ಖಾನ್ ಸರ್ ಮದುವೆ ಆರತಕ್ಷತೆಯಲ್ಲಿ ಅವರ ಪತ್ನಿ ಮುಸುಕು ಧರಿಸಿದ್ದರು, ಇದರಿಂದ ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿತು. ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಹುಡುಗಿಯರೊಂದಿಗೆ ಅವರ ಫೋಟೋಗಳು ವೈರಲ್ ಆಗುತ್ತಿವೆ. ಅವರೆಲ್ಲರನ್ನು ಖಾನ್ ಸರ್ ಪತ್ನಿ ಎಂದು ಹೇಳಲಾಗುತ್ತಿದೆ.

ಖಾನ್ ಸರ್ ಪತ್ನಿಯ ಫೋಟೋ ವೈರಲ್: ಬಿಹಾರದ ಪಾಟ್ನಾದ ಪ್ರಸಿದ್ಧ ಶಿಕ್ಷಕ ಖಾನ್ ಸರ್ ಅವರ ಮದುವೆಯ ನಂತರ ನಡೆದ ಆರತಕ್ಷತೆ ಸಮಾರಂಭದ ಬಗ್ಗೆ ಹೊಸ ವಿವಾದ ಉಂಟಾಗಿದೆ. ಮದುವೆಯ ನಂತರ ಖಾನ್ ಸರ್ ಜೂನ್ 2 ರಂದು ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಇದರಲ್ಲಿ ಅನೇಕ ಗಣ್ಯರು ಭಾಗವಹಿಸಿದ್ದರು. ಆದರೆ ಈ ಕಾರ್ಯಕ್ರಮದಲ್ಲಿ ಅವರ ವಧುವಿನ ಮುಖವನ್ನು ಮುಸುಕಿನಿಂದ ತೆಗೆಯಲಾಗಿಲ್ಲ. ಹೀಗಾಗಿ ಖಾನ್ ಅವರ ಅಭಿಮಾನಿಗಳಲ್ಲಿ ಅವರ ಪತ್ನಿಯನ್ನು ನೋಡುವ ಕುತೂಹಲ ಹಾಗೆಯೇ ಉಳಿಯಿತು. ಪರಿಣಾಮವಾಗಿ, ಖಾನ್ ಸರ್ ಅವರ ಅನೇಕ ಹುಡುಗಿಯರೊಂದಿಗಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯಾರಾರನ್ನೋ ಖಾನ್ ಸರು ಪತ್ನಿ ಎಂದು ಬಿಂಬಿಸಿ ಹೇಳುತ್ತಿರುವ ಫೋಟೋ ವೈರಲ್ ಆಗಲು ಪ್ರಾರಂಭಿಸಿದವು.

'ನಾನು ಗೊಂದಲದಲ್ಲಿದ್ದೇನೆ...'

ಈ ವೈರಲ್ ಫೋಟೋಗಳ ಬಗ್ಗೆ ಖಾನ್ ಸರ್ ಅವರನ್ನು ಕೇಳಿದಾಗ, ‘ನಾನು ಗೊಂದಲದಲ್ಲಿದ್ದೇನೆ, ಜನರು ಯಾವ ಹುಡುಗಿಯರೊಂದಿಗೆ ನನ್ನ ಫೋಟೋ ಹಾಕುತ್ತಿದ್ದಾರೆಂದು ಗೊತ್ತಿಲ್ಲ. ಯಾರದ್ದೋ ಫೋಟೋ ತಂದು ಅಂಟಿಸುವುದರ ಅರ್ಥವೇನು? ಯಾರೋ ಹುಡುಗಿಯ ಫೋಟೋ ಕಳುಹಿಸಿ ಇವರೇ ನಿಮ್ಮ ಹೆಂಡತಿಯಾ ಎಂದು ಕೇಳುತ್ತಿದ್ದಾರೆ. ಇದು ನಿಮ್ಮ ಹೆಂಡತಿಯೇ? ಎಂದು ಮತ್ತೊಬ್ಬರು ಬೇರೆ ಹುಡುಗಿಯ ಫೋಟೋ ಕಳುಹಿಸುತ್ತಿದ್ದಾರೆ’ ಎಂದು ತಮ್ಮ ನೋವು ಹೇಳಿಕೊಂಡರು.

ಗ್ರಾಮದ ಜನರ ಸಂಪ್ರದಾಯ:

ನಿಮ್ಮ ಹೆಂಡತಿ ಯಾರು, ಈ ಸಸ್ಪೆನ್ಸ್ ಯಾವಾಗ ಬಹಿರಂಗಗೊಳ್ಳುತ್ತದೆ ಎಂದು ಖಾನ್ ಸರ್ ಅವರನ್ನು ಕೇಳಲಾಯಿತು? ಇದಕ್ಕೆ ಅವರು, ‘ಸಸ್ಪೆನ್ಸ್ ವಿಷಯವಲ್ಲ, ನಾನು ಮದುವೆಯಾದಾಗ ಮೊದಲು ನನ್ನ ವಿದ್ಯಾರ್ಥಿಗಳಿಗೆ ಹೇಳಿದೆ. ಇದು ನಮ್ಮ ಗ್ರಾಮದ ಸಂಪ್ರದಾಯವಾಗಿದೆ. ಇದನ್ನು ಮೀರಲು ಸಾಧ್ಯವಾಗಲಿಲ್ಲ ಎಂದರು. ಇದನ್ನು ಮಕ್ಕಳಿಗೆ ಅರ್ಥವಾಗುವಂತೆ ’ಈಗಲೂ ಶಾಲಾ ಮಕ್ಕಳು ಉತ್ತಮ ಫಲಿತಾಂಶ ತಂದಾಗ ನಾವು ಒಟ್ಟಿಗೆ ಕುಳಿತು ಊಟ ಮಾಡುತ್ತೇವೆ. ನಮ್ಮ ಗ್ರಾಮದ ಸಂಪ್ರದಾಯವನ್ನು ಗ್ರಾಮದ ಜನರು ಅರ್ಥಮಾಡಿಕೊಳ್ಳುತ್ತಾರೆ. ಮತ್ತು ನಗರದ ಜನರು ನಗರದ ಸಂಪ್ರದಾಯವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಖಾನ್ ಸರ್ ತಿಳಿಸಿದರು.

ಖಾನ್ ಸರ್ ಅವರನ್ನು ಅವರ ಆರತಕ್ಷತೆಯ ವಿಶೇಷ ಸಂದರ್ಭದಲ್ಲಿ ಅಭಿನಂದಿಸಲು ಬಿಹಾರದ ಶಿಕ್ಷಣ ಸಚಿವ ಸುನಿಲ್ ಕುಮಾರ್, ಮಾಜಿ ಸಚಿವ ನಿತೀಶ್ ಮಿಶ್ರಾ, ಕೇಂದ್ರ ರಾಜ್ಯ ಸಚಿವ ರಾಜಭೂಷಣ್ ನಿಷಾದ್, ಬಿಹಾರದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಮಾಜಿ ಸಚಿವ ಮುಖೇಶ್ ಸಹಾನಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿದಂತೆ ಅನೇಕ ರಾಜಕೀಯ ಮತ್ತು ಸಾಮಾಜಿಕ ಗಣ್ಯರು ಉಪಸ್ಥಿತರಿದ್ದರು.