ಕೇರಳದ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಂಡಿದ್ದು, ಬಹುತೇಕ ಎಲ್ಲಾ ಸಮೀಕ್ಷೆಗಳ ಪ್ರಕಾರ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಆಡಳಿತಾರೂಢ ಪಿಣರಾಯಿ ವಿಜಯನ್‌ ನೇತೃತ್ವದ ಎಲ್‌ಡಿಎಫ್ ಅಧಿಕಾರ ಕಳೆದುಕೊಳ್ಳಲಿದೆ ಎನ್ನಲಾಗಿದೆ.

ತಿರುವನಂತಪುರಂ (ಏ.29): ಪಶ್ಚಿಮ ಬಂಗಾಳದ ಅಂತಿಮ ಹಂತದ ಮತದಾನ ಮುಕ್ತಾಯವಾಗುತ್ತಿದ್ದಂತೆ ಮೊದಲ ಹಂತದಲ್ಲಿ ನಡೆದಿfದದ ಕೇರಳದ ಚುನಾವಣೋತ್ತರ ಸಮೀಕ್ಷೆಗಳು ಕೂಡ ಪ್ರಕಟಗೊಂಡಿವೆ. ಬಹುತೇಕ ಎಲ್ಲಾ ಪ್ರಮುಖ ಸಮೀಕ್ಷೆಗಳ ಪ್ರಕಾರ, ಕೇರಳದಲ್ಲಿ ಈ ಬಾರಿ ಆಡಳಿತಾರೂಢ ಪಿಣರಾಯಿ ವಿಜಯನ್‌ ನೇತೃತ್ವದ ಎಲ್‌ಡಿಎಫ್ (LDF) ಅಧಿಕಾರ ಕಳೆದುಕೊಳ್ಳಲಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಕೇರಳ ವಿಧಾನಸಭೆಯ ಒಟ್ಟು 140 ಸ್ಥಾನಗಳಲ್ಲಿ ಬಹುಮತಕ್ಕೆ 70 ಸ್ಥಾನಗಳ ಅಗತ್ಯವಿದೆ.

Add Asianetnews Kannada as a Preferred SourcegooglePreferred

ದೇಶದ ಪ್ರಮುಖ ಸಮೀಕ್ಷಾ ಸಂಸ್ಥೆಗಳ ವಿವರ

1. ಅಕ್ಸಿಸ್ ಮೈ ಇಂಡಿಯಾ (Axis My India)

ಯುಡಿಎಫ್‌ಗೆ ಅತಿ ದೊಡ್ಡ ಬಹುಮತವನ್ನು ಈ ಸಮೀಕ್ಷೆ ಭವಿಷ್ಯ ನುಡಿದಿದೆ. ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ 78-90 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ತಿಳಿಸಿದೆ.

  • ಯುಡಿಎಫ್ (UDF): 78-90 ಸ್ಥಾನಗಳು
  • ಎಲ್‌ಡಿಎಫ್ (LDF): 49-62 ಸ್ಥಾನಗಳು
  • ಬಿಜೆಪಿ+ (BJP+): 0-3 ಸ್ಥಾನಗಳು

2. ಪೀಪಲ್ಸ್ ಪಲ್ಸ್ (Peoples Pulse / NDTV)

ಈ ಸಮೀಕ್ಷೆಯು ಕೂಡ ಯುಡಿಎಫ್ ಸುಲಭವಾಗಿ ಅಧಿಕಾರ ಹಿಡಿಯುವುದನ್ನು ಖಚಿತಪಡಿಸಿದೆ.

  • ಯುಡಿಎಫ್ (UDF): 75-85 ಸ್ಥಾನಗಳು
  • ಎಲ್‌ಡಿಎಫ್ (LDF): 55-65 ಸ್ಥಾನಗಳು
  • ಬಿಜೆಪಿ+ (BJP+): 0-3 ಸ್ಥಾನಗಳು
  • ಇತರೆ: 0

3. ಪಿ-ಮಾರ್ಕ್ (P-MARQ)

ಪಿ-ಮಾರ್ಕ್ ಪ್ರಕಾರ ಯುಡಿಎಫ್ ಮ್ಯಾಜಿಕ್ ನಂಬರ್ ದಾಟಲಿದೆ.

