Mandya: ಅಂಗನವಾಡಿ ಕಳ್ಳತನಕ್ಕೆ ಬಂದವ ಅಡುಗೆ ಮಾಡಿ-ತಿಂದು, ಕಥೆ, ಕವನ ಬರೆದಿಟ್ಟು ಹೋದ!

*ಸಕ್ಕರೆ ನಾಡು ಮಂಡ್ಯದ ಮಳವಳ್ಳಿಯಲ್ಲಿ  ವಿಚಿತ್ರ ಘಟನೆ.
*ಹೆಬ್ಬಣಿ ಗ್ರಾಮದ ಅಂಗನವಾಡಿ ಬೀಗ ಮುರಿದು ಒಳನುಗ್ಗಿದ ಕಳ್ಳ
*ಮುಂಜಾನೆವರೆಗೆ ಅಲ್ಲೇ ವಾಸ್ತವ್ಯ ಹೂಡಿ ಪುಳಿಯೊಗರೆ ತಯಾರಿಸಿದ
*ಅಂಗನವಾಡಿಯಲ್ಲಿದ್ದ  ಪುಸ್ತಕದಲ್ಲಿ ಕಥೆ, ಕವನ ಬರೆದಿಟ್ಟು ತೆರಳಿರುವ ಕಳ್ಳ

Thief writes 3 page story Poetry After failed attempts for theft in Anganawadi in Malavalli Mandya mnj

ಮಂಡ್ಯ (ಫೆ. 23):  ದರೋಡೆಗಾಗಿ ಅಂಗನವಾಡಿಗೆ ನುಗ್ಗಿ ಕಳ್ಳನೊಬ್ಬ ಕಥೆ, ಕವನ ಗೀಚಿದ ವಿಚಿತ್ರ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹೆಬ್ಬಣಿ ಗ್ರಾಮದ ಅಂಗನವಾಡಿಯಲ್ಲಿ ಈ ಘಟನೆ ನಡೆದಿದ್ದು ರಾತ್ರಿ ಅಂಗನವಾಡಿ ಬೀಗ ಮುರಿದು ಕಳ್ಳ ಒಳನುಗ್ಗಿದ್ದ. ಆದರೆ ಬೀರು ಮುರಿದಾಗ ಬೆಲೆ ಬಾಳುವ ವಸ್ತುಗಳು ಸಿಗದ ಹಿನ್ನೆಲೆ ಮುಂಜಾನೆವರೆಗೆ ಅಲ್ಲೇ ವಾಸ್ತವ್ಯ ಹೂಡಿದ್ದಾನೆ. ಅಲ್ಲದೇ ಅಂಗನವಾಡಿಯಲ್ಲೇ ಪುಳಿಯೊಗರೆ ತಯಾರಿಸಿ ತಿಂದಿದ್ದಾನೆ. 

ಅಂಗನವಾಡಿ ಕೇಂದ್ರದಲ್ಲಿದ್ದ ಬೀರುವಿನ ಬಾಗಿಲು ಮರಿದು ಹಣಕ್ಕಾಗಿ ತಡಕಾಟ ನಡೆಸಿದ ಕಳ್ಳ ಬಳಿಕ ಅಂಗನವಾಡಿಯಲ್ಲಿದ್ದ ನೋಟ್ ಪುಸ್ತಕದಲ್ಲಿ ಕಥೆ, ಕವನ ಬರೆದಿಟ್ಟು ತೆರಳಿದ್ದಾನೆ. 3 ಪುಟದ ಕಥೆಯಲ್ಲಿ ಜೀವನದ ಅನುಭವ, ಜನರ ದೃಷ್ಟಿಕೋನದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ. ಬೆಳಿಗ್ಗೆ ಅಂಗನವಾಡಿ ಕಾರ್ಯಕರ್ತೆ ಕೆಲಸಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಪಂಡಿತನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಮಹದೇವು ಸ್ಥಳ ಪರಿಶೀಲನೆ ನಡೆಸಿದ್ದು ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ. 

