಟ್ಟದ ಯಶಸ್ಸಾಗಿದೆ' ಎಂದು ಭೂಪೇಂದ್ರ ಯಾದವ್‌ ಬರೆದುಕೊಂಡಿದ್ದಾರೆ.

9 ಚೀತಾ ಸಾವನ್ನಪ್ಪಿದ್ದರೂ ಕುನೋದಿಂದ ಅವುಗಳನ್ನು ವರ್ಗಾಯಿಸುವುದಿಲ್ಲ

 

Latest Videos
Follow Us:
Download App:
  • android
  • ios