ಕೇರಳದಲ್ಲಿ 65000 ಕೋಟಿ ಮೌಲ್ಯದ ಮದ್ಯ ಮಾರಾಟ| ಬಳಕೆ ಕಡಿತಕ್ಕೆ ಪ್ರೋತ್ಸಾಹ ಹೊರತಾಗಿಯೂ ಬಳಕೆ ಏರಿಕೆ
ಕೊಚ್ಚಿ(ಮಾ.15): ಕೇರಳದಲ್ಲಿ 5 ವರ್ಷದ ಹಿಂದಕ್ಕೆ ಅಧಿಕಾರಕ್ಕೆ ಬಂದಿದ್ದೆ ಎಲ್‌ಡಿಎಫ್ ಸರ್ಕಾರ, ಜನರಲ್ಲಿ ಮದ್ಯ ಬಳಕೆ ಪ್ರಮಾಣ ಇಳಿಕೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿತ್ತು. ಆದರೆ ಅದು ಪೂರ್ಣ ಉಲ್ಟಾಆಗಿದೆ. ರಾಜ್ಯದಲ್ಲಿ ಕಳೆದ 5 ವರ್ಷದಲ್ಲಿ ಭರ್ಜರಿ 65000 ಕೋಟಿ ರು. ಮೌಲ್ಯದ ಮದ್ಯ ಮಾರಾಟವಾಗಿದೆ. ಕೇರಳದ ವಾರ್ಷಿಕ ಆದಾಯ 65000 ಕೋಟಿ ರು.ನಷ್ಟಿದೆ. ಆ ಲೆಕ್ಕವನ್ನು ಗಮನಿಸಿದಾಗ ರಾಜ್ಯದಲ್ಲಿ ಮದ್ಯ ಬಳಕೆಯ ಅಗಾದತೆ ಕಂಡುಬರುತ್ತದೆ.
ಜಾಗತಿಕ ಆರ್ಥಿಕ ಹಿಂಜರಿತ, ಕೋವಿಡ್ ಸಂಕಷ್ಟ, ಉದ್ಯೋಗ ಕುಸಿತದ ಸಮಸ್ಯೆಗಳು ಕೇರಳದಲ್ಲಿ ಮದ್ಯ ಮಾರಾಟದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರಿಲ್ಲ. ಈ ಹಿಂದಿನ ಸಿಎಂ ಊಮ್ಮನ್ ಚಾಂಡಿ ನೇತೃತ್ವದ ಸರ್ಕಾರದ 5 ವರ್ಷದ ಅವಧಿಗೆ ಹೋಲಿಸಿದರೆ ಪಿ.ವಿಜಯನ್ ಸರ್ಕಾರದ ಅವಧಿಯಲ್ಲಿ ಮದ್ಯ ಮಾರಾಟದಲ್ಲಿ 17000 ಕೋಟಿ ರು.ನಷ್ಟು ಹೆಚ್ಚಳ ಕಂಡುಬಂದಿದೆ.
ಹಿಂದಿನ ಯುಡಿಎಫ್ ಸರ್ಕಾರದ ಅವಧಿಯಲ್ಲಿ ಮುಚ್ಚಲಾಗಿದ್ದ ಲಿಕ್ಕರ್ ಶಾಪ್‌ಗಳನ್ನು ಎಲ್‌ಡಿಎಫ್ ಸರ್ಕಾರ ಪುನಾರಂಭಿಸಿತ್ತು. ಅಕ್ರಮ ಮದ್ಯ ಮಾರಾಟ ತಡೆಯಲು ಕೈಗೊಂಡ ಈ ಕ್ರಮವು, ಒಟ್ಟಾರೆ ಮಾರಾಟದಲ್ಲಿ ಏರಿಕೆಗೂ ಕಾರಣವಾಗಿದೆ.
