ಐಒಸಿ ಕಾರ್ಪೋರೇಶನ್ ಅಧಿಕಾರಿ ರಾಜ್ಯದ ಮಂಜುನಾಥ್ ಹಂತಕ ಜೈಲಿಂದ ಬಿಡುಗಡೆ
ಇಂಡಿಯನ್ ಆಯಿಲ್ (ಐಒಸಿ) ಕಾರ್ಪೋರೇಶನ್ ಅಧಿಕಾರಿ, ಕರ್ನಾಟಕ ಮೂಲದ ಕೋಲಾರ ಮಂಜುನಾಥ್ ಷಣ್ಮುಗಂರನ್ನು 2005ರಲ್ಲಿ ಗುಂಡಿಕ್ಕಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಓರ್ವ ದೋಷಿಯನ್ನು ಶನಿವಾರ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ.

ಲಖೀಂಪುರ ಖೇರಿ (ಉ.ಪ್ರ.): ಇಂಡಿಯನ್ ಆಯಿಲ್ (ಐಒಸಿ) ಕಾರ್ಪೋರೇಶನ್ ಅಧಿಕಾರಿ, ಕರ್ನಾಟಕ ಮೂಲದ ಕೋಲಾರ ಮಂಜುನಾಥ್ ಷಣ್ಮುಗಂರನ್ನು 2005ರಲ್ಲಿ ಗುಂಡಿಕ್ಕಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಓರ್ವ ದೋಷಿಯನ್ನು ಶನಿವಾರ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ.
ಲಖೀಂಪುರ ಖೇರಿಯಲ್ಲಿ(Lakhimpur Kheri) 27 ವರ್ಷ ಪ್ರಾಯದ ಮಂಜುನಾಥ್ (Manjunath) ಅವರು ತೈಲ ಕಲಬೆರಕೆ ಅಕ್ರಮದ ಕುರಿತಾಗಿ ಮಾಹಿತಿ ಪಡೆದು, ಪೆಟ್ರೋಲ್ ಬಂಕ್ ಪರವಾನಗಿಯನ್ನು ರದ್ದು ಮಾಡಿಸುವುದಾಗಿ ಬೆದರಿಕೆ ಹಾಕಿದ್ದರು. ಹೀಗಾಗಿ ಇಂಧನ ಕಲಬೆರಿಕೆ ಮಾಫಿಯಾ 2005ರ ನ.19ರಂದು ಮಂಜುನಾಥ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಿತ್ತು. ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಶಿವಕೇಶ್ ಗಿರಿ ಅಲಿಯಾಸ್ ಲಲ್ಲಾ (Sivakesh Giri alias Lalla) ಎಂಬ ವ್ಯಕ್ತಿಯನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ. ಗಿರಿ 16 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದಾನೆ.
ಈ ಪ್ರಕರಣದಲ್ಲಿ ಗಿರಿ ಸೇರಿದಂತೆ 6 ಮಂದಿ ಆರೋಪಿಗಳಿಗೆ ಲಖೀಂಪುರ ಖೇರಿ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ದೋಷಿಗಳು ಸುಪ್ರೀಂ ಕೋರ್ಟ್‌ವರೆಗೂ ತಲುಪಿದ್ದರೂ ಸುಪ್ರೀಂ ಸಹ ತೀರ್ಪನ್ನು ಎತ್ತಿಹಿಡಿದಿತ್ತು.
ಎಂಥಾ ಹೇಳಿಕೆ ಕೊಟ್ರಿ ಶಾಸಕರೆ... ಗ್ರಾಮ ಲೆಕ್ಕಾಧಿಕಾರಿ ಕೊಲೆ ನಿಮಗೆ ಏನೂ ಅಲ್ವೆ?