Thief writes 3 page story Poetry After failed attempts for theft in Anganawadi in Malavalli Mandya mnj

"ಒಬ್ಬ ಹುಡುಗ ಚಿಕ್ಕ ವಯಸ್ಸಿನಲ್ಲಿ ತನ್ನ ತಾಯಿಯನ್ನು ಕೊಲೆ ಮಾಡಿದ ಎಂಬ ಆರೋಪವನ್ನು ಹೊತ್ತಿಕೊಂಡು ತನ್ನ ಗ್ರಾಮವನ್ನು ಬಿಟ್ಟು ಬರುವುದು ಒಂದು ಕಥೆ 16-07-1991" ಎಂದು ಕಳ್ಳ ಬರೆದಿದ್ದಾನೆ.

ಇದನ್ನೂ ಓದಿ: Bengaluru: ಸಿನಿಮೀಯ ರೀತಿಯಲ್ಲಿ ಕಳ್ಳನನ್ನು ಚೇಸ್ ಮಾಡಿದ ಖಾಕಿ, 2 ಗಂಟೆಯೊಳಗೆ ಅರೆಸ್ಟ್!

"ಎಷ್ಟು ಜನರ ಪಾಲಿಗೆ ಅನ್ನದಾತನಾಗಿ ದೇಶದ ಬೆನ್ನೆಲುಬಾಗಿ ಅನ್ಯಾಯಕ್ಕೆ ತಲೆಬಾಗಿ ತನ್ನ ಸತಿಯ ಗರ್ಭದಿಂದ ಜನಿಸಿ ಬಂದ ಕಂದನನ್ನು ತನ್ನ ವಂಶದ ಕುಡಿಯನ್ನು, ತನ್ನ ವಂಶದ ಚಿಗುರುವ ಬಳ್ಳಿಯನ್ನು ಭೂಮಿ ತಾಯಿಯ ಬಾಯಿಗೆ ತುತ್ತಾಗಿ ನೀಡುವುದು ಇನ್ನೊಂದು ಕಥೆ" ಹೀಗೆ ಕಳ್ಳ ಹಲವು ಸಾಲುಗಳನ್ನು ಬರೆದಿದ್ದಾನೆ. 

Thief writes 3 page story Poetry After failed attempts for theft in Anganawadi in Malavalli Mandya mnj

ಸಿಗ್ನಲ್‌ಗಳ ಬ್ಯಾಟರಿ ಕದಿಯುತ್ತಿದ್ದ ಚಾಲಾಕಿ ದಂಪತಿ ಸೆರೆ: ಇತ್ತೀಚಿಗೆ ಬೆಂಗಳೂರು ನಗರದಲ್ಲಿ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ(Traffic Signals) ಬ್ಯಾಟರಿ ಕಳವು ಮೂಲಕ ಸಂಚಾರ ಪೊಲೀಸರಿಗೆ(Police) ತಲೆನೋವಾಗಿ ಪರಿಣಮಿಸಿದ್ದ ಕುಖ್ಯಾತ ದಂಪತಿ ಕೊನೆಗೂ ಅಶೋಕ ನಗರ ಠಾಣೆ ಪೊಲೀಸರ ಗಾಳಕ್ಕೆ ಸಿಕ್ಕಿದ್ದಾರೆ.

ಗೊರೆಗುಂಟೆಪಾಳ್ಯದ ಸಿಕಂದರ್‌ ಮತ್ತು ಆತನ ಪತ್ನಿ ನಜ್ಮಾ ಬಂಧಿತರು. ಆರೋಪಿಗಳಿಂದ(Accused) 230 ಬ್ಯಾಟರಿಗಳನ್ನು(Battery) ಜಪ್ತಿ ಮಾಡಲಾಗಿದೆ. ಖದೀಮ ದಂಪತಿಯಿಂದ ಬ್ಯಾಟರಿ ಖರೀದಿಸಿದ ಗುಜರಿ ವ್ಯಾಪಾರಿ ಧನಶೇಖರ್‌ ಕೂಡಾ ಪರಪ್ಪನ ಅಗ್ರಹಾರ ಸೇರಿದ್ದಾನೆ. 

