ಖಲಿಸ್ತಾನ ದಾಳಿಗೆ ಬೆದರಿದ ಪಂಜಾಬ್ ಸರ್ಕಾರ, ಅಮೃತಪಾಲ್ ಸಿಂಗ್ ಆಪ್ತ ಜೈಲಿನಿಂದ ಬಿಡುಗಡೆ!
ಪಂಜಾಬ್‌ನಲ್ಲಿ ಖಲಿಸ್ತಾನ್ ಹೋರಾಟ ತೀವ್ರಗೊಂಡಿದೆ. ಖಲಿಸ್ತಾನ್ ಉಗ್ರ ಸಂಘಟನೆ ಮುಖಂಡ ಅಮೃತ್‌ಪಾಲ್ ಸಿಂಗ್ ಆಪ್ತನ ಬಂಧನದಿಂದ ಅಮೃತಸರ ಸೇರಿದಂತೆ ಇಡೀ ಪಂಜಾಬ್‌ನಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಖಲಿಸ್ತಾನಿ ಗೂಂಡಾಗಳು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಇದರಿಂದ ಬೆದರಿದ ಪಂಜಾಬ್ ಸರ್ಕಾರ, ಕಿಡ್ನಾಪ್ ಆರೋಪಿಯನ್ನು ಜೈಲಿನಿಂದ ಬಿಡುಗಡೆ ಮಾಡಿದೆ.
ಅಮೃತಸರ(ಫೆ.24): ಖಲಿಸ್ತಾನ ಹೋರಾಟ ಮತ್ತೆ ಭುಗಿಲೆದ್ದಿದೆ. ಖಲಿಸ್ತಾನ ಮುಖಂಡ , ವಾರಿಸ್ ಪಂಜಾಬ್ ದೇ ಸಂಘಟನೆ ನಾಯಕ ಅಮೃತ್‌ಪಾಲ್ ಸಿಂಗ್ ಆಪ್ತ, ಅಪಹರಣ ಆರೋಪಿ ಲವ್‌ಪ್ರೀತ್ ಸಿಂಗ್ ಬಂಧನ ವಿರೋಧಿಸಿ ಹೋರಾಟ ತೀವ್ರಗೊಂಡಿದೆ. ವಾರಿಸ್ ಪಂಜಾಬ್ ದೇ ಧಾರ್ಮಿಕ ಸಂಘಟನೆ ಅಮೃತಸರ ಸೇರಿದತೆ ಪಂಜಾಬ್‌ನ ಕೆಲ ಭಾಗದಲ್ಲಿ ಹೋರಾಟ ತೀವ್ರಗೊಳಿಸಿದ್ದರು. ಈ ನಡೆಗೆ ಬೆದರಿದ ಪಂಜಾಬ್ ಆಪ್ ಸರ್ಕಾರ ಆರೋಪಿಯನ್ನು ಜೈಲಿನಿಂದ ಬಿಡುಗಡೆ ಮಾಡಿದೆ. ಈ ಮೂಲಕ ತಮ್ಮ ಹೋರಾಟಕ್ಕೆ ಮೊದಲ ಜಯ ದಕ್ಕಿಸಿಕೊಂಡಿದ್ದಾರೆ. ಪಂಜಾಬ್ ಪೊಲೀಸ್ ಹಾಗೂ ಸರ್ಕಾರದ ನಡೆ ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಖಲಿಸ್ತಾನ ಬೆಂಬಲಿಸಿ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಸರ್ಕಾರ, ನಾಟಕೀಯವಾಗಿ ಕಿಡ್ನಾಪ್ ಆರೋಪಿಯನ್ನು ಬಿಡುಗಡೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.
ಅಮೃತ್‌ಪಾಲ್ ಸಿಂಗ್ ನೇತೃತ್ವದಲ್ಲಿ ಹೋರಾಟ ತೀವ್ರಗೊಂಡಿದೆ. ಖಡ್ಗ, ಬಂದೂಕು, ಬಡಿಗೆ ಹಿಡಿದು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ವಾರಿಸ್ ಪಂಜಾಬ್ ದೇ ಸಂಘಟನೆ, ಲವ್‌ಪ್ರೀತ್ ಸಿಂಗ್ ಬಿಡುಗಡೆಗೆ ಆಗ್ರಹಿಸಿತ್ತು. ವಾರಿಸ್ ಪಂಜಾಬ್ ದೇ ಸಂಘಟನೆ ಹೋರಾಟಕ್ಕೆ ಬೆದರಿದ ಪಂಜಾಬ್ ಪೊಲೀಸ್, ಕಳೆದ ರಾತ್ರಿಯೇ ಒಂದು ದಿನದಲ್ಲಿ ಕಾನೂನು ಪ್ರಕ್ರಿಯೆ ಮುಗಿಸಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿತ್ತು. ಇದೀಗ ಪಂಜಾಬ್ ಪೊಲೀಸರ ಮನವಿ ಪುರಸ್ಕರಿಸಿದ ಅಜ್ನಾಲ ಕೋರ್ಟ್, ಕಿಡ್ನಾಪ್ ಆರೋಪಿಯನ್ನು ಬಿಡುಗಡೆ ಮಾಡಲು ಆದೇಶಿಸಿದೆ.
