ಕುಂಭಮೇಳದ ಮೇಲೆ ದಾಳಿಗೆ ಖಲಿಸ್ತಾನಿ ಉಗ್ರ ಪನ್ನೂನ್ ಕರೆ
ಪ್ರಮುಖ ದಿನಗಳನ್ನು ಗುರಿಯಾಗಿಸಿ ಕಾಶ್ಮೀರಿಗಳು ಹಾಗೂ ಖಲಿಸ್ತಾನಿಗಳು ದಾಳಿ ಮಾಡಬೇಕು' ಎಂದು ಕರೆ ನೀಡಿದ್ದಾನೆ. ಅಲ್ಲದೆ ಲಖನೌ ಮತ್ತು ಪ್ರಯಾಗ್‌ರಾಜ್ ವಿಮಾನ ನಿಲ್ದಾಣಗಳಲ್ಲಿ ಖಲಿಸ್ತಾನಿ ಧ್ವಜಗಳನ್ನು ಹಾರಿಸಬೇಕು ಎಂದು ತನ್ನ ಹಿಂಬಾಲಕರಿಗೆ ಕರೆ ನೀಡಿದ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು
ಪ್ರಯಾಗ್‌ರಾಜ್(ಜ.07): ಇದೇ ಜ.13ರಿಂದ ಫೆ.26ರವರೆಗೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುವ ಮಹಾ ಕುಂಭಮೇಳಕ್ಕೆ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಮತ್ತೊಮ್ಮೆ ಬೆದರಿಕೆ ಹಾಕಿದ್ದು, 'ಮಹಾ ಕುಂಭಮೇಳವನ್ನು ರಣರಂಗವನ್ನಾಗಿ ಮಾಡುತ್ತೇನೆ 'ಎಂದು ವಿಡಿಯೋ ಹರಿ ಬಿಟ್ಟಿದ್ದಾನೆ.
ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಪನ್ನೂ, 'ಪ್ರಯಾಗ್‌ರಾಜ್ ಚಲೋ ನಡೆಸಬೇಕು. ಹಿಂದುತ್ವದ ಸಿದ್ದಾಂತವನ್ನು ಕೊಂದು ಹಾಕಿ 2025ರ ಮಹಾಕುಂಭ ಮೇಳವನ್ನು ರಣರಂಗವನ್ನಾಗಿ ಮಾಡುತ್ತೇನೆ' ಎಂದು ಆತ ಹೇಳಿದ್ದಾನೆ.
ಮತ್ತೊಂದು ವಿಡಿಯೋದಲ್ಲಿ, 'ಪ್ರಮುಖ ದಿನಗಳನ್ನು ಗುರಿಯಾಗಿಸಿ ಕಾಶ್ಮೀರಿಗಳು ಹಾಗೂ ಖಲಿಸ್ತಾನಿಗಳು ದಾಳಿ ಮಾಡಬೇಕು' ಎಂದು ಕರೆ ನೀಡಿದ್ದಾನೆ. ಅಲ್ಲದೆ ಲಖನೌ ಮತ್ತು ಪ್ರಯಾಗ್‌ರಾಜ್ ವಿಮಾನ ನಿಲ್ದಾಣಗಳಲ್ಲಿ ಖಲಿಸ್ತಾನಿ ಧ್ವಜಗಳನ್ನು ಹಾರಿಸಬೇಕು ಎಂದು ತನ್ನ ಹಿಂಬಾಲಕರಿಗೆ ಕರೆ ನೀಡಿದ್ದಾನೆ.
ವಿಮಾನಗಳಿಗೆ ಬಾಂಬ್ ಬೆದರಿಕೆಯಿಂದ 300 ಕೋಟಿ ನಷ್ಟ, ಏರ್ ಇಂಡಿಯಾದಲ್ಲಿ ಪ್ರಯಾಣಿಸದಂತೆ ಉಗ್ರ ಪನ್ನು ಎಚ್ಚರಿಕೆ
ಇದಕ್ಕೆ ಪ್ರತಿಕ್ರಿಯಿಸಿರುವ ಅಖಿಲ ಭಾರತೀಯ ಅಖಾಡ್ ಪರಿಷದ್, 'ಪನ್ನು ಒಬ್ಬ ಹುಚ್ಚ, ಆತ ಬಂದರೆ ಹೊಡೆದು ಓಡಿಸುತ್ತೇವೆ" ಎಂದಿದೆ.
