Breaking: ಜನವರಿ 22ಕ್ಕೆ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ, ಆಹ್ವಾನ ಸ್ವೀಕರಿಸಿದ ಮೋದಿ

ಏಷ್ಯಾನೆಟ್‌ ನ್ಯೂಸ್‌ ಎಕ್ಸ್‌ಕ್ಲೂಸಿವ್‌ ವರದಿ ಮಾಡಿದಂತೆ, ಅಯೋಧ್ಯೆಯ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಜನವರಿ 22 ರಂದು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಬುಧವಾರ ಇದರ ಆನ್ವಾಹವನ್ನು ಸ್ವೀಕರಿಸಿದ್ದಾರೆ.

PM Narendra Modi accepted the invitation Consecration of ayodhya Ram temple on 22 January 2024 san

ನವದೆಹಲಿ (ಅ.25): ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಜನವರಿ 22 ಕ್ಕೆ ನಡೆಯಲಿದೆ. ಈ ಬಗ್ಗೆ ಏಷ್ಯಾನೆಟ್‌ ನ್ಯೂಸ್‌ ಆಗಸ್ಟ್‌ನಲ್ಲಿ ಎಕ್ಸ್‌ಕ್ಲೂಸಿವ್‌ ಮಾಹಿತಿಯನ್ನು ನೀಡಿತ್ತು. ಬುಧವಾರ ಅಯೋಧ್ಯೆ ಶ್ರೀರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್‌ ನೀಡಿದ ಆಹ್ವಾನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವೀಕರಿಸಿದ್ದು 2024ರ ಜನವರಿ 22 ರಂದು ಮಂದಿರದ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ.

 ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಇರಲಿದ್ದಾರೆ.  ಅಯೋಧ್ಯೆಯಲ್ಲಿ ಶ್ರೀರಾಮನ ದೇಗುಲದ ಪ್ರತಿಷ್ಠಾಪನೆಯ ಸಮಯ ಸಮೀಪಿಸಿದೆ. ಮಾಹಿತಿ ಪ್ರಕಾರ, ರಾಮ ಜನ್ಮಭೂಮಿ ತೀರ್ಥ ಪ್ರದೇಶದ ನಿಯೋಗವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬುಧವಾರ ಭೇಟಿ ಮಾಡಿದೆ. ಈ ನಿಯೋಗದಲ್ಲಿ ಕರ್ನಾಟಕದ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸ್ವಾಮಿ ಗೋವಿಂದದೇವ ಗಿರಿ ಮತ್ತು ನೃಪೇಂದ್ರ ಮಿಶ್ರಾ ಇದ್ದರು. ನಿಯೋಗ ಮತ್ತೊಮ್ಮೆ ಪ್ರಧಾನಿ ಮೋದಿಯವರನ್ನು ಅಯೋಧ್ಯೆಗೆ ಆಹ್ವಾನಿಸಿದ್ದು, ಅದನ್ನು ಪ್ರಧಾನಿ ಮೋದಿ ಸಂತೋಷದಿಂದ ಸ್ವೀಕರಿಸಿದ್ದಾರೆ. ನಿಗದಿತ ವೇಳಾಪಟ್ಟಿಯ ಪ್ರಕಾರ, 22 ಜನವರಿ 2024 ರಂದು ಅಯೋಧ್ಯೆಯ ಭಗವಾನ್ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

Big Breaking: ಜನವರಿ 22ಕ್ಕೆ ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ!

