ಪನ್ನುನ್ ಕೇಸಲ್ಲಿ ಅಮೆರಿಕದ ಎಫ್‌ಬಿಐ ಹುಡುಕ್ತಿರೋ ಭಾರತೀಯ ವಿಕಾಸ್ ಯಾದವ್ ಯಾರು?
ಅಮೆರಿಕಾದಲ್ಲಿ ಖಲಿಸ್ತಾನಿ ಉಗ್ರಗಾಮಿ ಗುರ್ಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಭಾರತದ ಮಾಜಿ ಭಾರತೀಯ ಗುಪ್ತಚರ ಅಧಿಕಾರಿ ಎಂದು ಅಮೆರಿಕಾ ಹೇಳಿಕೊಂಡಿರುವ ವಿಕಾಸ್ ಯಾದವ್‌ನನ್ನು ಅಮೆರಿಕದ ಎಫ್‌ಬಿಐ ಹುಡುಕುತ್ತಿದೆ.
ಅಮೆರಿಕಾದಲ್ಲಿ ಖಲಿಸ್ತಾನಿ ಉಗ್ರಗಾಮಿ ಗುರ್ಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಭಾರತದ ಮಾಜಿ ಭಾರತೀಯ ಗುಪ್ತಚರ ಅಧಿಕಾರಿ ಎಂದು ಅಮೆರಿಕಾ ಹೇಳಿಕೊಂಡಿರುವ ವಿಕಾಸ್ ಯಾದವ್‌ನನ್ನು ಅಮೆರಿಕದ ಎಫ್‌ಬಿಐ ಹುಡುಕುತ್ತಿದೆ. ಈತನನ್ನು 10 ತಿಂಗಳ ಹಿಂದೆ ದೆಹಲಿ ಪೊಲೀಸರು ಅಪಹರಣ ಮತ್ತು ಕೊಲೆಯತ್ನ ಪ್ರಕರಣದಲ್ಲಿ ಬಂಧಿಸಿದ್ದರು. ಈತನ ವಿರುದ್ಧ ದೆಹಲಿಯ ಉದ್ಯಮಿಯೊಬ್ಬರು ದೂರು ನೀಡಿದ್ದರು. ಈತ ತನಗೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಜೊತೆ ಸಂಬಂಧವಿದೆ ಎಂದು ಹೇಳಿಕೊಂಡಿದ್ದ.
ಡಿಸೆಂಬರ್ 2023ರಲ್ಲಿ ದಾಖಲಾದ ಪ್ರಕರಣದಲ್ಲಿ ವಿಕಾಸ್ ಜೊತೆ ಇನ್ನೊಬ್ಬ ವ್ಯಕ್ತಿಯನ್ನೂ ಬಂಧಿಸಲಾಗಿತ್ತು. ಆದರೆ ಕಳೆದ ಏಪ್ರಿಲ್‌ನಲ್ಲಿ ವಿಕಾಸ್‌ಗೆ ಜಾಮೀನು ಸಿಕ್ಕಿತ್ತು. ಈತನ ವಿರುದ್ಧ ದೂರು ನೀಡಿದ್ದ ದೆಹಲಿಯ ಉದ್ಯಮಿ, ಪರಿಚಯಸ್ಥರೊಬ್ಬರ ಮೂಲಕ ನವೆಂಬರ್‌ನಲ್ಲಿ ವಿಕಾಸ್‌ನನ್ನು ಭೇಟಿಯಾಗಿದ್ದಾಗಿ ಹೇಳಿದ್ದರು. ಈ ವೇಳೆ ವಿಕಾಸ್ ಉದ್ಯಮಿ ಬಳಿ ತಾನು ಹಿರಿಯ ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡಿದ್ದ ಎನ್ನಲಾಗಿದೆ.
ತಾನು ಅಂಡರ್‌ಕವರ್ ಏಜೆಂಟ್ ಎಂದು ಹೇಳಿಕೊಂಡಿದ್ದ ವಿಕಾಸ್ ಯಾದವ್
ಇತ್ತ ದೆಹಲಿ ಮೂಲದ ಉದ್ಯಮಿ ಐಟಿ ಕಂಪನಿ ನಡೆಸುತ್ತಿದ್ದು, ಪಶ್ಚಿಮ ಏಷ್ಯಾದ ಹಲವು ಭಾರತೀಯರ ಜೊತೆ ಸಂಪರ್ಕದಲ್ಲಿದ್ದರು. ಹಾಗೆಯೇ ಶೀಘ್ರದಲ್ಲೇ ವಿಕಾಸ್ ಜೊತೆಯೂ ಗೆಳೆತನ ಬೆಳೆಸಿಕೊಂಡರು. ವಿಕಾಸ್ ತಾನು ಅಂಡರ್‌ಕವರ್ ಏಜೆಂಟ್ ಎಂದು ಉದ್ಯಮಿ ಬಳಿ ಹೇಳಿಕೊಂಡಿದ್ದ. ಆದರೆ ಆತ ತನ್ನ ಕೆಲಸ ಮತ್ತು ಕಚೇರಿಯ ಬಗ್ಗೆ ಮಾಹಿತಿ ನೀಡಿರಲಿಲ್ಲ ಎಂದು ಉದ್ಯಮಿ ಹೇಳಿದ್ದಾರೆ.