ಎರಡ್ಮೂರು ತಿಂಗಳಿಂದ ನಗರದ ಕೇಂದ್ರ ಭಾಗದಲ್ಲಿ ಜಂಕ್ಷನ್‌ಗಳಲ್ಲಿ ಟ್ರಾಫಿಕ್‌ ಸಿಗ್ನಲ್‌ಗಳ ಬ್ಯಾಟರಿಗಳು ನಿರಂತರವಾಗಿ ಕಳ್ಳತನವಾಗುತ್ತಿದ್ದವು(Theft). ಈ ಸರಣಿ ಕಳ್ಳತನವನ್ನು ಗಂಭೀರವಾಗಿ ಪರಿಣಮಿಸಿದ ಪೊಲೀಸರು, ಸಿಸಿಟಿವಿ(CCTV) ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಣಕ್ಕಾಗಿ ಬ್ಯಾಟರಿಗಳ ಕಳ್ಳತನ:  ಸಿಕಂದರ್‌ ಕ್ರಿಮಿನಲ್‌(Criminal) ಹಿನ್ನೆಲೆಯುಳ್ಳವನಾಗಿದ್ದು, ಆತನ ಮೇಲೆ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. 2017 ಮತ್ತು 18ರಲ್ಲಿ ದ್ವಿಚಕ್ರ ವಾಹನ(Bike Theft) ಕಳ್ಳತನ ಪ್ರಕರಣದಲ್ಲಿ ಆತ ಜೈಲು ಸೇರಿದ್ದ. ಜಾಮೀನು ಪಡೆದು ಜೈಲಿನಿಂದ ಹೊರಬಂದು ಆತ, ರಸ್ತೆ ಬದಿ ಬಟ್ಟೆವ್ಯಾಪಾರ ಶುರು ಮಾಡಿದ್ದ. ಇತ್ತ ಪೀಣ್ಯ ಸಮೀಪ ಗಾರ್ಮೆಂಟ್ಸ್‌ನಲ್ಲಿ ನಜ್ಮಾ ದುಡಿಯುತ್ತಿದ್ದಳು. ಸುಲಭವಾಗಿ ಹಣ ಸಂಪಾದನೆಗೆ ದಂಪತಿ ಕಳ್ಳ ಹಾದಿ ತುಳಿದಿದೆ.

ಕೆಲ ತಿಂಗಳ ಹಿಂದೆ ಅಶೋಕ್‌ನಗರ ಸಮೀಪ ಸಿಗ್ನಲ್‌ವೊಂದರ ಬ್ಯಾಟರಿ ಕದ್ದ ದಂಪತಿ, ಬಳಿಕ ಅದನ್ನು ಗುಜರಿ ವ್ಯಾಪಾರಿ ಧನಶೇಖರ್‌ಗೆ ಮಾರಿದ್ದರು. ಆಗ ಆತ, ಇದೇ ಮಾದರಿಯ ಬ್ಯಾಟರಿ ಇದ್ದರೆ ತಂದರೆ ತಲಾ ಒಂದಕ್ಕೆ 1500 ರು. ಕೊಡುವುದಾಗಿ ಹೇಳಿದ್ದ. ಈ ಮಾತಿನಿಂದ ಉತ್ತೇಜಿತರಾದ ದಂಪತಿ, ರಾತ್ರಿ ವೇಳೆ ಬ್ಯಾಟರಿ ಶಿಕಾರಿ ಶುರು ಮಾಡಿದ್ದರು. ಇತ್ತ ಆ ಬ್ಯಾಟರಿಗಳನ್ನು ತಲಾ ಒಂದಕ್ಕೆ 4-5 ಸಾವಿರಕ್ಕೆ ತನ್ನ ಪರಿಚಿತ ಕೈಗಾರಿಕೆಗೆ ಧನಶೇಖರ್‌ ವಿಕ್ರಯಿಸುತ್ತಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Latest Videos
Follow Us:
Download App:
  • android
  • ios