Asianet Suvarna News Asianet Suvarna News

ಯೂಟ್ಯೂಬ್ ನೋಡಿ ಬಾಲಕನ ಕಿತಾಪತಿ: ಅಗ್ನಿಶಾಮಕ ಸಿಬ್ಬಂದಿ ಕರೆಸಿದ ವೈದ್ಯರು

ಯುಟ್ಯೂಬ್ ನೋಡಿ ಬಾಲಕ ಮಾಡಿದ ಕಿತಾಪತಿಯಿಂದ ಅಗ್ನಿಶಾಮಕ ಸಿಬ್ಬಂದಿಯೇ ಮನೆಗೆ ಬರುವಂತಾದ ಘಟನೆ ಕೇರಳದ ಕೋಜಿಕೋಡ್‌ನಲ್ಲಿ ನಡೆದಿದೆ.

Kerala youth put ring into private part after watching youtube channel akb
Author
First Published Dec 13, 2022, 3:58 PM IST

ಕೋಜಿಕೋಡ್: ಯುಟ್ಯೂಬ್ ನೋಡಿ ಬಾಲಕ ಮಾಡಿದ ಕಿತಾಪತಿಯಿಂದ ಅಗ್ನಿಶಾಮಕ ಸಿಬ್ಬಂದಿಯೇ ಮನೆಗೆ ಬರುವಂತಾದ ಘಟನೆ ಕೇರಳದ ಕೋಜಿಕೋಡ್‌ನಲ್ಲಿ ನಡೆದಿದೆ. 10ನೇ ತರಗತಿ ಬಾಲಕನೋರ್ವ ಯೂಟ್ಯೂಬ್ ಚಾನೆಲ್ ನೋಡಿ ತನ್ನ ದೇಹದ ಖಾಸಗಿ ಅಂಗಕ್ಕೆ ರಿಂಗ್‌ನ್ನು ಹಾಕಿದ್ದು, ಅದು ಅಲ್ಲೇ ಸಿಲುಕಿಕೊಂಡ ಪರಿಣಾಮ ಅಪಾಯಕ್ಕೊಳಗಾದ ಘಟನೆ ದೇವರನಾಡು ಕೇರಳದಲ್ಲಿ ನಡೆದಿದೆ. ಫೆರೊಕ್‌ ನಿವಾಸಿಯಾದ ಈ ಬಾಲಕ 10ನೇ ತರಗತಿಯಲ್ಲಿ ಓದುತ್ತಿದ್ದು, ಯೂಟ್ಯೂಬ್ ಚಾನೆಲ್ ನೋಡಿಕೊಂಡು ತನ್ನ ಮರ್ಮಾಂಗಕ್ಕೆ ರಿಂಗ್ ಹಾಕಿಕೊಂಡಿದ್ದಾನೆ. 

ನಂತರ ಬಾಲಕನ ಮನೆಯವರು ಆತನ ಮರ್ಮಾಂಗದಲ್ಲಿ (Private Part) ಸಿಲುಕಿಕೊಂಡಿದ್ದ ರಿಂಗ್‌ ಅನ್ನು ತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ ಅವರ ಪ್ರಯತ್ನ ವಿಫಲವಾದಾಗ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ವೈದ್ಯರು ಅಗ್ನಿಶಾಮಕ ಸಿಬ್ಬಂದಿಗೆ (Fire personel) ಕರೆ ಮಾಡಿ ಬಾಲಕನ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ನಂತರ ಅಲ್ಲಿಗೆ ಬಂದ ಅಗ್ನಿಶಾಮಕ ಸಿಬ್ಬಂದಿ ಕಟ್ಟರ್ ಸಾಧನ ಬಳಸಿ ಬಾಲಕನ ಮರ್ಮಾಂಗದಲ್ಲಿ ಸಿಲುಕಿದ್ದ ರಿಂಗ್ ಅನ್ನು ತುಂಡು ಮಾಡಿ ಬಾಲಕನನ್ನು ಅಪಾಯದಿಂದ ಪಾರು ಮಾಡಿದ್ದಾರೆ. 

ರಿಂಗ್ ಸಿಲುಕಿದ್ದ ಪರಿಣಾಮ ಬಾಲಕನ ಮರ್ಮಾಂಗದಲ್ಲಿ ಊತ ಕಾಣಿಸಿಕೊಂಡಿತ್ತು. ಬಳಿಕ ವೈದ್ಯರು ನೀರು ಸಿರಿಂಜ್ ಬಳಸಿ ಮರ್ಮಾಂಗದಿಂದ ನೀರನ್ನು ಹೊರತೆಗೆದಿದ್ದಾರೆ. ನಂತರ ವೈದ್ಯರ ನಿರ್ದೇಶನದಲ್ಲಿ ಅಗ್ನಿಶಾಮಕ ಸಿಬ್ಬಂದಿ ರಿಂಗ್ ಅನ್ನು ತುಂಡರಿಸಿ ತೆಗೆದಿದ್ದಾರೆ. ಆಸ್ಪತ್ರೆಯ ಮೂಲಗಳ ಪ್ರಕಾರ ಬಾಲಕ ಯೂಟ್ಯೂಬ್ ಚಾನಲ್‌ನಲ್ಲಿ ವಿಡಿಯೋ ನೋಡುತ್ತಾ ಶನಿವಾರ ಸಂಜೆ ಈ ಕಿತಾಪತಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ. 

