ಕುರಾನ್ ಓದಿದವರು ಎಲ್ಲಾ ಭಯೋತ್ಪಾದಕಾರಾಗಿದ್ದಾರೆ: ಹಿಂದೂ ಜಾಗರಣ ವೇದಿಕೆ ಮುಖಂಡನ ವಿವಾದಾತ್ಮಕ ಹೇಳಿಕೆ
* ಕುರಾನ್ ಓದಿದವರು ಎಲ್ಲಾ ಭಯೋತ್ಪಾದಕಾರಾಗಿದ್ದಾರೆ
* ಭಯೋತ್ಪಾದಕರೆಲ್ಲರು ಮುಸಲ್ಮಾನರು ಯಾಕೆ ಆಗಿದ್ದಾರೆ ಎಂದು ಪ್ರಶ್ನೆ
* ದಕ್ಷಿಣ ಪ್ರಾಂತೀಯ ಸಂಯೋಜಕ ಕೇಶವಮೂರ್ತಿ ರಿಂದ ವಿವಾದಾತ್ಮಕ ಹೇಳಿಕೆ
* ವಿವಾದಾತ್ಮಕ ಹೇಳಿಕೆ ಖಂಡಿಸಿ ಕೋಲಾರ ಎಸ್ಪಿ ಕಚೇರಿಗೆ ದೂರು
ಕೋಲಾರ(ಜು.02): ರಾಜಾಸ್ಥಾನದ ಉದಯ್ ಪುರ್ನಲ್ಲಿ ಕನ್ನಯ್ಯ ಲಾಲ್ ಹತ್ಯೆಗೆ ಖಂಡಿಸಿ ಪ್ರತಿಭಟನೆ,ಕೋಲಾರದಲ್ಲಿ ಹಿಂದೂ ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕರು ಆಗಿರುವ ಕೇಶವಮೂರ್ತಿ ಅವರ ಭಾಷಣದ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡ್ತಿದ್ದು,ಮುಸ್ಲಿಂ ಸಮುದಾಯದ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ನಿರ್ಧಾರ ಮಾಡಿದ್ದು, ಕೇವಶ ಮೂರ್ತಿ ವಿರುದ್ಧ ಕ್ರಮ ವಹಿಸಬೇಕು ಎಂದು ಒತ್ತಾಯ ಮಾಡಲಿದ್ದಾರೆ.
ಇದು ಸರ್ಕಾರಿ ಪ್ರಾಯೋಜಿತ ಹಲ್ಲೆ, ನಾಳೆ ರಾಜ್ಯಾದ್ಯಂತ ರೈತರ ಪ್ರತಿಭಟನೆ; ರಾಕೇಶ್ ಟಿಕಾಯತ್
ಮುಸ್ಲಿಂ ಜಿಹಾದಿ ಮುಸ್ಲಿಂ ಖುರಾನ್ ಯಾರು ಓದುತ್ತಾನೆ ಅವನು ಈ ದೇಶಕ್ಕೆ ಹಾಗೂ ಧರ್ಮಕ್ಕೆ ಅಪಾಯನೇ.ಖುರಾನ್ ಅದೊಂದು ಕ್ರಿಮಿನಲ್ ಪುಸ್ತಕ ಯಾರೂ ಅಲ್ಲಾ ನನ್ನು ನಂಬಲ್ಲ ಅವರಿಗೆ ಕಲ್ಲೊಡೆದು ಸಾಯಿಸು, ಕೊಲೆ ಮಾಡು ಎಂದು ಖುರಾನ್ ಹೇಳುತ್ತದೆ.ಖುರಾನ್ ಯಾರು ಓದುತ್ತಾರೆ ಅವರೆಲ್ಲಾ ಬಯೋತ್ಪಾದಕರಾಗಿದ್ದಾರೆ, ಮುಸಲ್ಮಾನರೆಲ್ಲಾ ಭಯೋತ್ಪಾದಕರಲ್ಲ ಆದರೆ ಭಯೋತ್ಪಾದಕರೆಲ್ಲಾ ಮುಸಲ್ಮಾನರೇ.ಮನೆ ಕಳ್ಳತನ ಮಾಡೋರು, ದರೋಡೆ ಮಾಡೋರು, ಪೊಲೀಸ್ ಸ್ಟೇಷನ್ಗೆ ಬೆಂಕಿ ಹಾಕೋರು, ಶಾಸಕರ ಮನೆಗೆ ಬೆಂಕಿ ಹಾಕ್ದೋರು ಎಲ್ಲರೂ ಮುಸಲ್ಮಾನರೇ.