Asianet Suvarna News Asianet Suvarna News

ಖಲಿಸ್ತಾನಿ ಉಗ್ರ ಅಮೃತ್‌ ಪಾಕ್‌ಗೆ ಪರಾರಿಗೆ ಸಜ್ಜು: ಗಡಿಯಲ್ಲಿ ಕಟ್ಟೆಚ್ಚರಕ್ಕೆ ಬಿಎಸ್‌ಎಫ್‌ಗೆ ಕೇಂದ್ರ ಸೂಚನೆ

ಖಲಿಸ್ತಾನಿ ಹೋರಾಟಗಾರ ಅಮೃತ್‌ಪಾಲ್‌ ಸಿಂಗ್‌ ಸತತ 3ನೇ ದಿನವೂ ನಾಪತ್ತೆಯಾಗಿದ್ದು, ಆತನ ಬಂಧನಕ್ಕೆ ಕಾರಾರ‍ಯಚರಣೆ ಇನ್ನಷ್ಟುತೀವ್ರಗೊಂಡಿದೆ. ಆತ ಗಡಿ ದಾಟಿ ಹೋಗಬಹುದು ಎಂಬ ಆತಂಕ ಇದ್ದು, ಗಡಿಯಲ್ಲಿ ಬಿಎಸ್‌ಎಫ್‌ ಹಾಗೂ ಸೀಮಾ ಸುರಕ್ಷಾ ಬಲಕ್ಕೆ ಕಟ್ಟೆಚ್ಚರ ವಹಿಸಲು ಕೇಂದ್ರ ಸರ್ಕಾರ ಸೂಚಿಸಿದೆ.

Khalistani militant Amrit Pal singh planned to escape Pak: Union Govt instructs BSF to be on high alert at border akb
Author
First Published Mar 21, 2023, 8:21 AM IST

ಚಂಡೀಗಢ: ಖಲಿಸ್ತಾನಿ ಹೋರಾಟಗಾರ ಅಮೃತ್‌ಪಾಲ್‌ ಸಿಂಗ್‌ ಸತತ 3ನೇ ದಿನವೂ ನಾಪತ್ತೆಯಾಗಿದ್ದು, ಆತನ ಬಂಧನಕ್ಕೆ ಕಾರಾರ‍ಯಚರಣೆ ಇನ್ನಷ್ಟುತೀವ್ರಗೊಂಡಿದೆ. ಆತ ಗಡಿ ದಾಟಿ ಹೋಗಬಹುದು ಎಂಬ ಆತಂಕ ಇದ್ದು, ಗಡಿಯಲ್ಲಿ ಬಿಎಸ್‌ಎಫ್‌ ಹಾಗೂ ಸೀಮಾ ಸುರಕ್ಷಾ ಬಲಕ್ಕೆ ಕಟ್ಟೆಚ್ಚರ ವಹಿಸಲು ಕೇಂದ್ರ ಸರ್ಕಾರ ಸೂಚಿಸಿದೆ.

ಭಾರತದಲ್ಲಿ ದುಷ್ಕೃತ್ಯ ನಡೆಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ISI) ಅಮೃತ್‌ಗೆ ನೆರವು ನೀಡುವ ಮೂಲಕ ಭಾರತವನ್ನು ವಿಭಜಿಸುವ ಸಂಚು ರೂಪಿಸಿದೆ. ಜೊತೆಗೆ ಈತನ ಕೃತ್ಯಗಳಿಗೆ ಮಾದಕ ವಸ್ತು ದಂಧೆಕೋರರು ದೊಡ್ಡಮಟ್ಟದ ಆರ್ಥಿಕ ನೆರವು ನೀಡುತ್ತಿದ್ದಾರೆ. ಶನಿವಾರ ಆತ ಪರಾರಿಯಾಗಲು ಬಳಸಿದ ವಾಹನ ಕೂಡಾ ಮಾದಕ ವಸ್ತು ದಂಧೆ ಕೋರ ಉಡುಗೊರೆಯಾಗಿದ್ದ ನೀಡಿದ್ದು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪಾಲ್‌ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಭೀತಿ ಇರುವ ಕಾರಣ ಸೋಮವಾರವೂ ಪಂಜಾಬ್‌ನಲ್ಲಿ ಮೊಬೈಲ್‌ ಇಂಟರ್ನೆಟ್‌ (Internet) ಹಾಗೂ ಎಸ್ಸೆಮ್ಮೆಸ್‌ ಸೇವೆಗಳ ಮೇಲೆ ನಿರ್ಬಂಧ ಹೇರಲಾಗಿದೆ.

