4000 ಸಂತರು, 2500 ಸಾಧಕರು, ಪರಮವೀರ ಪ್ರಶಸ್ತಿ ಪುರಸ್ಕೃತರಿಗೆ ಅಯೋಧ್ಯೆ ರಾಮ ಜನ್ಮಭೂಮಿ ಪ್ರಾಣ ಪ್ರತಿಷ್ಠಾಪನೆಗೆ ಆಹ್ವಾನ!

Consecration of Ayodhya Ram temple: ರಾಮಮಂದಿರದ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಜನವರಿ 22 ರಂದು ಮಧ್ಯಾಹ್ನ 12 ರಿಂದ 12.45 ರವರೆಗೆ ನಡೆಯಲಿದೆ, ಇದನ್ನು ವಾರಣಾಸಿಯ ಸಂತ ಲಕ್ಷ್ಮೀಕಾಂತ್ ಅವರು ಕಾರ್ಯಕ್ರಮವನ್ನು ಆರಂಭಿಸಲಿದ್ದಾರೆ. ರಾಮಭಕ್ತರು ಮರುದಿನವೇ ರಾಮ್‌ಲಲ್ಲಾನ ದರ್ಶನ ಪಡೆಯಬಹುದಾಗಿದೆ. ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಈ ಮಾಹಿತಿ ನೀಡಿದ್ದಾರೆ. 

know who got invitation for ayodhya Ram Mandir Pran Pratishtha 4000 saints 2500 scientists Paramveer Chakra winners san

ನವದೆಹಲಿ (ಅ.30): ಅಯೋಧ್ಯೆಯಲ್ಲಿ ಸಕಲ ಹಿಂದುಗಳ ಅಸ್ಮಿತೆಯಂತಿರುವ ಶ್ರೀರಾಮ ಮಂದಿರದ ರಾಮ ಲಲ್ಲಾ ವಿಗ್ರಹದ ಪ್ರಾಣ ಪತ್ರಿಷ್ಠೆಗೆ ದಿನಾಂಕ ನಿಗದಿಯಾಗಿದೆ. ಈ ನಡುವೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ದೇವಾಲಯಕ್ಕೆ ಪೂಜೆಯಿಂದ ಆಮಂತ್ರಣದವರೆಗಿನ ಎಲ್ಲಾ ಮಾಹಿತಿಯನ್ನು ಹಂಚಿಕೊಂಡಿದೆ. ಜನವರಿ 22 ರಂದು ಮಧ್ಯಾಹ್ನ 12 ರಿಂದ 12.45 ರವರೆಗೆ ವಾರಣಾಸಿಯ ಸಂತ ಲಕ್ಷ್ಮೀಕಾಂತ್ ಅವರಿಂದ ಪ್ರಾಣ ಪ್ರತಿಷ್ಠೆ ವಿಧಿ ವಿಧಾನಗಳು ನಡೆಯಲಿದೆ ಎಂದು ದೇವಸ್ಥಾನದ ಕಡೆಯಿಂದ ಮಾಹಿತಿ ಬಂದಿದೆ. ಶ್ರೀರಾಮ ಭಕ್ತರು ಮರುದಿನವೇ ರಾಮಲಲ್ಲಾನ ದರ್ಶನ ಪಡೆಯಬಹುದಾಗಿದೆ. ಜನವರಿ 16ರಿಂದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಆರಂಭವಾಗಲಿದೆ ಎಂದೂ ಮಾಹಿತಿ ನೀಡಲಾಗಿದೆ.

ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಆಹ್ವಾನವನ್ನು ಸ್ವೀಕರಿಸಿದ್ದಾರೆ. ರಾಮಮಂದಿರ ಟ್ರಸ್ಟ್ ವತಿಯಿಂದ ನಾಲ್ಕು ನಿಯೋಗಗಳ ತಂಡವೊಂದು  ಪ್ರಧಾನಿಯನ್ನು ಭೇಟಿಯಾಗಿ ರಾಮ ಮಂದಿರದ ಆಹ್ವಾನವನ್ನು ನೀಡಿತ್ತು. ಇದೇ ವೇಳೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರೊಂದಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಜ್ಯಪಾಲರು ಪ್ರೋಟೋಕಾಲ್ ಶಿಷ್ಟಾಚಾರದಂತೆ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಪ್ರಾಣ ಪ್ರತಿಷ್ಠೆಯಲ್ಲಿ ದೇಶದ ಎಲ್ಲಾ ಪೂಜಾ ವಿಧಾನಗಳ 4 ಸಾವಿರ ಸಂತರು ಭಾಗವಹಿಸಲಿದ್ದಾರೆ ಎಂದು ಚಂಪತ್ ರೈ ತಿಳಿಸಿದ್ದಾರೆ. ಸಂತ ಸಮುದಾಯದ ಹೊರತಾಗಿ, ವಿಜ್ಞಾನಿಗಳು, ಕಲಾವಿದರು, ಪರಮವೀರ ಚಕ್ರ ಪುರಸ್ಕೃತರ ಕುಟುಂಬಗಳು, ಹುತಾತ್ಮ ಕರ ಸೇವಕರ ಕುಟುಂಬಗಳು ಸೇರಿದಂತೆ ವಿವಿಧ ಕ್ಷೇತ್ರಗಳ 2,500 ಜನರನ್ನು ಆಹ್ವಾನಿಸಲಾಗುತ್ತದೆ. ರಾಮಜನ್ಮಭೂಮಿ ಸಂಕೀರ್ಣದ ಒಳಗೆ ಕುಳಿತುಕೊಳ್ಳಲು ಮಿತಿ ಇದೆ ಎಂದು ಹೇಳಲಾಗಿದೆ. ಪ್ರಾಣ ಪ್ರತಿಷ್ಠಾಪನೆಗೆ ಆಹ್ವಾನಿತ ಅತಿಥಿಗಳು ಕಡ್ಡಾಯವಾಗಿ ಆಧಾರ್ ಕಾರ್ಡ್ ತರಬೇಕು ಎಂದು ಸೂಚನೆ ನೀಡಲಾಗಿದೆ.

ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಪ್ರಧಾನಿಯೇ ಮೊದಲು ಪೂಜೆ ಸಲ್ಲಿಸಲಿದ್ದಾರೆ. ಇದಾದ ನಂತರವಷ್ಟೇ ಆಹ್ವಾನಿತ ಅತಿಥಿಗಳು ರಾಮ ಲಲ್ಲಾನ ದರ್ಶನ ಪಡೆಯಲು ಸಾಧ್ಯವಾಗುತ್ತದೆ. ಪೂಜೆಯ ವೇಳೆ ರಾಮಜನ್ಮಭೂಮಿ ಸಂಕೀರ್ಣದ ವೇಳೆ 3 ಗಂಟೆಗೂ ಹೆಚ್ಚು ಕಾಲ ಕುಳಿತುಕೊಳ್ಳಬೇಕು. ಇದರಿಂದಾಗಿ ಪ್ರಾಣ ಪ್ರತಿಷ್ಠಾಪನೆಯ  ನಂತರವೇ ವಯೋವೃದ್ಧರು ಮತ್ತು ಅನಾರೋಗ್ಯಕ್ಕೆ ಒಳಗಾದ ಗಣ್ಯರು ದರ್ಶನಕ್ಕೆ ಬರುವಂತೆ ಟ್ರಸ್ಟ್ ಮನವಿ ಮಾಡಿದೆ.

 

Breaking: ಜನವರಿ 22ಕ್ಕೆ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ, ಆಹ್ವಾನ ಸ್ವೀಕರಿಸಿದ ಮೋದಿ

ರಾಮಮಂದಿರ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದವರ ಕುಟುಂಬದ ಸದಸ್ಯರನ್ನೂ ಶಂಕುಸ್ಥಾಪನೆಗೆ ಆಹ್ವಾನಿಸಲಾಗುವುದು ಎಂದು ಟ್ರಸ್ಟ್ ತಿಳಿಸಿದೆ. ಇದಲ್ಲದೆ, 100 ಕ್ಕೂ ಹೆಚ್ಚು ಮುದ್ರಣ ಮಾಧ್ಯಮ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಮಾಲೀಕರನ್ನೂ ಆಹ್ವಾನಿಸಲಾಗುತ್ತದೆ.

ಆಯೋಧ್ಯೆ ಭವ್ಯ ರಾಮ ಮಂದಿರದೊಳಗೆ ಏನೇನಿದೆ? ಫೋಟೋ ಹಂಚಿಕೊಂಡ ಜನ್ಮಭೂಮಿ ಟ್ರಸ್ಟ್!

Latest Videos
Follow Us:
Download App:
  • android
  • ios