ನೀವು ನಿಜವಾದ ದೇಶಭಕ್ತರಾಗಿದ್ದರೆ ಮುಸಲ್ಮಾನರೇ ಭಯೋತ್ಪಾದಕರನ್ನು ಹಿಡಿದು ಕೊಡಿ, ಈವರೆಗೂ ಯಾವೊಬ್ಬ ಮುಸಲ್ಮಾನನೂ ಹಿಡಿದುಕೊಡಲ್ಲ ಹೀಗಿರುವಾಗ ನಾವು ಹೇಗೆ ಮುಸಲ್ಮಾನರೇ ಬೇರೆ ಭಯೋತ್ಪಾದಕರೇ ಬೇರೆ ಎಂದು ಹೇಗೆ ನಂಬೋದು.ಒಬ್ಬ ಮುಸಲ್ಮಾನ ಸತ್ತರೆ ಪ್ರಶಸ್ತಿಗಳನ್ನು ವಾಪಸ್ ಕೊಡ್ತಾರೆ, ಕನ್ನಯ್ಯಲಾಲ್ ಸತ್ತಿದ್ದಕ್ಕೆ ಯಾರು ಪ್ರಶಸ್ತಿ ವಾಪಸ್ ಕೊಟ್ಟಿದ್ದಾರೆ ಎಲ್ಲಾ ಗಂಜಿ ಗಿರಾಕಿಗಳು.75 ಜನ ಬುದ್ದಿ ಜೀವಿಗಳು ಸಿಎಂ ಬೊಮ್ಮಾಯಿ ಅವರಿಗೆ ರಾಜ್ಯದಲ್ಲಿ ಕೋಮು ಸೌಹಾರ್ದತೆ ಕೆಡುತ್ತಿದೆ ಎಂದು ಮನವಿ ಕೊಟ್ಟಿದ್ದಾರೆ.
ಉಡುಪಿ: ಕೊರೋನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಿದ ಹಿಂದೂ ಜಾಗರಣ ವೇದಿಕೆ ತಂಡ
ಬುದ್ದಿ ಜೀವಿಗಳನ್ನು ಅಯ್ಯೋಗ್ಯರು ಎಂದ ಕೇಶವಮೂರ್ತಿ, ಎಲ್ಲಿ ಹೋಗಿದ್ದೀರಿ ನೀವೆಲ್ಲಾ ಈ ಘಟನೆಯನ್ನು ಖಂಡಿಸಿದ್ದೀರಾ, ನಿಮ್ಮದು ನಾಲಿಗೆನೋ ಎಕ್ಕಡನೋ, ನಿಮ್ಮ ನಾಲಿಗೆಗೆ ಲಕ್ವಾ ಹೊಡೆದಿದೆಯೇ ಎಂದು ಬುದ್ದಿಜೀವಿಗಳ ಮೇಲೆ ಹರಿಹಾಯ್ದಯ್ದಿದ್ದಾರೆ.ಇನ್ನು ಯಾವಾಗಲೂ ನಾನು ಹಿಂದೂ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಹಾಗೂ ಬ್ರದರ್ಸ್ ಎನ್ನುವ ಹೆಬ್ಬಂಡೆ ಡಿಕೆ ಶಿವಕುಮಾರ್ ಯಾವುದೇ ಹೇಳಿಕೆ ಕೊಟ್ಟಿಲ್ಲ. ನೂಪುರ್ ಶರ್ಮಾ ಹೇಳಿದ್ದು ತಪ್ಪೇನಿಲ್ಲ ಮೊಹಮದ್ ಪೈಗಂಬರ್ 9 ವರ್ಷದ ಬಾಲಕಿಯನ್ನು ಮದುವೆಯಾದ ಎಂದು ಹೇಳಿದ್ದರು, ಇದು ಸತ್ಯ ಖುರಾನ್ನಲ್ಲಿ ಇದೆ ಪೈಗಂಬರ್ ಜೀವನ ಚರಿತ್ರೆ ಓದಿ ತಿಳಿಯುತ್ತದೆ ಎಂದು ಕೋಲಾರ ನಗರದ ಬಂಗಾರಪೇಟೆ ವೃತ್ತದಲ್ಲಿ ಆಯೋಜನೆ ಮಾಡಿದ್ದ ಪ್ರತಿಭಟನೆಯಲ್ಲಿ ಹರಿಹಾಯ್ದಿದ್ದಾರೆ.