ಗನ್‌, ಖಡ್ಗ, ಆಯುಧ ಹಿಡಿದು ಖಲಿಸ್ತಾನಿ ಬೆಂಬಲಿಗರ ದಾಂಧಲೆ: ಅಮೃತಸರದಲ್ಲಿ ಠಾಣೆ ಮೇಲೆ ದಾಳಿ

ಖಲಿಸ್ತಾನಿ ಬೆಂಬಲಿಗ ಅಮೃತ್‌ಪಾಲ್‌ ಸಿಂಗ್‌ನ ಸಹಚರರ ಬಂಧನ ವಿರೋಧಿಸಿ, ಸಿಂಗ್‌ನ ಬೆಂಬಲಿಗರು ಗನ್‌, ಕತ್ತಿ ಹಾಗೂ ಇತರ ಆಯುಧಗಳನ್ನು ಹಿಡಿದು ಅಮೃತಸರದ ಅಜ್ನಾಲಾ ಪೊಲೀಸ್‌ ಠಾಣೆಯ ಮೇಲೆ ದಾಳಿ ಮಾಡಿದ್ದಾರೆ.

Khalistani supporters riot with guns swords weapons Police station attacked in Amritsar akb

ಚಂಡೀಗಢ: ಖಲಿಸ್ತಾನಿ ಬೆಂಬಲಿಗ ಅಮೃತ್‌ಪಾಲ್‌ ಸಿಂಗ್‌ನ ಸಹಚರರ ಬಂಧನ ವಿರೋಧಿಸಿ, ಸಿಂಗ್‌ನ ಬೆಂಬಲಿಗರು ಗನ್‌, ಕತ್ತಿ ಹಾಗೂ ಇತರ ಆಯುಧಗಳನ್ನು ಹಿಡಿದು ಅಮೃತಸರದ ಅಜ್ನಾಲಾ ಪೊಲೀಸ್‌ ಠಾಣೆಯ ಮೇಲೆ ದಾಳಿ ಮಾಡಿದ್ದಾರೆ.  ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ಮುರಿದು ಒಳನುಗ್ಗಿದ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಘರ್ಷಣೆ ಸಂಭವಿಸಿದೆ. ಠಾಣೆಯ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಜಮಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚು ಮಾಡಲಾಗಿದೆ.

ಅಪಹರಣ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಮೃತ್‌ಪಾಲ್‌ ಸಿಂಗ್‌ (Amritpal Singh) ಹಾಗೂ ಇತರರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಈ ಸಂಬಂಧ ಕೆಲವರನ್ನು ಬಂಧಿಸಲಾಗಿದೆ. ಇದನ್ನು ವಿರೋಧಿಸಿ ಸಿಂಗ್‌ನ ಬೆಂಬಲಿಗರು ಪೊಲೀಸ್‌ ಠಾಣೆಯ ಮೇಲೆ ದಾಳಿ ಮಾಡಿದ್ದಾರೆ. ವಾರಿಸ್‌ ಪಂಜಾಬ್‌ ದೇ ಸಂಘಟನೆಯ (Waris Punjab De organization) ಮುಖ್ಯಸ್ಥನಾಗಿರುವ ಅಮೃತ್‌ಪಾಲ್‌ ಸಿಂಗ್‌, ಹಲವು ಬಾರಿ ಕೇಂದ್ರ ಗೃಹ ಸಚಿವರಿಗೆ ಜೀವ ಬೆದರಿಕೆ ಒಡ್ಡಿದ್ದ.