ಬಿಹಾರದಲ್ಲಿ 11 ವರ್ಷದ ಬಾಲಕ ವಶಕ್ಕೆ:
ಇತ್ತ ಬಿಹಾರದಲ್ಲಿ 11ನೇ ತರಗತಿಯ ವಿದ್ಯಾರ್ಥಿಯೋರ್ವ ಮಹಾ ಕುಂಭಮೇಳಕ್ಕೆ ಬಾಂಬ್ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದ. ಆತನನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ.
ವಿಡಿಯೋದಲ್ಲೇನಿದೆ?
• ಹಿಂದುತ್ವದ ಸಿದ್ಧಾಂತ ಕೊಂದು ಹಾಕಿ 2025ರ ಕುಂಭಮೇಳವನ್ನು ರಣಾಂಗಣ ಮಾಡುತ್ತೇವೆ
• ಪ್ರಮುಖ ದಿನಗಳನ್ನು ಗುರಿಯಾಗಿಸಿ ಕಾಶ್ಮೀರಿಗಳು, ಖಲಿಸ್ತಾನಿಗಳು ಭಾರತದಲ್ಲಿ ದಾಳಿ ನಡೆಸಬೇಕು
• ಲಖನೌ, ಪ್ರಯಾಗ್‌ರಾಜ್ ವಿಮಾನ ನಿಲ್ದಾಣದಲ್ಲಿ ಖಲಿಸ್ತಾನಿ ಧ್ವಜ ಹಾರಿಸಬೇಕು: ಉಗ್ರ ಪನ್ನು ಕರೆ
• ಈ ಹಿಂದೆ ಕೂಡಾ ಕುಂಭಮೇಳದ ಆಯ್ದ ದಿನ ಗುರಿ ಮಾಡಿ ದಾಳಿ ನಡೆಸುವುದಾಗಿ ಎಚ್ಚರಿಸಿದ್ದ ಉಗ್ರ
# ಪನ್ನು ಒಬ್ಬ ಹುಚ್ಚ ಆತ ಬಂದರೆ ಹೊಡೆದು ಓಡಿಸುತ್ತೇವೆ: ಅಖಾಡ ಪರಿಷತ್ ಎಚ್ಚರಿಕೆ
ಆಯೋಧ್ಯೆ ರಾಮ ಮಂದಿರ ಮೇಲೆ ದಾಳಿ, ಖಲಿಸ್ತಾನಿ ಉಗ್ರ ಗುರುಪತ್ವಂತ್ ಪನ್ನುನ್ ಬೆದರಿಕೆ!
ನವದೆಹಲಿ: ಭಾರತ ಹಾಗೂ ಕೆನಡಾ ನಡುವಿನ ಸಂಬಂಧಕ್ಕೆ ಖಲಿಸ್ತಾನಿ ಉಗ್ರರು ಹುಳಿ ಹಿಂಡಿದ್ದಾರೆ. ಕೆನಡಾದಲ್ಲಿ ಖಲಿಸ್ತಾನಿ ಚಟುವಟಿಕೆ ತೀವ್ರಗೊಳ್ಳುತ್ತಿದೆ. ಇದರ ನಡುವೆ ಪದೇ ಪದೇ ಭಾರತಕ್ಕೆ ಎಚ್ಚರಿಕೆ ನೀಡುತ್ತಿರುವ ಖಲಿಸ್ತಾನಿ ಉಗ್ರ, ನಿಷೇಧಿತ ಸಿಖ್ ಫಾರ್ ಜಸ್ಟೀಸ್ ಸಂಘಟನೆ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ್ ಇದೀಗ ಹೊಸ ಬೆದರಿಕೆ ಹಾಕಿದ್ದನು. ಆಯೋಧ್ಯೆ ರಾಮ ಮಂದಿರ ಹಾಗೂ ಹಿಂದೂ ಪವಿತ್ರ ದೇಗುಲ ಮೇಲೆ ದಾಳಿ ಮಾಡುವುದಾಗಿ ಎಚ್ಚರಿಸಿದ್ದಾನೆ. 2024ರ ನವೆಂಬರ್ 16 ಹಾಗೂ 17 ರಂದು ದಾಳಿ ಸಂಘಟಿಸುವುದಾಗಿ ಎಚ್ಚರಿಸಿದ್ದನು.
