ಕೋಲ್ಕತಾ(ಡಿ.23): ದೇಶದ ಉದ್ದಗಲಕ್ಕೂ ಮತಾಂತರ, ಲವ್ ಜಿಹಾದ್ ಭಾರಿ ಸದ್ದು ಮಾಡುತ್ತಿದೆ. ಈ ಕುರಿತು ಹಲವು ಪ್ರಕರಣಗಳು ದಾಖಲಾಗಿದೆ. ಇದೀಗ ಕೋಲ್ಕತಾ ಹೈಕೋರ್ಟ್ ಮದುವೆ ಹಾಗೂ ಮತಾಂತರ ಕುರಿತು ಮಹತ್ವದ ತೀರ್ಪು ಪ್ರಕಟಿಸಿದೆ.  ವಯಸ್ಕ ಹೆಣ್ಣು ತನ್ನ ಇಚ್ಚೆಯಂತೆ ಮದುವೆ ಹಾಗೂ ಬಳಿಕ ಮತಾಂತರವಾದರೆ ಅದರ ಮಧ್ಯೆ ಕೋರ್ಟ್ ಪ್ರವೇಶಿಸುವುದಿಲ್ಲ ಎಂದು ಕೋಲ್ಕತಾ ಹೈಕೋರ್ಟ್ ಹೇಳಿದೆ.

ಪೋಷಕರ ಒಪ್ಪಿಗೆ ಮೇರೆಗೆ ನಡೆಯುತ್ತಿದ್ದ ಹಿಂದೂ-ಮುಸ್ಲಿಂ ಮದುವೆ ನಿಲ್ಲಿಸಿದ ಪೊಲೀಸ್!.

ಕೋಲ್ಕತಾದಲ್ಲಿ 19 ವರ್ಷದ ಯುವತಿ ಅನ್ಯ ಧರ್ಮದ ಪುರಷನನ್ನು ಮದುವೆಯಾಗಿದ್ದಾಳೆ. ಪೋಷಕರ ವಿರೋಧದ ನಡುವೆ ಮನೆ ಬಿಟ್ಟು ಹೋದ ಯುವತಿ ಮದುವೆಯಾಗಿದ್ದಾಳೆ. ಬಳಿಕ ಅನ್ಯ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ. ಹೀಗಾಗಿ ಯುವತಿ ತಂದೆ ಕೋರ್ಟ್ ಮೆಟ್ಟಿಲೇರಿದ್ದರು. ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ತನ್ನ ಮಗಳ ಮೇಲೆ ಒತ್ತಡ ಹಾಕಿ ಹೇಳಿಕೆ ನೀಡಲಾಗಿದೆ ಎಂದು ದೂರಿದ್ದರು.

ತಂದೆಯ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಇದೀಗ ತೀರ್ಪು ನೀಡಿದೆ. ವಯಸ್ಕ ಹೆಣ್ಣು  ತನ್ನಿಷ್ಟದಂತ ಮದುವೆಯಾಗುವುದು, ಮದುವೆಯಾದ ಬಳಿಕ ಅನ್ಯ ಧರ್ಮಕ್ಕೆ ಮತಾಂತರವಾಗುವುದು ಹಾಗೂ ಆಕೆ ಇಚ್ಚಿಸದ ಹಾಗೆ ಜೀವನ ನಡೆಸುವುದು ಆಕೆಯ ಸ್ವಾತಂತ್ರ್ಯವಾಗಿದೆ. ಇದರ ಮಧ್ಯೆ ಕೋರ್ಟ್ ಪ್ರವೇಶಿಸುವುದಿಲ್ಲ ಎಂದಿದೆ.