ಭಾರತಕ್ಕೆ ಪರಾರಿಯಾಗಿರುವ ಮಹಿಳೆ ತಲೆಗೆ ಭಾರೀ ಮೊತ್ತದ ಬಹುಮಾನ ಘೋಷಿಸಿದ ಎಫ್‌ಬಿಐ
ಉದ್ಯಮಿಯನ್ನೇ ಅಪಹರಿಸಿದ್ದ ವಿಕಾಸ್
ಈ ಮಧ್ಯೆ ಡಿಸೆಂಬರ್ 11ರಂದು ವಿಕಾಸ್ ಉದ್ಯಮಿಯನ್ನು ಲೋಧಿ ರಸ್ತೆಗೆ ಕರೆಸಿ ಅಪಹರಿಸಿದ್ದ. ಆತನನ್ನು ಡಿಫೆನ್ಸ್ ಕಾಲೋನಿಯ ಒಂದು ಫ್ಲ್ಯಾಟ್‌ಗೆ ಕರೆದೊಯ್ಯಲಾಗಿತ್ತು. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ನಿನ್ನನ್ನು ಕೊಲ್ಲಲು ಸುಪಾರಿ ನೀಡಿದ್ದಾನೆ ಎಂದು ವಿಕಾಸ್ ಉದ್ಯಮಿಗೆ ಹೇಳಿದ್ದ ಅಲ್ಲದೇ ಉದ್ಯಮಿಯ ಮೇಲೆ ಹಲ್ಲೆ ನಡೆಸಿ ಆತನ ಚಿನ್ನದ ಸರ ಮತ್ತು ಉಂಗುರಗಳನ್ನು ಕಸಿದುಕೊಳ್ಳಲಾಗಿತ್ತು. ಪೊಲೀಸರ ಬಳಿ ಹೋದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವಿಕಾಸ್ ಮತ್ತು ಆತನ ಸಹಚರರು ಉದ್ಯಮಿಗೆ ಬೆದರಿಕೆ ಹಾಕಿದ್ದರು. ಬಳಿಕ ಆತನನ್ನು ರಸ್ತೆ ಬದಿಯಲ್ಲಿ ಬಿಟ್ಟು ಎಸ್ಕೇಪ್ ಆಗಿದ್ದರು.
ಇದಾದ ನಂತರ ಡಿಸೆಂಬರ್ 18ರಂದು ಉದ್ಯಮಿಯ ದೂರಿನ ಮೇರೆಗೆ ದೆಹಲಿ ಪೊಲೀಸರು ವಿಕಾಸ್ ಮತ್ತು ಆತನ ಸಹಚರನನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಹಳೆಯ ವಾಹನ ಮಾರಾಟದ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದು, ಹಣಕ್ಕಾಗಿ ಉದ್ಯಮಿಯನ್ನು ಟಾರ್ಗೆಟ್ ಮಾಡಿದ್ದಾಗಿ ವಿಕಾಸ್ ಮತ್ತು ಆತನ ಸಹಚರ ತಿಳಿಸಿದ್ದರು. ಅಲ್ಲದೇ ತನ್ನ ತಂದೆ BSFನಲ್ಲಿದ್ದು ಅವರು 2007ರಲ್ಲಿ ನಿಧನರಾಗಿದ್ದಾರೆ ಎಂದು ವಿಕಾಸ್ ಹೇಳಿಕೊಂಡಿದ್ದ. ಹಣಕ್ಕಾಗಿ ಉದ್ಯಮಿಯನ್ನು ಟಾರ್ಗೆಟ್ ಮಾಡಿದ್ದಾಗಿ ತಿಳಿಸಿದ್ದ.
ಪತ್ನಿ ಹಂತಕ ಭಾರತೀಯನ ಸುಳಿವು ನೀಡಿದವರಿಗೆ ₹2 ಕೋಟಿ ಇನಾಮು ಘೋಷಿಸಿದ ಎಫ್‌ಬಿಐ!
RAWಗೆ ವಿಕಾಸ್ ಕೆಲಸ ಮಾಡುತ್ತಿದ್ದ ಎಂದ ಅಮೆರಿಕ
ಆದರೆ ಈ ವಾರದ ಆರಂಭದಲ್ಲಿ ಅಮೆರಿಕದ ಪೊಲೀಸರು ಪನ್ನುನ್ ಹತ್ಯೆ ಸಂಚಿನ ಹಿಂದೆ ಭಾರತೀಯ ಅಧಿಕಾರಿಯಾಗಿ ವಿಕಾಸ್ ಯಾದವ್ ಹೆಸರನ್ನು ಉಲ್ಲೇಖಿಸಿದ್ದಾರೆ. ಯಾದವ್ ಮಾಜಿ RAW ಅಧಿಕಾರಿ ಎಂದು ಅಮೆರಿಕ ಹೇಳಿದೆ. ಹರಿಯಾಣದ ಪ್ರಾಣಪುರದಲ್ಲಿ ಯಾದವ್ ಜನಿಸಿದ್ದಾನೆ ಎಂದು FBI ಹೇಳಿದೆ. ಆದರೆ ಎಫ್‌ಬಿಐ ಉಲ್ಲೇಖಿಸಲಾಗಿರುವ ವ್ಯಕ್ತಿ ಭಾರತ ಸರ್ಕಾರಕ್ಕೆ ಕೆಲಸ ಮಾಡುತ್ತಿಲ್ಲ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ.