ಎಂಥಾ ಹೇಳಿಕೆ ಕೊಟ್ರಿ ಶಾಸಕರೆ... ಗ್ರಾಮ ಲೆಕ್ಕಾಧಿಕಾರಿ ಕೊಲೆ ನಿಮಗೆ ಏನೂ ಅಲ್ವೆ?
ಮರಳು ಮಾಫಿಯಾ ರಾಯಚೂರು ಜಿಲ್ಲೆಯಲ್ಲಿ ಅಧಿಕಾರಿಯ ಜೀವವನ್ನು ಬಲಿಪಡೆದಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು. ಲಾರಿ ಹರಿಸಿ ಸಾಹೇಬ್ ಪಟೇಲ್ ಎಂಬ ಗ್ರಾಮ ಲೆಕ್ಕಾಧಿಕಾರಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿದರು. ಆದರೆ ಈ ದುಷ್ಕೃತ್ಯದ ಹಿಂದೆ ಅಸಲಿಗೆ ಯಾರಿದ್ದಾರೆ ಎಂಬ ಸತ್ಯವೂ ಈಗ ಬಯಲಾಗಿದೆ.
ರಾಯಚೂರು[ಡಿ.25] ಮರಳು ದಂಧೆಕೋರರಿಗೆ ಕಾಂಗ್ರೆಸ್ ಶಾಸಕರೊಬ್ಬರು ಬೆಂಬಲವಾಗಿ ನಿಂತಿದ್ದಾರೆಯೇ? ಎಂಬ ಪ್ರಶ್ನೆ ಮೂಡಿದೆ. ಕೊಲೆ ಪ್ರಕರಣ ದಾಖಲಾಗಿದ್ದರೂ ಕೊಲೆಯಲ್ಲ. ಇದನ್ನು ಉದ್ದೇಶಪೂರ್ವಕವಾಗಿ ಕೊಲೆ ಅಂತ ಬಿಂಬಿಸಲಾಗುತ್ತಿದೆ ಅಂಥ ಕಾಂಗ್ರೆಸ್ ಶಾಸಕರೊಬ್ಬರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.
ಪ್ರಕರಣದ ದಿಕ್ಕು ತಪ್ಪಿಸುವ ಹೇಳಿಕೆಯನ್ನು ಲಿಂಗಸುಗೂರು ಶಾಸಕ ಡಿ.ಎಸ್. ಹೂಲಗೇರಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಗ್ರಾಮ ಲೆಕ್ಕಾಧಿಕಾರಿ ಸಾಹೇಬ್ ಪಟೇಲ್ ಅವರದ್ದು ಅಸಹಜ ಸಾವು ಅನ್ನೊ ಮಾಹಿತಿಯಿದೆ. ಮರಳು ಲಾರಿ ತಡೆಯಲು ಹೋದಾಗ ಲಾರಿ ಮುಂದಕ್ಕೆ ಹೋಗಿದೆ. ಕಾಲು ಜಾರಿ ಹಿಂದಿನ ಗಾಲಿಗೆ ಸಿಕ್ಕಿ ಅಧಿಕಾರಿ ಸಾವನ್ನಪ್ಪಿದ್ದಾರೆ ಎಂಬ ಮಾತನ್ನು ಶಾಸಕರು ಆಡಿದ್ದಾರೆ.
ಅಧಿಕಾರಿ ಹತ್ಯೆ: ಸ್ಯಾಂಡ್ ಮಾಫಿಯಾ ಲಾರಿ ಚಾಲಕ ಅರೆಸ್ಟ್
ಮಾನ್ವಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು ಮೂವರು ಆರೋಪಿಗನ್ನು ಬಂಧಿಸಲಾಗಿದೆ. ಅಕ್ರಮ ಮರಳುಗಾರಿಕೆ ಹಿಂದ ಕಾಂಗ್ರೆಸ್ ಮುಖಂಡರೊಬ್ಬರಿದ್ದಾರೆ ಎಂಬ ಮಾತು ಜೋರಾಗಿ ಕೇಳಿ ಬಂದಿದೆ. ಅಲ್ದಾಳ್ ವೀರಭದ್ರಪ್ಪ ಈ ಎಲ್ಲ ಅಕ್ರಮಗಳ ಕಿಂಗ್‌ಪಿನ್ ಎಂದು ಹೇಳಲಾಗಿದೆ.