ಜನವರಿಯಲ್ಲಿ ನಡೆಯಲಿರುವ ಪ್ರಾಣ ಪ್ರತಿಷ್ಠೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ ಎಂದು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರ ಟ್ರಸ್ಟ್‌ನ ಚಂಪಕ್ ರೈ ಹೇಳಿದ್ದಾರೆ. ಇವರಲ್ಲದೆ ನಾಡಿನ ಪ್ರಮುಖ ಋಷಿಮುನಿಗಳು, ಸಂತರು ಹಾಗೂ ಇತರ ಗಣ್ಯರನ್ನು ಆಹ್ವಾನಿಸಲಾಗುವುದು. ಮುಖ್ಯ ಕಾರ್ಯಕ್ರಮವನ್ನು ರಾಜಕೀಯ ರಹಿತವಾಗಿಡಲು ಪ್ರಯತ್ನಿಸಲಾಗುವುದು ಎಂದು ಚಂಪಕ್ ರೈ ಹೇಳಿದರು. ವಿವಿಧ ರಾಜಕೀಯ ಪಕ್ಷಗಳ ಅತಿಥಿಗಳನ್ನೂ ಆಹ್ವಾನಿಸಲಾಗುವುದು. ಕಾರ್ಯಕ್ರಮದಲ್ಲಿ ವೇದಿಕೆ ಇರುವುದಿಲ್ಲ, ಸಾರ್ವಜನಿಕ ಸಭೆಯೂ ಇರುವುದಿಲ್ಲ. ಸಮಾರಂಭಕ್ಕೆ 136 ಸನಾತನ ಸಂಪ್ರದಾಯಗಳ 25,000 ಕ್ಕೂ ಹೆಚ್ಚು ಹಿಂದೂ ಧಾರ್ಮಿಕ ಮುಖಂಡರನ್ನು ಆಹ್ವಾನಿಸಲು ಟ್ರಸ್ಟ್ ಯೋಜಿಸಿದೆ.

Ayodhya Temple: ಪುರಾತತ್ವ ಇಲಾಖೆಯ ಉತ್ಖನನದಲ್ಲಿ ಸಿಕ್ಕ ರಾಮ ಮೂರ್ತಿಗಳ ಪ್ರದರ್ಶನಕ್ಕೆ ಬೃಹತ್‌ ಮ್ಯೂಸಿಯಂ!

ಜೈ ಸಿಯಾ ರಾಮ್! ಇಂದು ಭಾವನೆಗಳಿಂದ ತುಂಬಿರುವ ದಿನ. ಇತ್ತೀಚೆಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧಿಕಾರಿಗಳು ನನ್ನನ್ನು ಭೇಟಿಯಾಗಲು ನನ್ನ ನಿವಾಸಕ್ಕೆ ಬಂದಿದ್ದರು. ಶ್ರೀರಾಮ ಮಂದಿರದ ಶಂಕುಸ್ಥಾಪನೆಯ ಸಂದರ್ಭದಲ್ಲಿ ಅಯೋಧ್ಯೆಗೆ ಬರುವಂತೆ ಅವರು ನನ್ನನ್ನು ಆಹ್ವಾನಿಸಿದ್ದಾರೆ. ನಾನು ತುಂಬಾ ಆಶೀರ್ವಾದ ಪಡೆದಿದ್ದೇನೆ. ನನ್ನ ಜೀವಿತಾವಧಿಯಲ್ಲಿ ಈ ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗುವುದು ನನ್ನ ಅದೃಷ್ಟ ಎಂದು ಪ್ರಧಾನಿ ಮೋದಿ ಟ್ರಸ್ಟ್‌ ಅಧಿಕಾರಿಗಳ ಜೊತೆಗಿ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಜನವರಿ 14-24 ರ ನಡುವೆ ಪ್ರಾಣ ಪ್ರತಿಷ್ಠೆ ನಡೆಯಲಿದೆ ಎಂದು ಆಗಸ್ಟ್‌ನಲ್ಲಿಯೇ ಏಷ್ಯಾನೆಟ್‌ ನ್ಯೂಸ್‌ ವರದಿ ಮಾಡಿದೆ. ಗ್ರೂಪ್‌ನ ವ್ಯವಸ್ಥಾಪಕ ಚೇರ್ಮನ್‌ ರಾಜೇಶ್‌ ಕಾಲ್ರಾ ಜೊತೆಗಿನ ಸಂದರ್ಶನದಲ್ಲಿ ರಾಮ ಜನ್ಮಭೂಮಿ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಈ ಮಾಹಿತಿ ನೀಡಿದ್ದರು.


 

Latest Videos
Follow Us:
Download App:
  • android
  • ios