ಕೆಲ ದಿನಗಳ ಹಿಂದೆ ವಿದ್ಯಾರ್ಥಿಯೊಬ್ಬ ರೈಲು ಹಳಿಯಲ್ಲಿ ಸೆಲ್ಫಿ ತೆಗೆಯಲು ಹೋಗಿ ವಿದ್ಯುತ್ ಆಘಾತಕ್ಕೆ ಒಳಗಾದ ಘಟನೆ ಹುಬ್ಬಳ್ಳಿಯ ಶಿರಡಿ ನಗರದಲ್ಲಿ ನಡೆದಿತ್ತು. ರೈಲ್ವೆ ಹಳಿಯಲ್ಲಿ ಸೆಲ್ಪಿ ತೆಗೆದುಕೊಳ್ಳುವ ಸಮಯದಲ್ಲಿ ಈ ಘಟನೆ ನಡೆದಿತ್ತು. ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ಪಸರಿಸಿದ್ದರಿಂದ ಬಟ್ಟೆಗೆ ಬೆಂಕಿ ಹತ್ತಿಕೊಂಡು ದೇಹಕ್ಕೆ ಆವರಿಸಿತ್ತು. ನಂತರ ಆತನನ್ನು ಚಿಕಿತ್ಸೆಗಾಗಿ ಕಿಮ್ಸ್‌ಗೆ ದಾಖಲಿಸಲಾಗಿತ್ತು. 

ಸೇಲ್ಫಿ ಗೀಳಿಗೆ ಬಿದ್ದಿದ್ದ ವಿದ್ಯಾರ್ಥಿ ಅಪಾಯಕಾರಿ ಸ್ಥಳದಲ್ಲಿ ನಿಂತು ಸೆಲ್ಫಿ ತೆಗೆದುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದ. ಅಲ್ಲಿ ಬರುವ ರಿಯಾಕ್ಷನ್‌ಗಳಿಗೆ ಪ್ರಚೋದನೆಗೊಂಡು ಅಪಾಯಕಾರಿ ಸ್ಥಳಗಳನ್ನು ಆಯ್ದುಕೊಳ್ಳುತ್ತಿದ್ದ. ಇಂತಹ ವಿದ್ಯಾರ್ಥಿ ಕಣ್ಣಿಗೆ ಇತ್ತೀಚೆಗೆ ಬಿದ್ದಿದ್ದು, ಶಿರಡಿ ನಗರದ ರೈಲು ಹಳಿ. ಹೇಳಿಕೇಳಿ ಇದು ಅಪಾಯಕಾರಿ ಸ್ಥಳ. ಹೈಟೆನ್ಷನ್ ವಿದ್ಯುತ್ ಹರಿಯುತ್ತದೆ. ಇಂತಹ ಸ್ಥಳದಲ್ಲಿ ಸೆಲ್ಫಿ ತೆಗೆಯಲು ಹೋಗಿದ್ದ ವಿದ್ಯಾರ್ಥಿ ಸೆಲ್ಫಿ ತೆಗೆಯುವ ವೇಳೆ ವಿದ್ಯುತ್ ತಗುಲಿದೆ. ವಿದ್ಯುತ್ ಸ್ಪರ್ಶದಿಂದ ಮರ್ಮಾಂಗ ಸುಟ್ಟುಹೋಗಿದೆ. 

ಪೋನ್‌ನಲ್ಲಿ ಮಾತಾಡ್ಬೇಡ ಅಂದಿದ್ದೆ ತಪ್ಪಾಯ್ತು..ಗಂಡನ ಖಾಸಗಿ ಅಂಗವನ್ನೇ ಕತ್ತರಿಸಿದ ಪತ್ನಿ!

ಆಪ್‌ ವಿರುದ್ದ ದೂರು ವಾಪಸ್‌ಗೆ ಒತ್ತಾಯ; ನನ್ನ ಮರ್ಮಾಂಗದ ಮೇಲೆ ಜೈಲು ಸಿಬ್ಬಂದಿ ಹಲ್ಲೆ: ಸುಖೇಶ್ ಚಂದ್ರಶೇಖರ್‌

Follow Us:
Download App:
  • android
  • ios