  • ಯುಡಿಎಫ್ (UDF): 71-79 ಸ್ಥಾನಗಳು
  • ಎಲ್‌ಡಿಎಫ್ (LDF): 62-69 ಸ್ಥಾನಗಳು
  • ಬಿಜೆಪಿ+ (BJP+): 1-4 ಸ್ಥಾನಗಳು
  • ಇತರೆ: 0-3 ಸ್ಥಾನಗಳು

4. ಮ್ಯಾಟ್ರಿಜ್ (Matrize)

ಮ್ಯಾಟ್ರಿಜ್ ಸಮೀಕ್ಷೆಯು ಯುಡಿಎಫ್‌ಗೆ ಸರಳ ಬಹುಮತದ ಮುನ್ಸೂಚನೆ ನೀಡಿದೆ.

  • ಯುಡಿಎಫ್ (UDF): 70-75 ಸ್ಥಾನಗಳು
  • ಎಲ್‌ಡಿಎಫ್ (LDF): 60-65 ಸ್ಥಾನಗಳು
  • ಬಿಜೆಪಿ+ (BJP+): 3-5 ಸ್ಥಾನಗಳು
  • ಇತರೆ: 2-4 ಸ್ಥಾನಗಳು

Poll of Exit Polls

ಎಲ್ಲಾ ಪ್ರಮುಖ ಸಮೀಕ್ಷೆಗಳ ಸರಾಸರಿಯನ್ನು ಗಮನಿಸಿದರೆ ಕೇರಳದ ಚಿತ್ರಣ ಹೀಗಿದೆ:

  • ಯುಡಿಎಫ್ (UDF): 77 (ಸ್ಪಷ್ಟ ಬಹುಮತ)
  • ಎಲ್‌ಡಿಎಫ್ (LDF): 60
  • ಬಿಜೆಪಿ+ (BJP+): 02
  • ಇತರೆ: 01

ಸಮೀಕ್ಷೆಗಳ ಪ್ರಕಾರ ಕೇರಳದ ಮತದಾರ ಈ ಬಾರಿ 'ಬದಲಾವಣೆ'ಗೆ ನಾಂದಿ ಹಾಡಿದ್ದಾನೆ. ಕಳೆದ ಚುನಾವಣೆಯಲ್ಲಿ ಸತತ ಎರಡನೇ ಬಾರಿ ಅಧಿಕಾರ ಹಿಡಿದು ಇತಿಹಾಸ ಬರೆದಿದ್ದ ಎಲ್‌ಡಿಎಫ್‌ಗೆ ಈ ಬಾರಿ ಆಡಳಿತ ವಿರೋಧಿ ಅಲೆ ತಟ್ಟಿರುವ ಸಾಧ್ಯತೆಯಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭರ್ಜರಿ ಪುನರಾಗಮನ ಮಾಡುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಬಿಜೆಪಿಯು 0-5 ಸ್ಥಾನಗಳ ನಡುವೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದೆ. ಅಂತಿಮವಾಗಿ ಮೇ 4ರಂದು ಹೊರಬೀಳಲಿರುವ ಅಧಿಕೃತ ಫಲಿತಾಂಶವು ಈ ಸಮೀಕ್ಷೆಗಳನ್ನು ನಿಜವಾಗಿಸುತ್ತದೆಯೇ ಎಂದು ಕಾದು ನೋಡಬೇಕಿದೆ.

ಸೂಚನೆ: ಎಕ್ಸಿಟ್ ಪೋಲ್‌ಗಳು ತಮ್ಮ ಮತ ಚಲಾಯಿಸಿದ ನಂತರ ಪೋಲಿಂಗ್ ಬೂತ್‌ಗಳಿಂದ ಹೊರಬಂದ ಜನರ ನಡುವೆ ನಡೆಸಿದ ಸಮೀಕ್ಷೆಗಳನ್ನು ಆಧರಿಸಿವೆ. ಎಕ್ಸಿಟ್ ಪೋಲ್‌ಗಳು ಮತದಾರರ ಒಲವನ್ನು ಊಹಿಸುವ ಗುರಿಯನ್ನು ಹೊಂದಿವೆ, ಆದರೆ ಅವುಗಳ ಮುನ್ಸೂಚನೆಗಳು ತಪ್ಪಾಗುವ ಸಾಧ್ಯತೆಯೂ ಇರುತ್ತದೆ.