ಖಲಿಸ್ತಾನ ಹೋರಾಟದ ನೇತೃತ್ವದ ವಹಿಸಿದ ಅಮೃತ್ ಪಾಲ್ ಸಿಂಗ್ ಯಾರು?

ಚಿಕ್ಕಪ್ಪ, ಚಾಲಕ ಶರಣು- ಬಂಧನ:

ಇದೇ ವೇಳೆ, ಅಮೃತ್‌ಪಾಲ್‌ ಚಿಕ್ಕಪ್ಪ ಹರ್ಜೀತ್‌ ಸಿಂಗ್‌ (Harjith singh) ಹಾಗೂ ಚಿಕ್ಕಪ್ಪ ಹರ್‌ಪ್ರೀತ್‌ ಸಿಂಗ್‌ (Harpreeth singh) ಭಾನುವಾರ ತಡರಾತ್ರಿ ಜಲಂಧರ್‌ನಲ್ಲಿ ಶರಣಾಗಿದ್ದಾರೆ. ಕೂಡಲೇ ಅವರನ್ನು ಬಂಧಿಸಲಾಗಿದೆ. ಅಮೃತ್‌ನ ‘ವಾರಿಸ್‌ ಪಂಜಾಬ್‌ ದಿ’ ಸಂಘಟನೆಯ ಖಾತೆಗಳನ್ನು ಹರ್ಜೀತ್‌ ನೋಡಿಕೊಂಡು ಹಣ ಹೊಂದಿಸುತ್ತಿದ್ದ ಹಾಗೂ ಯಾವಾಗಲೂ ಅಮೃತ್‌ ಜತೆಗೇ ಸುತ್ತಾಡುತ್ತಿದ್ದ.

ಕಠಿಣ ಎನ್‌ಎಸ್‌ಎ ಕಾಯ್ದೆಯಡಿ ಪ್ರಕರಣ:

ಈ ನಡುವೆ ಬಂಧಿತ ಐವರು ಅಮೃತ್‌ಪಾಲ್‌ ಸಹಚರರ ವಿರುದ್ಧ ಕಠಿಣ ‘ರಾಷ್ಟ್ರೀಯ ಭದ್ರತಾ ಕಾಯ್ದೆ’ (NSA) ಪ್ರಕರಣ ದಾಖಲಿಸಲಾಗಿದೆ. ಹೀಗಾಗಿ ಇವರಿಗೆ ಜಾಮೀನು ಹಾಗೂ ಇತರ ಕಾನೂನು ಸೇವೆಗಳು ದುರ್ಲಭವಾಗಿವೆ. ಇದಲ್ಲದೆ, ಅಮೃತ್‌ಗೆ ಪಾಕ್‌ ಐಎಸ್‌ಐ ನಿಧಿ ಏನಾದರೂ ಹರಿದುಬರುತ್ತಿತ್ತಾ ಎಂಬ ತನಿಖೆಯನ್ನು ಪಂಜಾಬ್‌ ಪೊಲೀಸರು ಆರಂಭಿಸಿದ್ದಾರೆ. ವಾರಿಸ್‌ ಪಂಜಾಬ್‌ ದಿ ಸಂಘಟನೆಯ 114 ಮಂದಿಯನ್ನು ಈವರೆಗೆ ಬಂಧಿಸಲಾಗಿದೆ.


ಖಲಿಸ್ತಾನ ದಾಳಿಗೆ ಬೆದರಿದ ಪಂಜಾಬ್ ಸರ್ಕಾರ, ಅಮೃತಪಾಲ್ ಸಿಂಗ್ ಆಪ್ತ ಜೈಲಿನಿಂದ ಬಿಡುಗಡೆ!

 

Follow Us:
Download App:
  • android
  • ios