ಪನ್ನುನ್ ಕೇಸಲ್ಲಿ ಅಮೆರಿಕದ ಎಫ್‌ಬಿಐ ಹುಡುಕ್ತಿರೋ ಭಾರತೀಯ ವಿಕಾಸ್ ಯಾದವ್ ಯಾರು?
ವಿಡಿಯೋ ಮೂಲಕ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಬೆದರಿಕೆ ಹಾಕಿದ್ದಾನೆ. ಈ ವಿಡಿಯೋವನ್ನು ಕೆನಡಾದ ಬ್ರಾಂಪ್ಟನ್‌ನಲ್ಲಿ ರೆಕಾರ್ಡ್ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕೆನಡಾದಲ್ಲಿ ನಡೆಯುತ್ತಿರುವ ಹಿಂದೂ ಮಂದಿರಗಳ ಮೇಲಿನ ದಾಳಿ ಹಿಂದೆ ಇದೇ ಗುರುಪತ್ವಂತ್ ಸಿಂಗ್ ಪನ್ನುನ್ ಕೈವಾಡ ಇದೆ ಎಂದು ಹೇಳಲಾಗುತ್ತಿದೆ. ಇದೀಗ ಈ ದಾಳಿ ಬೆನ್ನಲ್ಲೇ ಆಯೋಧ್ಯೆ ರಾಮ ಮಂದಿರ ಸೇರಿದಂತೆ ಭಾರತದಲ್ಲಿರುವ ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ಮಾಡುವುದಾಗಿ ಪತ್ವಂತ್ ಎಚ್ಚರಿಸಿದ್ದನು.
ವಿಡಿಯೋ ಸಂದೇಶದಲ್ಲಿ ಪನ್ನುನ್ ಸ್ಫೋಟಕ ಮಾತುಗಳ ಮೂಲಕ ಬೆದರಿಕೆ ಹಾಕಿದ್ದಾನೆ. ಪ್ರಧಾನಿ ನರೇಂದ್ರ ಮೋದಿ ಆಯೋಧ್ಯೆ ರಾಮಲಲ್ಲಾ ಎದುರು ಪೂಜೆ ಮಾಡುತ್ತಿರುವ ಫೋಟೋವನ್ನು ಹಾಕಿ, ನಾವು ಆಕ್ರಮಣಕಾರಿ, ಹಿಂಸಾತ್ಮಕ ಹಿಂದೂ ಐಡಿಯಾಲಾಜಿ ಹುಟ್ಟಿದ ಆಯೋಧ್ಯೆಯ ಅಡಿಪಾಯ ಬುಡಮೇಲು ಮಾಡುತ್ತೇವೆ ಎಂದು ಎಚ್ಚರಿಸಿದ್ದಾನೆ. ಇದೇ ವೇಳೆ ಕೆನಡಾದಲ್ಲಿರುವ ಭಾರತೀಯರೇ ಹಿಂದೂ ಮಂದಿರದಿಂದ ದೂರವಿರಿ, ಖಲಿಸ್ತಾನಿ ಸೈನಿಕರು ಸತತ ದಾಳಿ ಮಾಡಲಿದ್ದಾರೆ ಎಂದು ಎಚ್ಚರಿಸಿದ್ದ.