ಆಪ್‌ ವಿರುದ್ದ ದೂರು ವಾಪಸ್‌ಗೆ ಒತ್ತಾಯ; ನನ್ನ ಮರ್ಮಾಂಗದ ಮೇಲೆ ಜೈಲು ಸಿಬ್ಬಂದಿ ಹಲ್ಲೆ: ಸುಖೇಶ್ ಚಂದ್ರಶೇಖರ್‌

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರ ವಿರುದ್ಧದ ದೂರನ್ನು ಹಿಂತೆಗೆದುಕೊಳ್ಳುವಂತೆ ನಿರಂತರ ಬೆದರಿಕೆ ಮತ್ತು ಒತ್ತಡವನ್ನು ಆರೋಪಿಸಿ ತನ್ನನ್ನು ಮತ್ತು ತನ್ನ ಪತ್ನಿಯನ್ನು ದೆಹಲಿಯಿಂದ ಬೇರೆ ಯಾವುದಾದರೂ ಜೈಲಿಗೆ ವರ್ಗಾಯಿಸುವಂತೆ ಸುಖೇಶ್‌ ಚಂದ್ರಶೇಖರ್‌ ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ಗೆ ಮನವಿ ಮಾಡಿದ್ದಾರೆ. 

jail officials pressurising to withdraw complaints against aap crpf men assaulted me conman sukesh to lg ash

ಇತ್ತೀಚೆಗೆ ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ (Delhi Lieutenant Governor) ಅವರಿಗೆ ಪತ್ರ ಬರೆಯುವ ಮೂಲಕ ವಂಚಕ ಸುಖೇಶ್‌ ಚಂದ್ರಶೇಖರ್‌ (Sukesh Chandrashekhar) ಸುದ್ದಿಯಾಗಿದ್ದರು. ರಾಜ್ಯಸಭಾ ಸ್ಥಾನಕ್ಕೆ (Rajya Sabha Seat) ಎಎಪಿಗೆ (AAP) 50 ಕೋಟಿ ರೂ. ಕೊಟ್ಟಿದ್ದೆ. ಜೈಲಿನಲ್ಲಿರಲು ಸಹ ದೆಹಲಿ ಸಚಿವ ಸತ್ಯೇಂದ್ರ ಜೈನ್‌ (Satyendra Jain), ಜೈಲಾಧಿಕಾರಿ ಸೇರಿ ಹಲವರಿಗೆ ಹಣ ಕೊಟ್ಟಿದ್ದೆ ಎಂದು ದೂರು ನೀಡಿದ್ದರು. ಅಲ್ಲದೆ, ಇದೇ ಕಾರಣಕ್ಕೆ ತಿಹಾರ್ ಜೈಲಿನಿಂದ (Tihar Jail) ವರ್ಗಾವಣೆ ಮಾಡಿಸಿಕೊಂಡಿದ್ದೆ ಎಂದೂ ಹೇಳಿದ್ದರು. ಈಗ, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್‌ ಕುಮಾರ್‌ ಸಕ್ಸೇನಾ ಅವರಿಗೆ ಬರೆದ ಮತ್ತೊಂದು ಪತ್ರದಲ್ಲಿ, ಬಂಧಿತ ವಂಚಕ ಹಾಗೂ ಬಾಲಿವುಡ್‌ ಜಾಕ್ವೆಲಿನ್‌ ಫರ್ನಾಂಡೀಸ್‌ (Jacqueline Fernandez) ಎಕ್ಸ್‌ ಬಾಯ್‌ ಫ್ರೆಂಡ್‌ ಎಂದು ಹೇಳಲಾದ ಸುಖೇಶ್‌ ಚಂದ್ರಶೇಖರ್‌,  ಮಂಡೋಲಾ ಜೈಲಿನೊಳಗೆ ಸಿಆರ್‌ಪಿಎಫ್ (CRPF) ಸಿಬ್ಬಂದಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರ ವಿರುದ್ಧದ ದೂರನ್ನು ಹಿಂತೆಗೆದುಕೊಳ್ಳುವಂತೆ ನಿರಂತರ ಬೆದರಿಕೆ ಮತ್ತು ಒತ್ತಡವನ್ನು ಆರೋಪಿಸಿ ತನ್ನನ್ನು ಮತ್ತು ತನ್ನ ಪತ್ನಿಯನ್ನು ದೆಹಲಿಯಿಂದ ಬೇರೆ ಯಾವುದಾದರೂ ಜೈಲಿಗೆ ವರ್ಗಾಯಿಸುವಂತೆ ಸುಖೇಶ್‌ ಚಂದ್ರಶೇಖರ್‌ ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ಗೆ ಮನವಿ ಮಾಡಿದ್ದಾರೆ. 

ಇದನ್ನು ಓದಿ: ಜೈಲಿನಲ್ಲಿ ಸುರಕ್ಷಿತವಾಗಿರಲು AAP ನಾಯಕ ಸತ್ಯೇಂದ್ರ ಜೈನ್‌ಗೆ 10 ಕೋಟಿ ನೀಡಿದ್ದೆ: ಸುಖೇಶ್‌ ಚಂದ್ರಶೇಖರ್‌
 
ಎಎಪಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ದೆಹಲಿ ಸಚಿವರಾದ ಸತ್ಯೇಂದ್ರ ಜೈನ್ ಮತ್ತು ಕೈಲಾಶ್ ಗೆಹ್ಲೋಟ್ ವಿರುದ್ಧ ದಾಖಲಾಗಿರುವ ದೂರುಗಳನ್ನು ಹಿಂಪಡೆಯಲು ನಿರಂತರ ಬೆದರಿಕೆ ಮತ್ತು ಒತ್ತಡವನ್ನು ಎದುರಿಸುತ್ತಿದ್ದೇನೆ. ಅದರ ಜತೆಗೆ, ಆರ್ಥಿಕ ಅಪರಾಧ ವಿಭಾಗ ಮತ್ತು ಜಾರಿ ನಿರ್ದೇಶನಾಲಯಕ್ಕೆ ನೀಡಿರುವ ಬಹಿರಂಗ ಒಪ್ಪಿಗೆಗಳಿಂದ ಹಿಂದೆ ಸರಿಯುತ್ವಂತೆಯೂ ಒತ್ತಡ ಹೇರುತ್ತಿದ್ದಾರೆ ಎಂದು ಸುಖೇಶ್‌ ಚಂದ್ರಶೇಖರ್ ವಿನಯ್ ಕುಮಾರ್‌ ಸಕ್ಸೇನಾ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ಸಿಆರ್‌ಪಿಎಫ್ ಸಿಬ್ಬಂದಿ ತನ್ನ ಮೇಲೆ ಹಲ್ಲೆ ನಡೆಸಿದ್ದು, ಇದರಿಂದ ತನ್ನ ಜನನಾಂಗದ ಭಾಗಕ್ಕೆ ತೀವ್ರ ಗಾಯವಾಗಿದೆ ಎಂದೂ ವಂಚಕ ಸುಖೇಶ್‌ ಚಂದ್ರಶೇಖರ್‌ ಆರೋಪಿಸಿದ್ದಾರೆ.
ಅಲ್ಲದೆ, ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ಮತ್ತು ಗುರು ತೇಜ್‌ ಬಹದ್ದೂರ್ ಆಸ್ಪತ್ರೆಯಲ್ಲಿ ತಮ್ಮ ಕಕ್ಷಿದಾರರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಚಂದ್ರಶೇಖರ್ ಪರ ವಕೀಲರು ಸಹ ತಿಳಿಸಿದ್ದಾರೆ. ಹಾಗೂ, ನೋವು ಕಡಿಮೆ ಮಾಡಲು ಸ್ಕ್ರೋಟಲ್ ಸಪೋರ್ಟ್ ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕೇಜ್ರಿವಾಲ್‌ಗೆ ರಾಜ್ಯಸಭೆ ಸ್ಥಾನಕ್ಕಾಗಿ 50 ಕೋಟಿ ಕೊಟ್ಟಿದ್ದೆ: ಸುಕೇಶ್‌

ಈ ಹಿಂದಿನ ಪತ್ರಗಳಲ್ಲಿ, ರಾಜ್ಯಸಭೆಗೆ ನಾಮನಿರ್ದೇಶನ ಮಾಡುವುದಾಗಿ ಪಕ್ಷವು ಭರವಸೆ ನೀಡಿದ್ದರಿಂದ ತಾನು ಎಎಪಿಗೆ 50 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ನೀಡಿದ್ದೇನೆ ಎಂದು ಆರೋಪಿ ಚಂದ್ರಶೇಖರ್ ಹೇಳಿದ್ದರು. ಅಲ್ಲದೆ, ಅರವಿಂದ್ ಕೇಜ್ರಿವಾಲ್ ಅವರ ಪಕ್ಷಕ್ಕೆ 500 ಕೋಟಿ ದೇಣಿಗೆ ನೀಡಲು 20 ಕ್ಕೂ ಹೆಚ್ಚು ಜನರನ್ನು ಕರೆತರುವಂತೆ ಒತ್ತಾಯಿಸಲಾಗಿತ್ತು ಎಂದೂ ಸುಖೇಶ್‌ ಚಂದ್ರಶೇಖರ್ ಆರೋಪಿಸಿದ್ದಾರೆ.

ತಿಹಾರ್ ಜೈಲಿನಲ್ಲಿರುವ ಸತ್ಯೇಂದ್ರ ಜೈನ್ ಅವರು 2019 ರಲ್ಲಿ ಜೈಲಿನಲ್ಲಿ ತಮ್ಮ "ಸುರಕ್ಷತೆ"ಗಾಗಿ 10 ಕೋಟಿ ರೂಪಾಯಿಗಳನ್ನು ಸುಲಿಗೆ ಮಾಡಿದ್ದಾರೆ ಎಂದೂ ವಂಚಕ ಚಂದ್ರಶೇಖರ್ ಆರೋಪಿಸಿದ್ದರು. ಚಂದ್ರಶೇಖರ್ ಅವರ ಆರೋಪಗಳ  ಬಳಿಕ ಬಿಜೆಪಿಯು ಎಎಪಿ ಮತ್ತು ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿತ್ತು. ಎಎಪಿ ರಾಷ್ಟ್ರೀಯ ಸಂಚಾಲಕಕ ಅರವಿಂದ್ ಕೇಜ್ರಿವಾಲ್‌ ಅವರನ್ನು "ಮಹಾ ಥಗ್" ಎಂದು ಕರೆದ ಕೇಸರಿ ಪಕ್ಷ, ಅವರ ರಾಜೀನಾಮೆಗೆ ಸಹ ಒತ್ತಾಯಿಸಿತ್ತು. 

ಇದನ್ನೂ ಓದಿ: ಸುಲಿಗೆ ಪ್ರಕರಣದ ಜಾಮೀನು ವಿಚಾರಣೆಗಾಗಿ ಕೋರ್ಟ್‌ಗೆ ಜಾಕ್ವೆಲಿನ್ ಫರ್ನಾಂಡೀಸ್

Latest Videos
Follow Us:
Download App:
  • android
  • ios