Kundalpur and Bandakpur : ಭಾರತದ ಈ ಎರಡು ನಗರ "ಪವಿತ್ರ ಪ್ರದೇಶ" ಎಂದು ಘೋಷಣೆ, ಮದ್ಯ, ಮಾಂಸ ನಿಷೇಧ!

ಕುಂದಲ್ಪುರ ಮತ್ತು ಬಂದಕ್ಪುರ ಇನ್ನು ಮುಂದೆ ಪವಿತ್ರ ಪ್ರದೇಶ 
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಅವರಿಂದ ಘೋಷಣೆ
ಮದ್ಯ, ಮಾಂಸ ಮಾರಾಟ ಹಾಗೂ ಸೇವನೆ ನಿಷೇಧ

Kundalpur and Bandakpur These 2 cities of India declared holy areas meat and liquor will not be sold here san

ಭೋಪಾಲ್ (ಫೆ. 23): ಮಧ್ಯಪ್ರದೇಶ (Madhya Pradesh) ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan)ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ಮಧ್ಯಪ್ರದೇಶ ರಾಜ್ಯದಲ್ಲಿ ಜೈನರ (Jains) ಪವಿತ್ರ ಯಾತ್ರಾಸ್ಥಳವಾದ ಕುಂದಲ್ಪುರ (Kundalpur ) ಸೇರಿದಂತೆ ಎರಡು ನಗರಗಳನ್ನು "ಪವಿತ್ರ ಕ್ಷೇತ್ರ' (Holy Place)ಎಂದು ಘೋಷಣೆ ಮಾಡಿದ್ದಾರೆ. ಈ ಪ್ರದೇಶದಲ್ಲಿ ಇನ್ನು ಮುಂದೆ ಮದ್ಯ ಹಾಗೂ ಮಾಂಸದ ಮಾರಾಟಕ್ಕೆ (meat and liquor Ban) ಸಂಪೂರ್ಣವಾಗಿ ನಿಷೇಧವಿರಲಿದೆ ಎಂದು ಅವರು ತಿಳಿಸಿದ್ದಾರೆ.

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಿಂದ 285 ಕಿ.ಮೀ ದೂರದಲ್ಲಿರುವ ದಾಮೋಹ್ (Damoh) ಜಿಲ್ಲೆಯ ಕುಂದಲ್ಪುರದಲ್ಲಿ ಜೈನ ಸಮುದಾಯದ ಪಂಚಕಲ್ಯಾಣಕ್ ಮಹೋತ್ಸವದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕಳೆದ ಸೋಮವಾರ ಈ ಮಹತ್ವದ ಘೋಷಣೆ ಮಾಡಿದರು.

ಆಚಾರ್ಯ ವಿದ್ಯಾಸಾಗರ ಮಹಾರಾಜ್ (Acharya Vidyasagar Maharaj)ಅವರ ಪ್ರೇರಣೆಯಿಂದ ಕುಂದಲ್ಪುರ ಮತ್ತು ಬಂದಕ್ಪುರವನ್ನು ಪವಿತ್ರ ಕ್ಷೇತ್ರಗಳೆಂದು ಘೋಷಿಸುತ್ತಿದ್ದೇನೆ, ಅಲ್ಲಿ ಮಾಂಸ ಮತ್ತು ಮದ್ಯ ಮಾರಾಟ ಸಂಪೂರ್ಣವಾಗಗಿ ನಿಷೇಧವಾಗಲಿದೆ ಎಂದು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. ಬಂದಕ್ಪುರ ಪಟ್ಟಣವು ಶಿವನ ದೇವಾಲಯಕ್ಕೆ ಜನಪ್ರಿಯವಾಗಿದೆ. ವಿದ್ಯಾಸಾಗರ ಮಹಾರಾಜ್ ಅವರ ಆಶಯದಂತೆ ರಾಜ್ಯ ಸರ್ಕಾರವು ಒಂದು ವರ್ಷದೊಳಗೆ ಹಿಂದಿಯಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪಠ್ಯಕ್ರಮವನ್ನು ಪ್ರಾರಂಭಿಸಲಿದೆ ಎಂದು ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. "ನನ್ನ ಜೀವನದಲ್ಲಿ ಯಾವುದೇ ಸಮಸ್ಯೆ ಎದುರಾದಾಗ, ನಾನು ಗುರುದೇವನನ್ನು ಸ್ಮರಿಸುತ್ತೇನೆ ಮತ್ತು ಅವರ ಆಶೀರ್ವಾದದಿಂದ ನನ್ನ ಸಮಸ್ಯೆ ಪರಿಹಾರವಾಗಿದೆ" ಎಂದು ಹೇಳಿದರು.


ಇದೇ ವೇಳೆ ಜನತೆ ಗೋಸಂರಕ್ಷಣೆಗೆ ಮುಂದಾಗಬೇಕು ಹಾಗೂ ಉತ್ತಮ ಪರಿಸರ ನಿರ್ಮಾಣಕ್ಕಾಗಿ ಗಿಡಗಳನ್ನು ನೆಡಬೇಕು ಎಂದು ಮನವಿ ಮಾಡಿದರು. ಈ ತಿಂಗಳ ಆರಂಭದಲ್ಲಿ, ಮಧ್ಯಪ್ರದೇಶದ ಸಚಿವ ವಿಶ್ವಾಸ್ ಸಾರಂಗ್ ಅವರು ಮುಂದಿನ ಶೈಕ್ಷಣಿಕ ಅಧಿವೇಶನದಿಂದ ಭೋಪಾಲ್‌ನ ಗಾಂಧಿ ವೈದ್ಯಕೀಯ ಕಾಲೇಜಿನಲ್ಲಿ ಹಿಂದಿಯಲ್ಲಿ ಎಂಬಿಬಿಎಸ್ ಪಠ್ಯಕ್ರಮವನ್ನು ಸರ್ಕಾರ ಪ್ರಾರಂಭಿಸಲಿದೆ ಎಂದು ಹೇಳಿದ್ದರು.

