ಕೆನಡಾ(ಫೆ.06): ರೈತ ಪ್ರತಿಭಟನೆ ನಡುವೆ ಇದೀಗ ಹಲವು ಸಂಘಟನೆಗಳು ಸೇರಿಕೊಂಡಿದೆ. ದೆಹಲಿ ಹಾಗೂ ದೇಶಾದ್ಯಂತ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ 41 ರೈತ ಸಂಘಟನೆಗಳು ಎದುರಿಗೆ ಕುಳಿತು ಪ್ರತಿಭಟನೆ ಮಾಡುತ್ತಿದ್ದರೆ, ಇದರ ನಡುವೆ ಹಲವು ನಿಷೇಧಿತ ಸಂಘಟನೆಗಳು ಸೇರಿಕೊಂಡು ಹೋರಾಟ ತೀವ್ರಗೊಳಿಸಿದೆ. ಪ್ರಮುಖವಾಗಿ ಖಲಿಸ್ತಾನಿ ಸಿಖ್ ಸಂಘಟನೆ ಭಾರತ ಒಡೆಯುವ ಕೆಲಸಕ್ಕೆ ಕೈಹಾಕಿದೆ. ಇದೀಗ ಈ ಖಲಿಸ್ತಾನ್ ಸಂಘಟನೆ ವಿರುದ್ಧ ಸಿಖ್ ಸಮುದಾಯ ಹೋರಾಟ ಆರಂಭಿಸಿದೆ.

ರೈತ ಪ್ರತಿಭಟನೆ ನಡುವೆ ಸೇರಿಕೊಂಡ ಖಲಿಸ್ತಾನಕ್ಕೆ ಪಾಕ್ ಬಹಿರಂಗ ಬೆಂಬಲ; ವೈರಲ್ ವಿಡಿಯೋ!

ಕೆನಡದಲ್ಲಿ ಭಾರತದ ರೈತ ಹೋರಾಟಕ್ಕೆ ಬೆಂಬಲ ಸೂಚಿಸಿ ಹಲವು ಪ್ರತಿಭಟನೆಗಳನ್ನು ಖಲಿಸ್ತಾನ ಸಂಘಟನ ಆಯೋಜಿಸಿದೆ. ಇದೀಗ ಈ ಖಲಿಸ್ತಾನ ಕುತಂತ್ರದ ವಿರುದ್ಧ ಕೆನಡಾದಲ್ಲಿ ಸಿಖ್ ಸಮುದಾಯ ತಿರಂಗ ರ‍್ಯಾಲಿ ಆಯೋಜಿಸಿದೆ. ಕೆನಡಾದಲ್ಲಿ ಆಯೋದಿಸಿದ ತಿರಂಗ ರ‍್ಯಾಲಿಯಲ್ಲಿ ಸಾವಿರಾರು ಸಿಖ್‌ರು ತಮ್ಮ ವಾಹನಗಳಿಗೆ ತಿರಂಗ ಧ್ವಜ ಕಟ್ಟಿ ರ‍್ಯಾಲಿ ಮಾಡಿದ್ದಾರೆ.

 

ನಮ್ಮ ಹೋರಾಟ ಖಲಿಸ್ತಾನದ ವಿರುದ್ಧವಾಗಿದೆ. ಭಾರತವನ್ನು ಒಡೆಯಲು ನಾವು ಅವಕಾಶ ನೀಡುವುದಿಲ್ಲ. ಭಾರತದೊಂದಿದೆ ಸಿಖ್ ಎಂಬ ಘೋಷವಾಕ್ಯಗಳೊಂದಿಗೆ ಪ್ರತಿಭಟನೆ ಆರಂಭಿಸಿದ್ದಾರೆ. ಖಲಿಸ್ತಾನ ಬೇಡವೇ ಬೇಡ, ರೈತರು ಕುತಂತ್ರ ಅರ್ಥ ಮಾಡಿಕೊಳ್ಳಬೇಕು ಎಂದು ಕೆನಡಾ ಸಿಖ್ ಸಮುದಾಯ ಮನವಿ ಮಾಡಿದೆ. 

ತಿರಂಗ ಪ್ರತಿಭಟನೆ ಯಾವುದೇ ಪಕ್ಷದ ಪರ ಅಲ್ಲ. ಇದು ಭಾರತಕ್ಕಾಗಿ, ಐಕ್ಯ ಭಾರತಕ್ಕಾಗಿ ಆಯೋಜಿಸಿದ ಪ್ರತಿಭಟನೆ ಎಂದು ಕೆನಡಾ ಸಿಖ್ ಸಮುದಾಯ ಸ್ಪಷ್ಟಪಡಿಸಿದೆ.