ಕೆನಡಾದ ರಾಮಮಂದಿರ ಮೇಲೆ ಮೋದಿ ವಿರೋಧಿ, ಭಾರತ ವಿರೋಧಿ ಬರಹ

 6 ಖಲಿಸ್ತಾನಿ ಪ್ರತೇಕತಾವಾದಿಗಳ ಬಂಧನ

ಮತ್ತೊಂದೆಡೆ ದೇಶದ 8 ರಾಜ್ಯಗಳ 76 ಸ್ಥಳಗಳ ಮೇಲೆ ಗುರುವಾರ ದಾಳಿ ನಡೆಸಿರುವ ಎನ್‌ಐಎ ಅಧಿಕಾರಿಗಳು (NIA officers), ಖಲಿಸ್ತಾನ ವಿಚಾರವಾದಿಗಳೂ ಸೇರಿದಂತೆ ಡ್ರಗ್‌ ಮಾಫಿಯಾ, ಕ್ರಿಮಿನಲ್‌ ಗ್ಯಾಂಗ್‌ನ 6 ಜನರನ್ನು ಬಂಧಿಸಿದೆ. ಬಂಧಿತರಲ್ಲಿ ಖಲಿಸ್ತಾನಿ ಉಗ್ರ (Khalistani militant) ಅಮೃತ್‌ಪಾಲ್‌ ಸಿಂಗ್‌ (Amritpal Singh) ಸಹಚರರು ಇದ್ದಾರೆ.

ಈ ವೇಳೆ ಕೆನಡಾ ಮೂಲದ ಉಗ್ರ ಅಶ್‌ರ್‍ದೀಪ್‌ ಸಿಂಗ್‌ ಅಲಿಯಾಸ್‌ ಅಶ್‌ರ್‍ ದಲ್ಲಾನ (Ashrdeep Singh alias Ashr Dallan) ಸಹಚರ, ಪಂಜಾಬ್‌ನ ಭಟಿಂಡಾ ನಿವಾಸಿ, ಲಕ್ಕಿ ಖೋಖರ್‌ ಅಲಿಯಾಸ್‌ ಡೆನ್ನಿಸ್‌ನನ್ನು ಕೂಡಾ ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ (Sri Ganganagar) ಬಂಧಿಸಲಾಗಿದೆ. ಈತ ನಿಷೇಧಿತ ಸಂಘಟನೆಗಳಾದ ಖಲಿಸ್ತಾನ್‌ ಲಿಬರೇಶನ್‌ ಫೋರ್ಸ್‌, ಬಬ್ಬರ್‌ ಖಲ್ಸಾ ಇಂಟರ್‌ನ್ಯಾಶನಲ್‌, ಇಂಟರ್‌ನ್ಯಾಶನಲ್‌ ಸಿಖ್‌ ಯೂಥ್‌ ಫೆಡರೇಶನ್‌ಗಳಿಗೆ ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ತೊಡಗಿದ್ದ.

ಖಲಿ​ಸ್ತಾನಿ ಉಗ್ರರ ಜೊತೆ ಕೆಲ ಪತ್ರ​ಕ​ರ್ತರಿಗೆ ಸಂಪ​ರ್ಕ: ಐಬಿ ವರದಿ

ಖೋಖರ್‌ ಅಲ್ಲದೆ ಲಖ್ವೀರ್‌ ಸಿಂಗ್‌ (Lakhvir Singh), ಹರ್‌ಪ್ರೀತ್‌, ದಿಲೀಪ್‌ ಬಿಷ್ಣೋಯ್‌, ಸುರಿಂದರ್‌ ಅಲಿಯಾಸ್‌ ಚಿಕು ಚಕ್ರವರ್ತಿ ಮತ್ತು ಹರಿ ಓಂ ಅಲಿಯಾಸ್‌ ಟಿಟು ಅವರನ್ನು ಬಂಧಿಸಲಾಗಿದೆ. ಇನ್ನು ಪಂಜಾಬ್‌, ಹರಾರ‍ಯಣ, ರಾಜಸ್ಥಾನ, ಉತ್ತರಪ್ರದೇಶ, ದೆಹಲಿ, ಮಹಾರಾಷ್ಟ್ರ, ಮಧ್ಯಪ್ರದೇಶಗಳಲ್ಲಿ ನಡೆದ ದಾಳಿಯಲ್ಲಿ ಕುಖ್ಯಾತ ಗ್ಯಾಂಗ್‌ಸ್ಟರ್‌ (Notorious gangsters) ಲಾರೆನ್ಸ್‌ ಬಿಷ್ಣೋಯಿ  (Lawrence Bishnoi) , ಜಗ್ಗು ಭಗ್ವಾನ್‌ಪುರಿಯಾ, ಮತ್ತು ಗೋಲ್ಡಿ ಬ್ರಾರ್‌ ಸಹಚರರನ್ನು ಬಂಧಿಸಲಾಗಿದೆ.


 

Latest Videos
Follow Us:
Download App:
  • android
  • ios