* ಬ್ಲ್ಯಾಕ್‌ ಫಂಗಸ್‌ಗೆ ಮತ್ತೆ 5 ಜನ ಸಾವು* ವೈಟ್‌ ಫಂಗಸ್‌ ಸೋಂಕು: ರಾಜ್ಯದಲ್ಲಿ ಮೊದಲ ಬಲಿ?* ಬೆಳಗಾವಿಯಲ್ಲಿ 2 ಸಾವು: ಬಿಳಿ ಶಿಲೀಂಧ್ರ ಶಂಕೆ

ಬೆಳಗಾವಿ(ಮೇ.24): ರಾಯಚೂರಿನಲ್ಲಿ ರಾಜ್ಯದ ಮೊದಲ ವೈಟ್‌ ಫಂಗಸ್‌ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಇದೀಗ ಬೆಳಗಾವಿಯಲ್ಲಿ ಇಬ್ಬರು ಶಂಕಿತ ವೈಟ್‌ ಫಂಗಸ್‌ ಸೋಂಕಿತರು ಮೃತಪಟ್ಟಿರುವ ಪ್ರಕರಣ ವರದಿಯಾಗಿದೆ. ಒಂದು ವೇಳೆ ಇದು ದೃಢಪಟ್ಟಿದ್ದೇ ಆದಲ್ಲಿ ವೈಟ್‌ ಫಂಗಸ್‌ಗೆ ಮೃತಪಟ್ಟದೇಶದ ಮೊದಲ ಪ್ರಕರಣವಾಗಲಿದೆ.

ಈ ಬಗ್ಗೆ ಕನ್ನಡಪ್ರಭದೊಂದಿಗೆ ಮಾತನಾಡಿರುವ ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್‌.ವಿ.ಮುನ್ಯಾಳ, ಗೋಕಾಕ ಮತ್ತು ಅಥಣಿಯಲ್ಲಿ ಕೊರೋನಾ ಸೋಂಕಿನಿಂದ ಗುಣವಾಗಿರುವ 70 ವರ್ಷ ಮೇಲ್ಪಟ್ಟಇಬ್ಬರು ವೈಟ್‌ ಫಂಗಸ್‌ನಿಂದ ಮೃತಪಟ್ಟಿದ್ದಾರೆಂದು ಶಂಕಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಅವರು ಹೆಚ್ಚಿನ ವಿವರಣೆ ನೀಡಿಲ್ಲ. ಶನಿವಾರವಷ್ಟೇ ರಾಯಚೂರಿನಲ್ಲಿ 6 ವೈಟ್‌ ಫಂಗಸ್‌ ಕೇಸ್‌ಗಳು ಪತ್ತೆಯಾಗಿದ್ದವು.

ಗುಪ್ತಾಂಗ, ಚರ್ಮ, ಮೆದುಳಿಗೆ ಹಾನಿ, ಬ್ಲ್ಯಾಕ್ ಫಂಗಸ್‌ಗಿಂತಲೂ ಡೇಂಜರ್ ಈ ವೈಟ್‌ ಫಂಗಸ್!

ಬ್ಲ್ಯಾಕ್‌ ಫಂಗಸ್‌ಗೆ ಮತ್ತೆ 5 ಜನ ಸಾವು 

ಬ್ಲ್ಯಾಕ್‌ ಫಂಗಸ್‌ ಸೋಂಕಿನಿಂದ ಭಾನುವಾರ ರಾಜ್ಯದಲ್ಲಿ ಐವರು ಮರಣ ಹೊಂದಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಮೂರು ಸಾವನ್ನಪ್ಪಿದ್ದಾರೆ. ಆದರೆ ಜಿಲ್ಲಾಡಳಿತ ಒಬ್ಬರು ಮಾತ್ರ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದೆ. ಇನ್ನು ತುಮಕೂರು ಜಿಲ್ಲೆಯಲ್ಲಿ ಇಬ್ಬರು ಜೀವ ತೆತ್ತಿದ್ದಾರೆ. ಬೆಂಗಳೂರಿನಲ್ಲಿ 90 ಮಂದಿ ಸೇರಿದಂತೆ ರಾಜ್ಯದ ವಿವಿಧೆಡೆ ಭಾನುವಾರ ಒಟ್ಟು 154 ಜನರಲ್ಲಿ ಬ್ಲ್ಯಾಕ್‌ ಫಂಗಸ್‌ ಸೋಂಕು ಕಾಣಿಸಿಕೊಂಡಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona