Khalistan Attack ಹಿಂದೂ ದೇಗುಲ ಧ್ವಂಸ ಬಳಿಕ ಭಾರತೀಯರ ರಾಯಭಾರ ಕಚೇರಿ ಮೇಲೆ ದಾಳಿ!

ಪಂಜಾಬ್‌ನಲ್ಲಿ ಮತ್ತೆ 1984ರ ಪರಿಸ್ಥಿತಿ ವಕ್ಕರಿಸಿದೆ. ಅಂದೂ ಕೂಡ ರಾಜಕೀಯ ಲಾಭಕ್ಕಾಗಿ ಖಲಿಸ್ತಾನವನ್ನು ಪೋಷಿಸಿ ಭಾರಿ ತೆಲೆಬೇಕಾಗಿ ಬಂದಿತ್ತು. ಇದೀಗ ಅದೇ ಪರಿಸ್ಥಿತಿ ಮರುಕಳಿಸಿದೆ. ಪ್ರತ್ಯೇಕ ಖಲಿಸ್ತಾನ ರಾಷ್ಟ್ರಕ್ಕಾಗಿ ಹೋರಾಟ ಆರಂಭಗೊಂಡಿದೆ. ವ್ಯವಸ್ಥಿತವಾಗಿ ವಿಶ್ವಾದ್ಯಂತ ಈ ದಾಳಿ, ಹೋರಾಟ ನಡೆಯುತ್ತಿದೆ. ಇದೀಗ ಹಿಂದೂ ದೇಗುವ ಧ್ವಂಸಗೊಳಿಸಿದ ಬೆನ್ನಲ್ಲೇ ಭಾರತೀಯರ ರಾಯಭಾರ ಕಚೇರಿ ಮೇಲೂ ಖಲಿಸ್ತಾನ ಉಗ್ರರು ದಾಳಿ ನಡೆಸಿದ್ದಾರೆ.
 

Khliastan terror Outfit attack Consul of India office Brisbane after Temple vandalize ckm

ಅಮೃತಸರ(ಫೆ.24) ಅದು ಜೂನ್, 1984. ಭಾರತೀಯ ಸೇನೆ ಸಿಖ್‌ರ ಪವಿತ್ರ ಕ್ಷೇತ್ರ ಸ್ವರ್ಣ ಮಂದಿರದೊಳಗೆ ಸೇರಿಕೊಂಡು ಹಲವರನ್ನು ಒತ್ತೆಯಾಳಾಗಿ ಇಟ್ಟುಕೊಂಡು ಪ್ರತ್ಯೇಕ ಖಲಿಸ್ತಾನಕ್ಕೆ ಬೇಡಿಕೆ ಇಟ್ಟ ಉಗ್ರರ ಮೇಲೆ ಭಾರತೀಯ ಸೇನೆ ದಾಳಿ ಮಾಡಿತ್ತು. ಬೆಳಕು ಹರಿಯುವ ಮೊದಲೇ ಖಲಿಸ್ತಾನ ಉಗ್ರ ನಾಯಕ ಭಿಂದ್ರನ್‌ವಾಲೆ ಸೇರಿದಂತೆ ಬಹುತೇಕ ಉಗ್ರರನ್ನು ಸೇನೆ ಹತ್ಯೆ ಮಾಡಿ ಪಂಜಾಬ್‌ನಲ್ಲಿ ಶಾಂತಿ ನೆಲೆಸುವಂತೆ ಮಾಡಿತ್ತು. ಇದೀಗ ಪಂಜಾಬ್‌ನಲ್ಲಿ ಮತ್ತೆ ಖಲಿಸ್ತಾನ ಹೋರಾಟ ತೀವ್ರಗೊಂಡಿದೆ. ಹಲವೆಡೆ ದಾಳಿಯಾಗಿದೆ. ಅಮೃತಸರ ಸೇರಿದಂತೆ ಪಂಜಾಬ್‌ನ ಹಲವು ಭಾಗದಲ್ಲಿ ಪೊಲೀಸ್ ಠಾಣೆ ಮೇಲೂ ದಾಳಿಯಾಗಿದೆ. ಇತ್ತ ವ್ಯವಸ್ಥಿತವಾಗಿ ಸಂಚು ರೂಪಿಸಿರುವ ಖಲಿಸ್ತಾನ ಉಗ್ರರು, ವಿಶ್ವಾದ್ಯಂತ ಹೋರಾಟ ತೀವ್ರಗೊಳಿಸಿದ್ದಾರೆ. ಆಸ್ಟ್ರೇಲಿಯಾದ ಮೆಲ್ಬೋರ್ನ್‌ ಹಾಗೂ ಕೆನಡಾದಲ್ಲಿರುವ ಹಿಂದೂ ದೇಗುಲದ ಮೇಲಿನ ದಾಳಿ ಬಳಿಕ ಇದೀಗ ಬ್ರಿಸ್‌ಬ್ರೇನ್‌ನಲ್ಲಿರು ಭಾರತೀಯರ ರಾಯಭಾರ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.

