ಖಲಿ​ಸ್ತಾನಿ ಉಗ್ರರ ಜೊತೆ ಕೆಲ ಪತ್ರ​ಕ​ರ್ತರಿಗೆ ಸಂಪ​ರ್ಕ: ಐಬಿ ವರದಿ

ಪ್ರತ್ಯೇಕತಾವಾದಿ ಕೃತ್ಯ ಬೆಂಬಲಿಸುವ ಕೆಲ ಪತ್ರ​ಕ​ರ್ತರು ಹಾಗೂ ಏಜೆ​ನ್ಸಿ​ಗಳ ಜೊತೆಗೆ ಖಲಿ​ಸ್ತಾನಿ ಪರ​ವಾ​ಗಿ​ರುವ ಘಟ​ಕ​ಗಳು ಸಂಪ​ರ್ಕ​ದ​ಲ್ಲಿವೆ ಎಂದು ಪಂಜಾ​ಬ್‌ನ ಗುಪ್ತ​ಚರ ಇಲಾಖೆ ಬಿಡು​ಗಡೆ ಮಾಡಿ​ರುವ ವರದಿಯಲ್ಲಿ ಹೇಳ​ಲಾ​ಗಿದೆ.

some journalists have a contact with Khalistani militants, Punjabs intelligence department report akb

ಚಂಡೀ​ಗ​ಢ: ಪ್ರತ್ಯೇಕತಾವಾದಿ ಕೃತ್ಯ ಬೆಂಬಲಿಸುವ ಕೆಲ ಪತ್ರ​ಕ​ರ್ತರು ಹಾಗೂ ಏಜೆ​ನ್ಸಿ​ಗಳ ಜೊತೆಗೆ ಖಲಿ​ಸ್ತಾನಿ ಪರ​ವಾ​ಗಿ​ರುವ ಘಟ​ಕ​ಗಳು ಸಂಪ​ರ್ಕ​ದ​ಲ್ಲಿವೆ ಎಂದು ಪಂಜಾ​ಬ್‌ನ ಗುಪ್ತ​ಚರ ಇಲಾಖೆ ಬಿಡು​ಗಡೆ ಮಾಡಿ​ರುವ ವರದಿಯಲ್ಲಿ ಹೇಳ​ಲಾ​ಗಿದೆ.

‘ಖ​ಲಿ​ಸ್ತಾನಿ ಪರ​ವಾ​ಗಿ​ರುವ ಘಟ​ಕ​ಗಳು ತಮ್ಮ ಆಲೋ​ಚ​ನೆ​ಗಳು ಮತ್ತು ಯೋಜ​ನೆ​ಗ​ಳನ್ನು ಜನ​ರಿಗೆ ತಲು​ಪಿ​ಸಲು ಫೇಸ್‌​ಬುಕ್‌, ಯೂಟ್ಯೂ​ಬ್‌​ನಂತಹ ಸಾಮಾಜಿಕ ಜಾಲ​ತಾ​ಣ​ಗ​ಳನ್ನು ಬಳ​ಸಿ​ಕೊ​ಳ್ಳು​ತ್ತವೆ. ಇದ​ರೊಂದಿಗೆ ಈ ಘಟ​ಕ​ಗಳು ಕೆಲವು ಪತ್ರ​ಕ​ರ್ತರು ಮತ್ತು ನ್ಯೂಸ್‌ ಏಜೆ​ನ್ಸಿ​ಗಳ ಜೊತೆಗೂ ಸಂಪ​ರ್ಕ​ದ​ಲ್ಲಿವೆ. ಇವರು ಖಲಿ​ಸ್ತಾನಿ ಉಗ್ರ​ರನ್ನು ಸಂದ​ರ್ಶನ ಮಾಡಿ ಅದನ್ನು ತಮ್ಮ ಖಾಸಗಿ ಸುದ್ದಿ ವಾಹಿ​ನಿ​ಗ​ಳನ್ನು ಪ್ರಸಾರ ಮಾಡುವ ಮೂಲಕ ಪ್ರಚಾರ ನೀಡು​ತ್ತಿ​ದ್ದಾ​ರೆ ಎಂದು ವರದಿ ತಿಳಿ​ಸಿದೆ. ಅಲ್ಲದೇ ಖಲಿ​ಸ್ತಾನಿ ಪರ​ವಾದ ಘಟ​ಕ​ಗಳು ಇತ್ತೀ​ಚಿಗೆ ಮಾದ​ಕ​ವಸ್ತು, ಶಸ್ತ್ರಾಸ್ತ್ರ ಮತ್ತು ಸ್ಫೋಟ​ಕ​ಗ​ಳನ್ನು ಸಾಗಣೆ ಮಾಡಲು ಸಹ ಆರಂಭಿ​ಸಿವೆ. ಹಾಗೆಯೇ ಆನ್ಲೈ​ನ್‌​ನಲ್ಲಿ ಪ್ರಚಾರ ಮಾಡಿ​ಕೊ​ಳ್ಳುವ ಮೂಲಕ ನಿಧಿ ಸಂಗ್ರ​ಹಣೆ ಮಾಡು​ತ್ತಿದ್ದು, ಅದನ್ನು ಉಗ್ರ ಕೃತ್ಯ​ಗ​ಳಿಗೆ ಬಳ​ಸಿ​ಕೊ​ಳ್ಳ​ಲಾ​ಗು​ತ್ತಿದೆ ಎಂದು ಹೇಳ​ಲಾ​ಗಿದೆ.


ಚಂಡೀಗಢದ ಪಂಜಾಬ್‌ ಸಿಎಂ ನಿವಾಸದ ಬಳಿ ಬಾಂಬ್‌ ಪತ್ತೆ: ಭಾರತೀಯ ಸೇನೆಯಿಂದ ತನಿಖೆ

ಪಂಜಾಬ್‌ನಲ್ಲಿ ಪೊಲೀಸ್ ಠಾಣೆ ಮೇಲೆ ರಾಕೆಟ್ ಚಾಲಿತ ಗ್ರೆನೇಡ್ ದಾಳಿ..!

Latest Videos
Follow Us:
Download App:
  • android
  • ios