Khalistan Attack ಹಿಂದೂ ದೇಗುಲ ಧ್ವಂಸ ಬಳಿಕ ಭಾರತೀಯರ ರಾಯಭಾರ ಕಚೇರಿ ಮೇಲೆ ದಾಳಿ!
ಪಂಜಾಬ್‌ನಲ್ಲಿ ಮತ್ತೆ ಪರಿಸ್ಥಿತಿ ಹದಗೆಡುತ್ತಿದೆ. 1984ರಲ್ಲಿ ಭಾರತ ಎದಿರಿಸಿದ ಪರಿಸ್ಥಿತಿ ಮತ್ತೆ ಬಂದಿದೆ. ರಾಜಕೀಯ ಲಾಭಕ್ಕಾಗಿ ಖಲಿಸ್ತಾನಕ್ಕೆ ರಹಸ್ಯ ಬೆಂಬಲ ನೀಡಿದ ಕಾರಣಕ್ಕೆ ಉಗ್ರ ಭಿಂದ್ರನ್‌ವಾಲೆ ಖಲಿಸ್ತಾನ ಹೋರಾಟ ತೀವ್ರಗೊಳಿಸಿದ್ದ. ಅಂತಿಮವಾಗಿ ಉಗ್ರರ ಪಡೆ ಅಮೃತಸರದ ಸ್ವರ್ಣಮಂದಿರವನ್ನು ವಶಪಡಿಸಿಕೊಂಡಿತು. ದೇಗುಲದೊಳಗಿದ್ದ ಭಕ್ತರನ್ನು ಒತ್ತೆಯಾಳಾಗಿಟ್ಟುಕೊಂಡು ಹಲವು ಬೇಡಿಕೆ ಮುಂದಿಟ್ಟಿತ್ತು. ಪರಿಸ್ಥಿತಿ ಕೈಮೀರಿದ ಪರಿಣಾಮ, ಭಾರತೀಯ ಸೇನೆ ಎಂಟ್ರಿಕೊಟ್ಟಿತು. ಆಪರೇಶನ್ ಬ್ಲೂಸ್ಟಾರ್ ಹೆಸರಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿ ಖಲಿಸ್ತಾನಿ ಉಗ್ರರ ಹೆಡೆಮುರಿ ಕಟ್ಟಿತ್ತು.
ಖಲಿಸ್ತಾನ ಸಂಘಟನೆಯನ್ನು ಭಾರತದಲ್ಲಿ ನಿಷೇಧ ಮಾಡಲಾಗಿತ್ತು. ಆದರೆ ಈ ಉಗ್ರ ಸಂಘಟನೆ ಇದೀಗ ಹಲವು ಹೆಸರುಗಳಲ್ಲಿ ಭಾರತದಲ್ಲಿ ಸಕ್ರಿಯವಾಗಿದೆ. ಕೆನಡಾ, ಆಸ್ಟ್ರೇಲಿಯಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಖಲಿಸ್ತಾನ ಸಂಘಟನೆ ಹೆಸರಲ್ಲೇ ಭಾರತ ವಿರೋಧಿ ಚಟುವಟಿಕೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ರೈತರು ನಡೆಸಿದ ಹೋರಾಟದ ಹಿಂದೆ ಖಲಿಸ್ತಾನ ಉಗ್ರ ಸಂಘಟನೆ ಆರ್ಥಿಕವಾಗಿ, ನೈತಿಕವಾಗಿ ಸೇರಿದಂತೆ ಎಲ್ಲಾ ರೀತಿಯಲ್ಲೂ ಬೆಂಬಲ ಸೂಚಿಸಿತ್ತು ಅನ್ನೋ ಆರೋಪೂ ಇದೆ. ಇದೇ ರೈತರ ಹೋರಾಟ ಬೆಂಬಲಿಸಿದ ಆಮ್ ಆದ್ಮಿ ಪಾರ್ಟಿ, ಅಭೂತಪೂರ್ವ ಗೆಲುವಿನೊಂದಿಗೆ ಪಂಜಾಬ್‌ನಲ್ಲಿ ಸರ್ಕಾರ ರಚಿಸಿದೆ. ಇದೀಗ 1984ರಲ್ಲಿ ಎದುರಾಗಿದ್ದ ಹೋರಾಟದ ಕಾವು ಇದೀಗ ಮತ್ತೆ ವಕ್ಕರಿಸಿದೆ. ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ಮೋದಿಗೆ ಖಲಿಸ್ತಾನ ಉಗ್ರರು ಬೆದರಿಕೆ ಹಾಕಿದ್ದಾರೆ. ನಮ್ಮ ಹೋರಾಟ ಹತ್ತಿಕ್ಕಲು ನೋಡಿದರೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಗೆ ಆದ ಪರಿಸ್ಥಿತಿ ನಿಮಗೂ ಆಗಲಿದೆ ಎಂದಿದ್ದಾರೆ.
ಗನ್, ಖಡ್ಗ, ಆಯುಧ ಹಿಡಿದು ಖಲಿಸ್ತಾನಿ ಬೆಂಬಲಿಗರ ದಾಂಧಲೆ: ಅಮೃತಸರದಲ್ಲಿ ಠಾಣೆ ಮೇಲೆ ದಾಳಿ