ಭಾರತೀಯ ರಾಯಭಾರ ಅಧಿಕಾರಿ ಅರ್ಚನಾ ಸಿಂಗ್ ಈ ಕುರಿತು ಮಾಧ್ಯಮಕ್ಕೆ ಪ್ರತ್ರಿಕ್ರಿಯೆ ನೀಡಿದ್ದಾರೆ. ರಾಯಭಾರಿ ಅಧಿಕಾರಿಗಳು ಎಂದಿನಂತೆ ಕಚೇರಿಗೆ ಆಗಮಿಸುವಾಗ ಸಂಪೂರ್ಣ ಕಚೇರಿ ಮೇಲೆ ಖಲಿಸ್ತಾನ ಉಗ್ರರು (Khalistan Attack) ದಾಳಿ ಮಾಡಿದ್ದಾರೆ. ಕಚೇರಿಯಲ್ಲಿದ್ದ ಭಾರತದ ತ್ರಿವರ್ಣ ಧ್ವಜ ಕಿತ್ತೆಸೆದು ಖಲಿಸ್ತಾನ ಧ್ವಜ ಹಾಕಲಾಗಿದೆ. ವರಾಂಡ ಸೇರಿದಂತೆ ಕಚೇರಿ ಭಾಗಗಳನ್ನು ನಾಶ ಮಾಡಲಾಗಿದೆ ಎಂದು ಅರ್ಚನಾ ಸಿಂಗ್ ಹೇಳಿದ್ದಾರೆ.

ಗನ್‌, ಖಡ್ಗ, ಆಯುಧ ಹಿಡಿದು ಖಲಿಸ್ತಾನಿ ಬೆಂಬಲಿಗರ ದಾಂಧಲೆ: ಅಮೃತಸರದಲ್ಲಿ ಠಾಣೆ ಮೇಲೆ ದಾಳಿ

ಇಲ್ಲಿನ ಹಲವು ಹಿಂದೂ ದೇಗುಲದ ಮೇಲೆ ಖಲಿಸ್ತಾನ ಉಗ್ರರು (khalistan movement) ದಾಳಿ ಮಾಡಿದ್ದಾರೆ. ವ್ಯವಸ್ಥಿತವಾಗಿ ಖಲಿಸ್ತಾನ ಉಗ್ರರ ಗುಂಪು ವಿಶ್ವಾದ್ಯಂತ ದಾಳಿ ನಡೆಸುತ್ತಿದ್ದಾರೆ ಎಂದು ಅರ್ಚನಾ ಸಿಂಗ್ ಹೇಳಿದ್ದಾರೆ. ಇದೀಗ ಭಾರತಯ ರಾಯಭಾರ ಕಚೇರಿ ಸುತ್ತಲೂ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಇಷ್ಟೇ ಅಲ್ಲ ಸಿಖ್ ಸಮುದಾಯ ಹೆಚ್ಚಿರುವ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತೆ ನಿಯೋಜಿಸಲಾಗಿದೆ. 

ಕಳೆದ ತಿಂಗಳು  ಆಸ್ಪ್ರೇಲಿಯಾ ಹಾಗೂ ಕೆನಡಾದಲ್ಲಿನ ಹಿಂದೂ ದೇವಾಲಯದ ಮೇಲೆ ಭಾರತ ವಿರೋಧಿ ಬರಹ ಪತ್ತೆಯಾಗಿತ್ತು. ಗೋಡೆಯ ಮೇಲೆ ಗೀಚುಬರಹಗಳನ್ನು ಬರೆಯುವ ಮೂಲಕ ಗೌರಿ ಶಂಕರ ದೇವಾಲಯವನ್ನು ವಿರೂಪ ಮಾಡಲಾಗಿತ್ತು. ಇದು ಕಳೆದ ಜುಲೈನಿಂದ ಕೆನಡಾದ ಹಿಂದೂ ದೇವಾಲಯಗಳ ಮೇಲೆ ನಡೆಯುತ್ತಿರುವ 3ನೇ ವಿಧ್ವಂಸಕ ಕೃತ್ಯವಾಗಿದೆ. ಘಟನೆಯನ್ನು ಕೆನಡಾದ ಭಾರತೀಯ ಸಮುದಾಯದ ಜನರು ತೀವ್ರವಾಗಿ ಖಂಡಿಸಿದ್ದು ಕೃತ್ಯದ ಕುರಿತು ಅಲ್ಲಿನ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ‘ಇಂತಹ ಜನಾಂಗೀಯ ಹಾಗೂ ಧಾರ್ಮಿಕ ದ್ವೇಷಪೂರಿತ ಘಟನೆಗಳು ಕೆನಡಾದಲ್ಲಿರುವ ಭಾರತೀಯ ಮೂಲದ ಜನರಲ್ಲಿ ಭಯವನ್ನು ಹುಟ್ಟುಹಾಕಿದೆ’ ಎಂದಿದ್ದಾರೆ.

ಆಸ್ಪ್ರೇಲಿಯಾದ ಹಿಂದೂ ದೇಗುಲಕ್ಕೆ ಕರೆ ಮಾಡಿ ಭಜನೆ ನಿಲ್ಲಿಸಲು ಬೆದರಿಕೆ

ಕೆನಡಾದಲ್ಲಿ ಖಲಿಸ್ತಾನಿ ಬೆಂಬಲಿಗರಿಂದ ಭಾರತೀಯ ಸಮುದಾಯದ ಮೇಲೆ ದಾಳಿ ನಡೆಯುತ್ತಿರುವ ಬಗ್ಗೆ ಈ ಹಿಂದೆ ಭಾರತೀಯ ಅಧಿಕಾರಿಗಳು ಪ್ರಸ್ತಾಪಿಸಿದ್ದರು. ಈ ಹಿಂದೆ ಆಸ್ಪ್ರೇಲಿಯಾದ ಹಿಂದೂ ದೇವಾಲಯಗಳ ಮೇಲೂ ಖಲಿಸ್ತಾನಿಗಳು ಭಾರತ ವಿರೋಧಿ ಬರಹಗಳನ್ನು ಗೀಚಿದ್ದರು.

Latest Videos
Follow Us:
Download App:
  • android
  • ios