ಇಟ್ಟಿಗೆ ಗೂಡು ನಿರ್ವಾಹಕನಿಗೆ ಖುಲಾಯಿಸಿದ ಅದೃಷ್ಟ... ಸಿಕ್ತು ಒಂದು ಕೋಟಿಗೂ ಅಧಿಕ ಮೌಲ್ಯದ ವಜ್ರ
ಏನಿದು ಕುಂದಲ್ಪುರ: ಕುಂದಲ್ಪುರವು ಮಧ್ಯಪ್ರದೇಶ ರಾಜ್ಯದಲ್ಲಿರುವ ಒಂದು ಪಟ್ಟಣವಾಗಿದ್ದು, ದಾಮೋಹ್ ನಗರದಿಂದ 35 ಕಿಮೀ ದೂರದಲ್ಲಿದೆ. ಇದು ಭಾರತದಲ್ಲಿ ಜೈನರ ಐತಿಹಾಸಿಕ ಯಾತ್ರಾ ಸ್ಥಳವಾಗಿದೆ (historical pilgrimage site for Jains ). ಇಲ್ಲಿ ರಿಷಭನಾಥನ (Rishabhanatha)ದೊಡ್ಡ ಪ್ರತಿಮೆಯಿದ್ದು, ಇದನ್ನು ಬಡೆ ಬಾಬಾ ಎಂದೂ ಕರೆಯುತ್ತಾರೆ. ಪ್ರತಿಮೆಯು ಕುಳಿತಿರುವ (ಪದ್ಮಾಸನ) ಭಂಗಿಯಲ್ಲಿದ್ದು 15 ಅಡಿ ಎತ್ತರವಿದೆ. ಹಿಂದೆ ಇದನ್ನು ಭಗವಾನ್ ಮಹಾವೀರನ (Lord Mahavira)ವಿಗ್ರಹ ಎಂದು ತಪ್ಪಾಗಿ ಗುರುತಿಸಲಾಗಿತ್ತು. ಇಲ್ಲಿ ವಿವಿಧ ಪ್ರಕಾರದ 63 ದೇವಾಲಯಗಳಿವೆ. ಜಲ ಮಂದಿರ ಎಂಬ ದೇವಾಲಯವು ವರ್ಧಮಾನ್ ಸಾಗರ್ ಕೊಳದ ಮಧ್ಯದಲ್ಲಿದೆ. ಎಲ್ಲಾ ದೇವಾಲಯಗಳ ಪೈಕಿ ಭಗವಾನ್ ಆದಿನಾಥ್ (ಪ್ರೀತಿಯಿಂದ "ಬಡೆ ಬಾಬಾ" ಎಂದು ಕರೆಯುತ್ತಾರೆ) ಪ್ರಧಾನ ದೇವತೆಯಾಗಿರುವ ಬಡೇ ಬಾಬಾ ದೇವಾಲಯವು (The Bade Baba Temple) ಅತ್ಯಂತ ಪ್ರಸಿದ್ಧವಾಗಿದೆ.

Mandya: ಅಂಗನವಾಡಿ ಕಳ್ಳತನಕ್ಕೆ ಬಂದವ ಅಡುಗೆ ಮಾಡಿ-ತಿಂದು, ಕಥೆ, ಕವನ ಬರೆದಿಟ್ಟು ಹೋದ!
ಬಡೇ ಬಾಬಾ ಪ್ರತಿಮೆಯ ಛಾಯಾಚಿತ್ರಗಳನ್ನು ಅನೇಕ ಪ್ರಕಟಣೆಗಳು, ಕ್ಯಾಲೆಂಡರ್‌ಗಳು ಮತ್ತು ಪೋಸ್ಟರ್‌ಗಳಲ್ಲಿ ವ್ಯಾಪಕವಾಗಿ ಬಳಸಲಾಗಿದೆ. ವಿಕ್ರಮ್ ಸಂವತ್ 1757 ರ ಶಾಸನದ ಪ್ರಕಾರ, ಬಡೇ ಬಾಬಾ ದೇವಾಲಯವು ಕುಂದಲ್ಪುರದಲ್ಲಿರುವ ಅತ್ಯಂತ ಹಳೆಯ ದೇವಾಲಯವಾಗಿದೆ.  ಈ ದೇವಾಲಯವನ್ನು ಮೂಲಸಂಘ-ಬಾಲತ್ಕರಗಣ-ಸರಸ್ವತಿ ಗಚ್ಛದ ಭಟ್ಟಾರಕ ಸುರೇಂದ್ರಕೀರ್ತಿಯಿಂದ ಮರು-ಶೋಧಿಸಲಾಯಿತು ಮತ್ತು ಬುಂದೇಲ ದೊರೆ ಛತ್ರಸಾಲ್‌ನ ಸಹಾಯದೊಂದಿಗೆ ಇದನ್ನು ಉಳಿದ ಅವಶೇಷಗಳಿಂದ ಮರು ನಿರ್ಮಾಣ ಮಾಡಲಾಯಿತು.

 

Latest Videos
Follow Us:
Download App:
  • android
  • ios